ETV Bharat / city

ಪಾರ್ಕಿಂಗ್ ವಿಚಾರವಾಗಿ ಹಲ್ಲೆ‌ ನಡೆಸಿದ ಆರೋಪ : ಮಾಜಿ ಶಾಸಕ‌ ಮಾನಪ್ಪ ವಜ್ಜಲ್ ಪುತ್ರನಿಗೆ ನೋಟಿಸ್​​ - ಮಾಜಿ ಶಾಸಕ‌ ಮಾನಪ್ಪ ವಜ್ಜಲ್ ಪುತ್ರನಿಗೆ ನೋಟಿಸ್​​

ಇತ್ತ ದೂರಿಗೆ ಪ್ರತಿ ದೂರು ದಾಖಲಾಗುತ್ತಿದ್ದಂತೆ ಹೈಗ್ರೌಂಡ್ಸ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಎಂಬಸಿ ಹ್ಯಾಬಿಟೇಟ್ ಅಪಾರ್ಟ್ಮೆಂಟ್​​ನಲ್ಲಿ ಒಂದು ಫ್ಲಾಟ್​​ಗೆ ಎರಡು ಕಾರು ನಿಲ್ಲಿಸಲು ಅನುಮತಿಯಿದೆ. ಆದರೆ, ಆಂಜಿನಪ್ಪ ವಜ್ಜಲ್ ಬಳಿ 7 ಐಷಾರಾಮಿ ಕಾರುಗಳಿವೆ ಎನ್ನಲಾಗುತ್ತಿದೆ..

Bangalore
ಸಿಸಿಟಿವಿ ದೃಶ್ಯ
author img

By

Published : Sep 17, 2021, 6:59 PM IST

ಬೆಂಗಳೂರು : ನಿನ್ನೆ (ಗುರುವಾರ) ಭಾರೀ ಸಂಚಲಕ್ಕೆ ಕಾರಣವಾಗಿದ್ದ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರನ ಗಲಾಟೆ ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ವಜ್ಜಲ್ ಪುತ್ರ ಪ್ರತಿದೂರು ದಾಖಲಿಸಿದ್ದಾರೆ. ಇತ್ತ ಪೊಲೀಸರ ತನಿಖೆಯಲ್ಲಿ ಮಾನಪ್ಪ ವಜ್ಜಲ್ ಪುತ್ರನ ಬಗ್ಗೆ ಅನುಮಾನ ಮೂಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.

ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಕ್ರಮ್ ರೈ ಎಂಬುವರು ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ವಿಕ್ರಮ್ ರೈ, ಸೆ.12ರ ರಾತ್ರಿ 10ರ ಸುಮಾರಿಗೆ ಸ್ನೇಹಿತನನ್ನ ಡ್ರಾಪ್ ಮಾಡಲು ಎಂಬಸಿ ಹ್ಯಾಬಿಟೇಟ್ ಅಪಾರ್ಟ್ಮೆಂಟ್ ಬಳಿ ಬಂದಿದ್ದರು.

ಈ ಹಿಂದೆ ಆಂಜಿನಪ್ಪ ವಜ್ಜಲ್ ಎರಡು ಬಾರಿ ಪಾರ್ಕಿಂಗ್ ವಿಚಾರಕ್ಕೆ ವಿಕ್ರಮ್ ರೈ ಜತೆ ಕಿರಿಕ್ ಮಾಡಿಕೊಂಡಿದ್ದರಂತೆ. ಅದೇ ರೀತಿ ಸೆ.12ರಂದು ಕೂಡ ಆಂಜಿನಪ್ಪ ವಜ್ಜಲ್ ತನ್ನ ಆಪ್ತ ಮೌನೀಶ್ ಸೇರಿ 10 ಹುಡುಗರ ಜತೆ ಗಲಾಟೆ ಶುರು ಮಾಡಿದ್ದರಂತೆ. ಬಳಿಕ ಪಂಚ್ ಮಾಡುವ ಆಯುಧದಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಈ ಬಗ್ಗೆ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜಿನಪ್ಪ ವಜ್ಜಲ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇತ್ತ ಆಂಜಿನಪ್ಪ ವಜ್ಜಲ್ ಪ್ರತಿದೂರು ದಾಖಲಿಸಿದ್ದಾರೆ. ಸೆ.12 ರಂದು ಕಾರನ್ನು ತೆಗೆದುಕೊಂಡು ಬಂದಿದ್ದೆ. ವಿಸಿಟರ್ ಪಾರ್ಕಿಂಗ್ ಬಳಿ ವಿಕ್ರಮ್ ರೈ ಹಾಗೂ ಆತನ ಜೊತೆಗಿದ್ದವರು ಕಿರಿಕ್ ಮಾಡಿದ್ದಾರೆ.

ತನ್ನ ಕಾರು ಅಡ್ಡಗಟ್ಟಿ ಸಿಗರೇಟ್ ಹಾಗೂ ಲೈಟರ್ ಕೇಳಿದ್ದರು. ಆಗ ನಾನು ನನ್ನ ಬಳಿ ಸಿಗರೇಟ್ ಇಲ್ಲ, ಲೈಟರ್ ಇದೆ ಎಂದಿದ್ದೆ. ಈ ವೇಳೆ, ವಿಕ್ರಮ್ ಅಂಡ್ ಟೀಂ ಅವಾಚ್ಯ ಶಬ್ಧಗಳಿಂದ ನಿಂದಿಸಿದೆ‌. ಅಲ್ಲದೆ ಜಾತಿ ನಿಂದನೆ ಮಾಡಿ, ಕಪಾಳ ಮೋಕ್ಷ ಮಾಡಿರುವುದಾಗಿ‌ ಆರೋಪಿಸಿ ದೂರು ನೀಡಿದ್ದಾರೆ.

ಆಂಜಿನಪ್ಪ ವಜ್ಜಲ್ ನೀಡಿದ ದೂರಿನ ಅನ್ವಯ, ವಿಕ್ರಮ್ ರೈ ವಿರುದ್ಧ ಪ್ರತಿದೂರು ದಾಖಲಾಗಿದೆ. ಘಟನೆ ಬಗ್ಗೆ ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಅವರು ನೀಡಿದ ದೂರಿನ ಮೇರೆಗೆ ನಾವೂ ದೂರು ನೀಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತ ದೂರಿಗೆ ಪ್ರತಿ ದೂರು ದಾಖಲಾಗುತ್ತಿದ್ದಂತೆ ಹೈಗ್ರೌಂಡ್ಸ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಎಂಬಸಿ ಹ್ಯಾಬಿಟೇಟ್ ಅಪಾರ್ಟ್ಮೆಂಟ್​​ನಲ್ಲಿ ಒಂದು ಫ್ಲಾಟ್​​ಗೆ ಎರಡು ಕಾರು ನಿಲ್ಲಿಸಲು ಅನುಮತಿಯಿದೆ. ಆದರೆ, ಆಂಜಿನಪ್ಪ ವಜ್ಜಲ್ ಬಳಿ 7 ಐಷಾರಾಮಿ ಕಾರುಗಳಿವೆ ಎನ್ನಲಾಗುತ್ತಿದೆ.

ಹೀಗಾಗಿ, ಈತ ಬೇರೆಯವರ ಪಾರ್ಕಿಂಗ್ ಲಾಟ್​​​ಗಳಲ್ಲಿಯೂ ತಮ್ಮ ಕಾರುಗಳನ್ನು ನಿಲ್ಲಿಸುತ್ತಿದ್ದರಂತೆ. ಈ ವಿಚಾರವಾಗಿ ವಿಕ್ರಮ್ ರೈ ಜತೆಗೂ ಗಲಾಟೆಯಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ, ಹೈಗ್ರೌಂಡ್ಸ್ ಪೊಲೀಸರು ಎರಡು ಪ್ರಕರಣಗಳ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ವಿಕ್ರಮ್ ರೈ, ಆಂಜಿನಪ್ಪ ವಜ್ಜಲ್ ಸೇರಿ ಇತರರಿಗೆ ನೋಟಿಸ್ ನೀಡಿದ್ದಾರೆ. ಸದ್ಯ ದೂರು-ಪ್ರತಿದೂರು ದಾಖಲಿಸಿಕೊಂಡು ಹೈಗ್ರೌಂಡ್ಸ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ: ಮಾಜಿ ಶಾಸಕ ಪುತ್ರನಿಂದ ಹಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.