ETV Bharat / city

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಆರೋಪ: ದಾಖಲೆಗಳ ಫೋರೆನ್ಸಿಕ್ ಪರೀಕ್ಷೆಗೆ ಹೈಕೋರ್ಟ್ ಸಮ್ಮತಿ

ದಾಖಲೆಗಳನ್ನು ತಿರುಚಿ, ನಕಲಿ ವ್ಯಾಜ್ಯಗಾರರನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗಳ ಆಸ್ತಿ ಕಬಳಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಹೈಕೋರ್ಟ್(high court) ಸಮ್ಮತಿಸಿದೆ.

high court
ಹೈಕೋರ್ಟ್
author img

By

Published : Nov 16, 2021, 5:36 PM IST

ಬೆಂಗಳೂರು: ನ್ಯಾಯಾಲಯಗಳ ದಾಖಲೆಗಳನ್ನು ತಿರುಚಿ, ನಕಲಿ ವ್ಯಾಜ್ಯಗಾರರನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗಳ ಆಸ್ತಿ ಕಬಳಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(forensic laboratory) ಕಳುಹಿಸಲು ಹೈಕೋರ್ಟ್(high court) ಸಮ್ಮತಿಸಿದೆ.

ನಗರದ ಶಾ ಹರಿಲಾಲ್ ಬಿಕಾಬಾಯಿ ಎಂಬುವವರಿಗೆ ಸೇರಿದ ಆಸ್ತಿಯನ್ನು ಮಾಲೀಕರ ಗಮನಕ್ಕೆ ಬರದೆ ಕೆಲ ವ್ಯಕ್ತಿಗಳು ಕಬಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅಮೈಕಸ್ ಕ್ಯೂರಿ ಶ್ರೀಧರ್ ಪ್ರಭು ವಾದ ಮಂಡಿಸಿ, ಆಸ್ತಿ ಕಬಳಿಕೆ ಪ್ರಕರಣದಲ್ಲಿ ನೋಟರಿ ದಾಖಲೆಗಳನ್ನು ಬಳಸಲಾಗಿದೆ. ಕೆಲ ವಕೀಲರು, ಕೆಲ ನೋಟರಿಗಳು ಶಾಮೀಲಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಇಂತಹ ಅಕ್ರಮಗಳನ್ನು ತಡೆಯಲು ನೋಟರಿ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಅಗತ್ಯವಿದೆ. ನೋಟರಿ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ಅಗತ್ಯವಿದ್ದು, ಕೇಂದ್ರವನ್ನೂ ಪ್ರಕರಣದಲ್ಲಿ ಪ್ರತಿವಾದಿಯಾಗಿಸಬೇಕು ಎಂದು ಕೋರಿದರು.

ವಾದ ಆಲಿಸಿದ ಪೀಠ, ಅಂತಿಮ ಆದೇಶದ ವೇಳೆ ಈ ಬಗ್ಗೆ ಪರಿಗಣಿಸುವುದಾಗಿ ತಿಳಿಸಿತಲ್ಲದೇ, ಸದ್ಯಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ದಾಖಲೆಗಳನ್ನು ಪರೀಕ್ಷಿಸಲು ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತನಿಖಾಧಿಕಾರಿಗಳಿಗೆ ಅನುಮತಿ ನೀಡಿತು. ಹಾಗೆಯೇ, ತನಿಖೆ ಪ್ರಗತಿ ವರದಿ ಸಲ್ಲಿಸಲು ಸಿಐಡಿ ಪೊಲೀಸರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.

ಹಿನ್ನೆಲೆ:

ನಗರದ ಯಶವಂತಪುರದಲ್ಲಿ ಶಾ ಹರಿಲಾಲ್ ಬಿಕಾಬಾಯಿ ಎಂಬುವರ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ, ಅದರ ಒಡೆತನಕ್ಕೆ ಸಂಬಂಧಿಸಿದಂತೆ ದಾವೆ ಹೂಡಿ, ನಕಲಿ ಪಕ್ಷಗಾರರ ಮೂಲಕ ಡಿಕ್ರಿ ಮಾಡಿಕೊಂಡು ಆಸ್ತಿ ಕಬಳಿಸುವ ಪ್ರಯತ್ನ ನಡೆದಿತ್ತು. ಒಂದೇ ತಿಂಗಳಲ್ಲಿ ನಕಲಿ ಮಾಲೀಕರು, ನಕಲಿ ಬಾಡಿಗೆದಾರರೊಂದಿಗೆ ರಾಜಿ ಸಂಧಾನ ಮಾಡಿಕೊಂಡು ಕೇಸನ್ನು ಇತ್ಯರ್ಥ ಪಡಿಸಿಕೊಂಡು ಇದಕ್ಕೆ ಕೋರ್ಟ್ ಡಿಕ್ರಿ ಪಡೆದಿದ್ದರು. ನಂತರ ಈ ಡಿಕ್ರಿ ಬಳಸಿ ಮೂಲ ಮಾಲೀಕರನ್ನೇ ಸ್ವಾಧೀನದಿಂದ ಹೊರಹಾಕಲು ಯತ್ನಿಸಿದ್ದರು.

ಇದನ್ನೂ ಓದಿ: ಮದುವೆಯಾದ ಜೋಡಿಗೆ ಅಪ್ಪು-ಅಂಬೇಡ್ಕರ್ ಭಾವಚಿತ್ರ ನೀಡಿ ಹಾರೈಸಿದ ಸ್ನೇಹಿತರು..

ಇದನ್ನು ಪ್ರಶ್ನಿಸಿ ಅಸಲಿ ಮಾಲೀಕರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರು ಪ್ರಕರಣವನ್ನು ಸಿಐಡಿ ತನಿಖೆಗೆ ನಿರ್ದೇಶಿಸಿದ್ದರು. ಪ್ರಕರಣದಲ್ಲಿ ವಕೀಲರು ಭಾಗಿಯಾಗಿದ್ದ ಆರೋಪ ಇದ್ದುದರಿಂದ ಹಾಗೂ ಪ್ರಕರಣ ನ್ಯಾಯಾಲಯಕ್ಕೆ ಸಂಬಂಧಿಸಿದ್ದರಿಂದ ಹೈಕೋರ್ಟ್ ವಿಭಾಗೀಯ ಪೀಠ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.