ಬೆಂಗಳೂರು : ಪ್ರವಾಹದಿಂದ ಮನೆ ಹಾನಿ ಪರಿಹಾರ ಪಡೆದ ಸಂತಸ್ತರ ಮನೆಗಳು ಪುನಃ ಹಾನಿಯಾದರೆ ಪರಿಹಾರಕ್ಕೆ ಪರಿಗಣಿಸುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಸಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಮನೆಗಳು ಹಾನಿಯಾಗಿದ್ದರೆ ಮಾತ್ರ ಪರಿಗಣಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೆಲವು ಜಿಲ್ಲಾಧಿಕಾರಿಗಳು ಸ್ಪಷ್ಟನೆ ಕೋರಿರುವುದರಿಂದ ಈ ಆದೇಶ ಹೊರಡಿಸಲಾಗಿದೆ.
2019, 2020 ಮತ್ತು 2021 ನೇ ಸಾಲಿನಲ್ಲಿ ಅತಿವೃಷ್ಟಿ/ ಪ್ರವಾಹದಿಂದ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರ ಮನೆ ಮತ್ತೆ 2022 ನೇ ಸಾಲಿನಲ್ಲಿ ಹಾನಿಯಾದರೆ ಪರಿಹಾರ ಪಡೆಯಲು ಅರ್ಹರಿರುವುದಿಲ್ಲ. ಆದರೆ, 2019, 2020ನೇ ಸಾಲಿನಲ್ಲಿ ಅಲ್ವಸ್ವಲ್ಪ ಮನೆ ಹಾನಿಯಾದ ಸಿ ಕೆಟಗರಿಯಲ್ಲಿ ಸರ್ಕಾರದಿಂದ 50 ಸಾವಿರ ರೂ. ಪರಿಹಾರ ಪಡೆದಿರುವ ಮನೆಗಳು ಪುನಃ 2022 ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದರೆ ಎ,ಬಿ ಮತ್ತು ಸಿ ಕೆಟಗರಿಯಲ್ಲಿ ಪರಿಹಾರ ಪಾವತಿಸಬಹುದು ಎಂದು ಸರ್ಕಾರ ತಿಳಿಸಿದೆ.
ವಾಸದ ಮನೆಗೆ ನಿಯಮಾನುಸಾರ ಪರಿಹಾರ ಪಾವತಿಯಾಗಲಿದೆ. ಆದರೆ, ಜಮೀನನಲ್ಲಿ ನಿರ್ಮಿಸಿರುವ ಮನೆಗಳು, ಗೋಮಾಳಗಳಲ್ಲಿನ ಮನೆಗಳು ಅನಧಿಕೃತವಾಗಿದ್ದರೆ ಅಫಿಡವಿಟ್ ಪಡೆದು ಒಂದು ಲಕ್ಷ ರೂ. ಪಾವತಿಸಬಹುದು. ವಸತಿ ಯೋಜನೆಯಡಿ ನಿರ್ಮಿಸಿಕೊಂಡು ನೆಲೆಸಿರುವ ಮನೆಗಳು ಪ್ರವಾಹದಿಂದ ಹಾನಿಯಾದರೆ ಸರ್ಕಾರಿ ಆದೇಶದಂತೆ ಎ,ಬಿ ಮತ್ತು ಸಿ ಕೆಟಗರಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಭಾರಿ ಮಳೆ: ಹತ್ತು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ : ಸಾವಿರಾರು ಮಂದಿ ಸ್ಥಳಾಂತರ