ETV Bharat / city

ಹಸಿರು ದೀಪಾವಳಿ ಆಚರಿಸುವಂತೆ ಕರೆ ಕೊಟ್ಟ ಗೃಹ ಸಚಿವರು - ಹಸಿರು ದೀಪಾವಳಿ

ನಾವು ಗಾಂಜಾ, ಡ್ರಗ್ಸ್ ಪ್ರಕರಣದಲ್ಲಿ ಆತನನ್ನು ಅರೆಸ್ಟ್ ಮಾಡಿದ್ವಿ. ತನಿಖೆ ಮಾಡಿದಾಗ ಬಿಟ್ ಕಾಯಿನ್ ವಿಚಾರದಲ್ಲೂ ಈತನ ಪಾತ್ರ ಗೊತ್ತಾಗಿದೆ. ಹೀಗಾಗಿ, ನಾವು ಇಡಿ ಮತ್ತು ಇಂಟರ್ ಪೋಲ್‌ಗೆ ಶಿಫಾರಸು ಮಾಡಿದ್ದೇವೆ. ನಮ್ಮಲ್ಲಿ ಯಾವ ಘಟಾನುಘಟಿ ನಾಯಕರು ಸಂಪರ್ಕದಲ್ಲಿಲ್ಲ..

minister araga jnanendra
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Nov 2, 2021, 1:16 PM IST

Updated : Nov 2, 2021, 2:14 PM IST

ಬೆಂಗಳೂರು : ವಿಧಾನಸೌಧದಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ, ಗೃಹರಕ್ಷಕ ದಳ, ಪೌರ ಸಂರಕ್ಷಣೆ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ ಹಮ್ಮಿಕೊಂಡಿದ್ದ ''ಹಸಿರು ಪಟಾಕಿ ಬಳಸೋಣ, ಸ್ನೇಹ ಪ್ರೀತಿಯ ಹಂಚೋಣ'' ಹೆಸರಿನ ಸಾರ್ವಜನಿಕ ಜಾಗೃತಿ ಜಾಥಾ 2021 ಅನ್ನು ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹಸಿರು ದೀಪಾವಳಿ ಆಚರಿಸುವಂತೆ ಸಾರ್ವಜನಿಕರಿಗೆ ಕರೆಕೊಟ್ಟರು.

ಇಂದು ಪುನೀತ್ ರಾಜ್​​ಕುಮಾರ್ ಅವರಿಗೆ ಕುಟುಂಬದ ಸದಸ್ಯರು ಹಾಲುತುಪ್ಪ ಬಿಡುವ ಕಾರ್ಯ ನೆರವೇರಿಸಿದ್ದಾರೆ. ಕುಟುಂಬದ ಎಲ್ಲ ಕೈಂಕರ್ಯ ಮುಗಿಯಲಿ, ನಂತರ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಅಂತಿಮ ದರ್ಶನಕ್ಕೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 25 ಲಕ್ಷ ಜನ ದರ್ಶನ ಪಡೆದಿದ್ದಾರೆ. ಸಮಾಧಿ ದರ್ಶನಕ್ಕೂ ನಾವು ವ್ಯವಸ್ಥೆ ಮಾಡುತ್ತೇವೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ

ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ : ಬಿಟ್ ಕಾಯಿನ್​ ದಂಧೆಯಲ್ಲಿ ಪ್ರಭಾವಿಗಳನ್ನು ರಕ್ಷಣೆ ಮಾಡ್ತಾರೆ ಅನ್ನೋ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿ, 2018ರಲ್ಲೇ ಯುಬಿ ಸಿಟಿ ಗಲಾಟೆಯಲ್ಲಿ ಈ ಶ್ರೀಕಿ ಸಿಕ್ಕಿದ್ದನಲ್ಲ, ಸಿದ್ದರಾಮಯ್ಯನವರು ಏಕೆ ಅರೆಸ್ಟ್ ಮಾಡಿಲ್ಲ? ಅಂದೇ ಏಕೆ ಆತನನ್ನು ಬಂಧಿಸುವ ಕೆಲಸ ಸಿದ್ದರಾಮಯ್ಯ ಮಾಡಿಲ್ಲ? ಇಬ್ಬರು ಕಾಂಗ್ರೆಸ್​ ನಾಯಕರ ಮಕ್ಕಳ ಜೊತೆ ಸಿಕ್ಕಿಬಿದ್ದಾಗ ಏಕೆ ಅರೆಸ್ಟ್ ಮಾಡಿ ತನಿಖೆ ಮಾಡಿಲ್ಲ? ಎಂದು ಪ್ರಶ್ನಿಸಿದರು.

ನಾವು ಗಾಂಜಾ, ಡ್ರಗ್ಸ್ ಪ್ರಕರಣದಲ್ಲಿ ಆತನನ್ನು ಅರೆಸ್ಟ್ ಮಾಡಿದ್ವಿ. ತನಿಖೆ ಮಾಡಿದಾಗ ಬಿಟ್ ಕಾಯಿನ್ ವಿಚಾರದಲ್ಲೂ ಈತನ ಪಾತ್ರ ಗೊತ್ತಾಗಿದೆ. ಹೀಗಾಗಿ, ನಾವು ಇಡಿ ಮತ್ತು ಇಂಟರ್ ಪೋಲ್‌ಗೆ ಶಿಫಾರಸು ಮಾಡಿದ್ದೇವೆ. ನಮ್ಮಲ್ಲಿ ಯಾವ ಘಟಾನುಘಟಿ ನಾಯಕರು ಸಂಪರ್ಕದಲ್ಲಿಲ್ಲ.

ಆತನ ಜೊತೆಗೆ ಯಾರು ಸಂಪರ್ಕದಲ್ಲಿದ್ದಾರೆ ಅನ್ನೋದನ್ನು ಸ್ಪಷ್ಟವಾಗಿ ಸಿದ್ದರಾಮಯ್ಯನವರು ಹೇಳಲಿ. ಆತನ ಸಂಪರ್ಕದಲ್ಲಿ ಕಾಂಗ್ರೆಸ್​​ನವ್ರೇ ಇರೋದು. ಯಾರನ್ನು ಕೂಡ ರಕ್ಷಣೆ ಮಾಡೋ ಕೆಲಸ ನಾವು ಮಾಡೋದಿಲ್ಲ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ಕಬಿನಿಗೆ ಬಾಗಿನ ಅರ್ಪಿಸಿದ ಸಿಎಂ ಬಸವರಾಜ ಬೊಮ್ಮಾಯಿ

Last Updated : Nov 2, 2021, 2:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.