ETV Bharat / city

ಜಮನ್​ಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂ ವಿವಾದ:ನ್ಯಾಯಾಧಿಕರಣ ಆದೇಶ ರದ್ದುಗೊಳಿಸಿದ ಹೈಕೋರ್ಟ್ - ಭೂ ಸುಧಾರಣಾ ಕಾಯ್ದೆ

ಭೂ ನ್ಯಾಯಾಧಿಕರಣ ಹೈಕೋರ್ಟ್​​ನ ನಿರ್ದೇಶನಗಳನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ರಾಜ್ಯ ಸರ್ಕಾರ ಭೂ ನ್ಯಾಯಾಧಿಕರಣಗಳನ್ನು ಸರಿಪಡಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದೆ.

high court order on jamanlal bajaj trus
ಜಮನ್​ಲಾಲ್ ಬಜಾಜ್ ಸೇವಾ ಟ್ರಸ್ಟ್ ಭೂ ವಿವಾದ : ನ್ಯಾಯಾಧಿಕರಣ ಆದೇಶ ರದ್ದುಗೊಳಿಸಿದ ಹೈಕೋರ್ಟ್
author img

By

Published : Jul 4, 2021, 12:26 AM IST

ಬೆಂಗಳೂರು : ಜಮನ್‌ ಲಾಲ್ ಬಜಾಜ್ ಸೇವಾ ಟ್ರಸ್ಟ್ ಹೆಚ್ಚುವರಿಯಾಗಿ ಹೊಂದಿದೆ ಎನ್ನಲಾದ 354.10 ಎಕರೆ ಭೂಮಿಯನ್ನು ವಾಪಸ್ ನೀಡಬೇಕೆಂದು ಭೂ ನ್ಯಾಯಾಧಿಕರಣ 2017ರಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಹೆಚ್ಚುವರಿ ಭೂಮಿ ಹೊಂದಿದೆ ಎಂಬ ಕಾರಣ ನೀಡಿ, 354 ಎಕರೆ 10 ಗುಂಟೆ ಜಮೀನು ಸ್ವಾಧೀನಕ್ಕೆ ಭೂ ನ್ಯಾಯಮಂಡಳಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಜಮನ್‌ ಲಾಲ್ ಬಜಾಜ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯಪೀಠ ಈ ತೀರ್ಪು ನೀಡಿದೆ.

ಟ್ರಸ್ಟ್​​ನ ಅರ್ಜಿಯನ್ನು ಮಾನ್ಯ ಮಾಡಿರುವ ಪೀಠ, ಭೂ ನ್ಯಾಯಮಂಡಳಿ 2017ರ ನವೆಂಬರ್ 28ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೆ, ಭೂ ಸುಧಾರಣಾ ಕಾಯ್ದೆ ಸೆಕ್ಷನ್ 2 (18)ರ ಪ್ರಕಾರ ಆ ಹೆಚ್ಚುವರಿ ಭೂಮಿ ಕೃಷಿ ಭೂಮಿಯಲ್ಲ. ಹೀಗಾಗಿ, ಸರ್ಕಾರ 2017ರಲ್ಲಿ ವಶಪಡಿಸಿಕೊಂಡಿದ್ದ ಟ್ರಸ್ಟ್​​ಗೆ ಸೇರಿದ ಜಾಗವನ್ನು ಬಿಟ್ಟುಕೊಡಬೇಕು ಎಂದು ಆದೇಶಿಸಿದೆ.

ಇದನ್ನೂ ಓದಿ: UNLOCK 3.0 ಮುಖ್ಯಾಂಶಗಳು: ಜುಲೈ 5 ರಿಂದ ರಾಜ್ಯದಲ್ಲಿ ಯಾವುದಕ್ಕೆಲ್ಲಾ ಅವಕಾಶ?

ಅಲ್ಲದೇ, ಭೂ ನ್ಯಾಯಾಧಿಕರಣ ಹೈಕೋರ್ಟ್​​ನ ನಿರ್ದೇಶನಗಳನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ರಾಜ್ಯ ಸರ್ಕಾರ ಭೂ ನ್ಯಾಯಾಧಿಕರಣಗಳನ್ನು ಸರಿಪಡಿಸಲು ಪ್ರಯತ್ನಿಸಬೇಕು ಎಂದು ಹೇಳಿ, ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಡುವಂತೆ ರಿಜಿಸ್ಟ್ರಾರ್ ಜನರಲ್​ಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ : ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದ ನಂತರ ಟ್ರಸ್ಟ್ ತನ್ನ ಒಡೆತನದಲ್ಲಿರುವ ಬೆಂಗಳೂರಿನ ಹೊರವಲಯದಲ್ಲಿರುವ ಜಮೀನಿನ ವಿವರವನ್ನು 1974ರ ಡಿಸೆಂಬರ್ 31 ಮತ್ತು 1975ರ ಜನವರಿ 2ರಂದು ನಮೂನೆ 11ರ ಮೂಲಕ ಕಂದಾಯ ಇಲಾಖೆಗೆ ಸಲ್ಲಿಸಿತ್ತು. ಕಾಯ್ದೆ ಮಿತಿಗಿಂತ ಹೆಚ್ಚುವರಿ ಭೂಮಿಯನ್ನು ಟ್ರಸ್ಟ್ ಹೊಂದಿದ್ದ ಕಾರಣ, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಭೂ ನ್ಯಾಯಮಂಡಳಿ, ಟ್ರಸ್ಟ್ 213.20 ಎಕರೆ ಹೆಚ್ಚುವರಿ ಭೂಮಿ ಹೊಂದಿದ್ದು, ಅದನ್ನು ಸರ್ಕಾರಕ್ಕೆ ಮರಳಿಸಬೇಕು ಎಂದು 2010ರಲ್ಲಿ ಆದೇಶ ನೀಡಿತ್ತು.

ನ್ಯಾಯಮಂಡಳಿಯ ಈ ಆದೇಶ ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಭೂ ನ್ಯಾಯಮಂಡಳಿಯೇ ಪ್ರಕರಣವನ್ನು ಪುನರ್‌ ಪರಿಶೀಲಿಸಿ, ನಿರ್ಧರಿಸಬೇಕು ಎಂದು 2014ರ ಮಾರ್ಚ್ 3ರಂದು ಆದೇಶ ಹೊರಡಿಸಿತ್ತು. ಅದರಂತೆ ಉಪವಿಭಾಗಾಕಾರಿ ಅವರನ್ನೊಳಗೊಂಡ ಭೂ ನ್ಯಾಯಮಂಡಳಿ ವಿಚಾರಣೆ ನಡೆಸಿ, ಭೂಸುಧಾರಣಾ ಕಾಯ್ದೆಯ ಮಿತಿಗಿಂತ ಟ್ರಸ್ಟ್ ಹೆಚ್ಚುವರಿಯಾಗಿ 354 ಎಕರೆ ಭೂಮಿ ಹೊಂದಿದೆ. ಹೀಗಾಗಿ, ಅದನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಮತ್ತೆ ಹೈಕೋರ್ಟ್ ಮೆಟ್ಟಿಲೇರಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.