ETV Bharat / city

ಜೈಲಿಂದ ಹೊರ ಬಂದ ಡಿಕೆಶಿ: ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿಗಳು ಹಾಗೂ ಹೆಬ್ಬಾಳ್ಕರ್​​​​​ ಸಹೋದರ - ಡಿ.ಕೆ ಶಿವಕುಮಾರ ಬಿಡುಗಡೆಗೆ ಬೆಳಗಾವಿಯಲ್ಲಿ ಸಂಭ್ರಮಾಚರಣೆ

ಡಿ.ಕೆ.ಶಿವಕುಮಾರ್​​ ಜೈಲಿನಿಂದ ಹೊರ ಬಂದ ಹಿನ್ನೆಲೆ ಅವರ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದು, ಇಂದು ಬೆಳಗಾವಿ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಹೆಬ್ಬಾಳ್ಕರ್ ಸಹೋದರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿ 105 ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.

D K Shivkumar Release in Belgaum
author img

By

Published : Oct 27, 2019, 3:20 PM IST

ಬೆಳಗಾವಿ: ಡಿ.ಕೆ.ಶಿವಕುಮಾರ್​​ ಜೈಲಿನಿಂದ ಹೊರ ಬಂದ ಹಿನ್ನೆಲೆ ಅವರ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದು, ಇಂದು ಬೆಳಗಾವಿ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಹೆಬ್ಬಾಳ್ಕರ್ ಸಹೋದರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿ 105 ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.

ಡಿಕೆಶಿ ಬಿಡುಗಡೆಗೆ ಸಂಭ್ರಮಾಚರಣೆ ಮಾಡಿದ ಹೆಬ್ಬಾಳ್ಕರ್ ಸಹೋದರ

ನಗರದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪಟಾಕಿ ಒಡೆದು ಸಿಹಿ ಹಂಚಿ ದೇವರಿಗೆ ಹರಕೆ ತೀರಿಸಿದರು. ಇದೇ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಕೂಡ ಭಾಗವಹಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ತಿಳಿಸಿದರು.

ನಂತರ ಮಾತನಾಡಿದ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್, ಡಿ.ಕೆ.ಶಿವಕುಮಾರ್​ ಒಬ್ಬ ಪ್ರಾಮಾಣಿಕ ರಾಜಕಾರಣಿ. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಅಪಾರವಾಗಿದೆ. ಜೈಲಿನಿಂದ ಹೊರ ಬಂದ ಕಾರಣ ದೇವರಿಗೆ ಪೂಜೆ ಮಾಡಲಾಗಿದೆ. ಜೊತೆಗೆ ಅವರ ಮುಂದಿನ ಕಾನೂನು ಹೋರಾಟಗಳಲ್ಲಿ ಜಯಶಾಲಿ ಆಗಲಿ ಎಂದು ಹಾರೈಸಿದರು.

Intro:ಡಿಕೆ ಶಿವಕುಮಾರ್ ಬಿಡುಗಡೆ : ಬೆಳಗಾವಿಯಲ್ಲಿ 105 ತೆಂಗಿನಕಾಯಿ ಒಡೆದ ಹೆಬ್ಬಾಳ್ಕರ್ ಸಹೋದರ

ಬೆಳಗಾವಿ : ಜೈಲಿನಿಂದ ಹೊರಬಂದ ಡಿಕೆ ಶಿವಕುಮಾರ ಅವರ ಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದು. ಇಂದು ಬೆಳಗಾವಿ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಹೆಬ್ಬಾಳ್ಕರ್ ಸಹೋದರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿ 105 ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.

Body:ನಗರದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹೊಡೆದು ಸಿಹಿ ಹಂಚಿ 105 ತೆಂಗಿನಕಾಯಿ ಒಡೆಯುವ ಮುಖಾಂತರ ದೇವರಿಗೆ ಹರಕೆ ತೀರಿಸಿದರು. ಇದೇ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಕೂಡ ಭಾಗವಹಿಸಿ ಡಿ.ಕೆ ಶಿವಕುಮಾರ್ ಅವರಿಗೆ ಅಭಿನಂದನೆ ತಿಳಿಸಿದರು.

Conclusion:ನಂತರ ಮಾತನಾಡಿದ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್. ಡಿ.ಕೆ ಶಿವಕುಮಾರ ಒಬ್ಬ ಪ್ರಾಮಾಣಿಕ ರಾಜಕಾರಣಿ ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಅಪಾರವಾದದ್ದು. ಅದರು ಜೈಲಿನಿಂದ ಹೊರಬಂದ ಕಾರಣ ದೇವರಿಗೆ ಪೂಜೆ ಮಾಡಲಾಗಿದೆ. ಜೊತೆಗೆ ಅವರ ಮುಂದಿನ ಕಾನೂನು ಹೋರಾಟಗಳಲ್ಲಿ ಜಯಶಾಲಿ ಆಗಲಿ ಎಂದು ತಿಳಿಸಿದರು.

ವಿನಾಯಕ ಮಠಪತಿ
ಬೆಳಗಾವಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.