ETV Bharat / city

ಏ. 24ರಿಂದ ಪವಿತ್ರ ರಂಜಾನ್ ಉಪವಾಸ ಆರಂಭ: ಇಸ್ಲಾಂ ಧಾರ್ಮಿಕ ಸಂಸ್ಥೆಯಿಂದ ಹಲವು ನಿಯಮ!

ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಇದೇ ತಿಂಗಳ 24ರಿಂದ ಉಪವಾಸ ಆರಂಭ ಹಿನ್ನೆಲೆ ಮುಸ್ಲಿಂ ಸಮುದಾಯದವರಿಗೆ ಇಸ್ಲಾಂ ಧಾರ್ಮಿಕ ಸಂಸ್ಥೆ ಇಮಾರತ್ - ಎ - ಷರಿಯಾ ಹಲವು ನಿಯಮಗಳನ್ನು ಪ್ರಕಟಿಸಿದೆ.

Holy Ramadan Fasting from April 24: Many Rules from the Islamic Religious Organization
ಏಪ್ರಿಲ್ 24 ರಿಂದ ಪವಿತ್ರ ರಂಜಾನ್ ಉಪವಾಸ ಆರಂಭ: ಇಸ್ಲಾಂ ಧಾರ್ಮಿಕ ಸಂಸ್ಥೆಯಿಂದ ಹಲವು ನಿಯಮ...!
author img

By

Published : Apr 14, 2020, 11:36 PM IST

ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಉಪವಾಸ ಇದೇ ತಿಂಗಳ 24ರಿಂದ ಆರಂಭ ಹಿನ್ನೆಲೆ ಮುಸ್ಲಿಂ ಸಮುದಾಯದವರಿಗೆ ಇಸ್ಲಾಂ ಧಾರ್ಮಿಕ ಸಂಸ್ಥೆ ಇಮಾರತ್ - ಎ - ಷರಿಯಾ ಹಲವು ನಿಯಮಗಳನ್ನು ಪ್ರಕಟಿಸಿದೆ.

Holy Ramadan Fasting from April 24: Many Rules from the Islamic Religious Organization
ಏಪ್ರಿಲ್ 24ರಿಂದ ಪವಿತ್ರ ರಂಜಾನ್ ಉಪವಾಸ ಆರಂಭ: ಇಸ್ಲಾಂ ಧಾರ್ಮಿಕ ಸಂಸ್ಥೆಯಿಂದ ಹಲವು ನಿಯಮ!
ಭಾರತ ಲಾಕ್​ಡೌನ್ ಹಿನ್ನೆಲೆಯಲ್ಲಿ ಮುಸ್ಲಿಮರು ಪಾಲಿಸಬೇಕಾದ ನಿಯಮಗಳನ್ನ ಹೊರಡಿಸಲಾಗಿದೆ.‌ ರಂಜಾನ್ ತಿಂಗಳಲ್ಲಿ ಉಪವಾಸ ಇರುವುದನ್ನು ಬಿಡಬೇಡಿ. ಆದರೆ ಎಲ್ಲರೂ ಪ್ರಾರ್ಥನೆಯನ್ನು ಮನೆಯಲ್ಲೇ ನಿರ್ವಹಿಸಿ ಎಂದು ಸಲಹೆ ನೀಡಿದೆ. ಪ್ರಾರ್ಥನೆಯನ್ನು ಮನೆಯ ಸದಸ್ಯರ ಜೊತೆಯೇ ಮಾಡಿ. ಪ್ರಾರ್ಥನೆಗೆ ಅಕ್ಕಪಕ್ಕದ ನಿವಾಸಿಗಳು, ಸಂಬಂಧಿಕರನ್ನು ಆಹ್ವಾನಿಸಬೇಡಿ. ಇಫ್ತಾರ್ ಸಹ ಮನೆಯಲ್ಲೇ ಮಾಡಿ. ಮಸೀದಿಯಲ್ಲಿ ಬೇಡ ಎಂದು ತಿಳಿಸಲಾಗಿದೆ.

ಯಾವುದೇ ಇಫ್ತಾರ್ ಕೂಟ ಆಯೋಜಿಸಬೇಡಿ. ಸಾಮಾಜಿಕ ಅಂತರ ಸೇರಿದಂತೆ ಸರ್ಕಾರದ ಎಲ್ಲಾ ನಿಯಮ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಸೂಚಿಸಿದೆ. ಮುಸ್ಲಿಮರು, ಮುಸ್ಲಿರೇತರರಿಗೆ ನೆರವಾಗಿ, ದಾನ-ಧರ್ಮ ಮಾಡುವಂತೆ ಮನವಿ ಮಾಡಿದೆ. ಪ್ರತಿದಿನ ಬೆಳಗ್ಗೆ ಉಪವಾಸದ ಸಮಯಕ್ಕೆ‌ ಲೌಡ್ ಸ್ಪೀಕರ್​​ಗಳ ಮೂಲಕ ಎಬ್ಬಿಸುವ ವ್ಯವಸ್ಥೆ ನಿಲ್ಲಿಸುವಂತೆಯೂ ಹೇಳಿದೆ. ಇನ್ನು ಮುಸ್ಲಿಂ ಯುವಕರು ಮುಂಜಾನೆ ಅಥವಾ ರಾತ್ರಿ ವೇಳೆ ಬೈಕ್​​ಗಳಲ್ಲಿ ಅಡ್ಡಾಡಬೇಡಿ ಅಂತ ಕೂಡ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.