ETV Bharat / city

ಬಿಬಿಎಂಪಿಯ ಸ್ಥಾಯಿ ಸಮಿತಿ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ - ಬಿಬಿಎಂಪಿ ಸ್ಥಾಯಿ ಸಮಿತಿ

ಬಿಬಿಎಂಪಿಯ ಸ್ಥಾಯಿ ಸಮಿತಿ ಅಧಿಕಾರ ಅವಧಿ ಪೂರ್ಣಗೊಳ್ಳುವ ಮುನ್ನವೇ 12 ಸ್ಥಾಯಿ ಸಮಿತಿಯ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಚುನಾವಣಾ ಅಧಿಸೂಚನೆಗೆ ಹೈಕೊರ್ಟ್ ತಡೆ ನೀಡಿದೆ. ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಚುನಾವಣಾ ಅಧಿಸೂಚನೆ ರದ್ದು ಕೋರಿ ಇಮ್ರಾನ್ ಪಾಷಾ ಅವರು ಸೇರಿ 12 ಸ್ಥಾಯಿ ಕಮಿಟಿಗಳ ಅಧ್ಯಕ್ಷರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಿನ್ನೆ ಹೈಕೋರ್ಟ್​ನ ಏಕಸದಸ್ಯ ಪೀಠದಲ್ಲಿ ನಡೆಯಿತು.

ಹೈಕೋರ್ಟ್
author img

By

Published : Sep 28, 2019, 6:24 AM IST

ಬೆಂಗಳೂರು: ಬಿಬಿಎಂಪಿಯ ಸ್ಥಾಯಿ ಸಮಿತಿಯ ಅಧಿಕಾರ ಅವಧಿ ಪೂರ್ಣಗೊಳ್ಳುವ ಮುನ್ನವೇ 12 ಸ್ಥಾಯಿ ಸಮಿತಿಯ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಚುನಾವಣಾ ಅಧಿಸೂಚನೆಗೆ ಹೈಕೊರ್ಟ್ ತಡೆಯಾಜ್ಞೆ ನೀಡಿದೆ.

ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಚುನಾವಣಾ ಅಧಿಸೂಚನೆ ರದ್ದು ಕೋರಿ ಇಮ್ರಾನ್ ಪಾಷಾ ಅವರು ಸೇರಿ 12 ಸ್ಥಾಯಿ ಕಮಿಟಿಗಳ ಅಧ್ಯಕ್ಷರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಿನ್ನೆ ಹೈಕೋರ್ಟ್​ನ ಏಕಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಅಧಿಕಾರ ಅವಧಿ ಡಿಸೆಂಬರ್ 4ಕ್ಕೆ ಅಂತ್ಯಗೊಳ್ಳಲ್ಲಿದೆ. ಆದರೆ, ಅಕ್ಟೋಬರ್ 1ರಂದು ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಜೊತೆಗೆ ಸ್ಥಾಯಿ ಸಮಿತಿಗಳ ಸದಸ್ಯರ‌ ಆಯ್ಕೆಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ತಡೆ ನೀಡಬೇಕು. ಸ್ಥಾಯಿ ಸಮಿತಿ ಅಧಿಕಾರ ಅವಧಿ ಪೂರ್ಣಗೊಳ್ಳುವವರೆಗೆ ಹಾಲಿ ಇರುವ ಸ್ಥಾಯಿ ಸಮಿತಿ ಮುಂದುವರೆಸಬೇಕೆಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಾಮೂರ್ತಿ ಅವರು, ಅವಧಿಗೂ ಮುನ್ನ ಚುನಾವಣೆ ನಡೆಸಲು ಹೊರಟ ಸರ್ಕಾರದ ವಿರುದ್ಧ ಗರಂ ಆದರು. ಅವಧಿ ಪೂರ್ವ ಚುನಾವಣೆ ನಡೆಸಲು ಆದೇಶ ಹೊರಡಿಸುವ ಅಧಿಕಾರ ಸರ್ಕಾರ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಕ್ಟೋಬರ್ 1ಕ್ಕೆ ನಿಗದಿಯಾಗಿದ್ದ ಸ್ಥಾಯಿ ಸಮಿತಿಗಳ ಚುನಾವಣೆಗೆ ತಡೆಯಾಜ್ಞೆ ನೀಡಿತು. ಆಕ್ಷೇಪಣೆ ಸಲ್ಲಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಯಿತು.

Intro:ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಗೆ ಹೈಕೋರ್ಟ್ ತಡೆ

ಬೆಂಗಳೂರು:

ಬಿಬಿಎಂಪಿಯ ಸ್ಥಾಯಿ ಸಮಿತಿಯ ಅಧಿಕಾರ ಅವಧಿ ಪೂರ್ಣಗೊಳಿಸುವ ಮುನ್ನ 12 ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಚುನಾವಣೆಗೆ ಹೈಕೊರ್ಟ್ ತಡೆ ನೀಡಿದೆ.

ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಚುನಾವಣಾ ಅಧಿಸೂಚನೆ ರದ್ದು ಕೋರಿ ಇಮ್ರಾನ್ ಪಾಷಾ ಸೇರಿ 12 ಸ್ಥಾಯಿ ಕಮಿಟಿಗಳ ಅಧ್ಯಕ್ಷರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆಯಿತು.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ಬಿಬಿಎಂಪಿಯ 12ಸ್ಥಾಯಿ ಸಮಿತಿಯ ಅಧಿಕಾರ ಅವಧಿ ಡಿಸೆಂಬರ್ 4ಕ್ಕೆ ಅಂತ್ಯಗೊಳಲ್ಲಿದೆ. ಆದರೆ ಅಕ್ಟೋಬರ್ 1ರಂದು ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಜೊತೆಗೆ ಸ್ಥಾಯಿ ಸಮಿತಿಗಳ ಸದಸ್ಯರ‌ ಆಯ್ಕೆಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ ಇದಕ್ಕೆ ತಡೆ ನೀಡಬೇಕು. ಸ್ಥಾಯಿ ಸಮಿತಿ ಅಧಿಕಾರ ಅವಧಿ ಪೂರ್ಣಗೊಳ್ಳುವವರೆಗೆ ಹಾಲಿ ಇರುವ ಸ್ಥಾಯಿ ಸಮಿತಿ ಮುಂದುವರೆಸಬೇಕೆಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಾಲಯ ಅವಧಿಗೂ ಮುನ್ನ ಚುನಾವಣೆ ನಡೆಸಲು ಹೊರಟ ಸರ್ಕಾರದ ವಿರುದ್ಧ ಗರಂ ಆಯಿತು.ಅವಧಿ ಪೂರ್ವ ಚುನಾವಣೆ ನಡೆಸಲು ಆದೇಶ ಹೊರಡಿಸುವ ಅಧಿಕಾರ ಸರ್ಕಾರ ಹಾಗು ಪ್ರಾದೇಶಿಕ ಆಯುಕ್ತರಿಗೆ ಇಲ್ಲ ಎಂದು ಸ್ಪಷ್ಟಪಡಿಸಿ ಅಕ್ಟೋಬರ್ 1 ಕ್ಕೆ ನಿಗದಿಯಾಗಿದ್ದ ಸ್ಥಾಯಿ ಸಮಿತಿಗಳ ಚುನಾವಣೆಗೆ ತಡೆಯಾಜ್ಞೆ ನೀಡಿತು.ಆಕ್ಷೇಪಣೆ ಸಲ್ಲಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತು.Body:KN_BNG_10_BBMP_7204498Conclusion:KN_BNG_10_BBMP_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.