ETV Bharat / city

ಸಿಂಗನಾಯಕನಹಳ್ಳಿ ಕೆರೆ ಪುನಶ್ಚೇತನಕ್ಕೆ 6,316 ಮರಗಳಿಗೆ ಕೊಡಲಿ; ಪರಿಸರ ಪ್ರೇಮಿಗಳ ವಿರೋಧ - ಬೆಂಗಳೂರು

ಹೆಬ್ಬಾಳ–ನಾಗವಾರ ಕಣಿವೆ ಯೋಜನೆಗಾಗಿ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಮುಂದ್ದಾಗಿದ್ದು, ಕೆರೆಯ ಅಂಗಳದಲ್ಲಿರುವ 6,316 ಮರಗಳನ್ನು ಕಡಿಯಲು ನಿರ್ಧಾರ ಮಾಡಿದೆ. ಇದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Hebbal - Nagawara Valley Project issues; social activists opposing to cut 6,316 trees
ಸಿಂಗನಾಯಕನಹಳ್ಳಿ ಕೆರೆ ಪುನಶ್ಚೇತನಕ್ಕೆ 6,316 ಮರಗಳಿಗೆ ಕೊಡಲಿ; ಪರಿಸರ ಪ್ರೇಮಿಗಳ ವಿರೋಧ
author img

By

Published : Jun 23, 2021, 2:01 AM IST

ಯಲಹಂಕ : ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಕೆರೆಗಳಿಗೆ ನೀರು ತುಂಬಿಸುವ ಹೆಬ್ಬಾಳ–ನಾಗವಾರ ಕಣಿವೆ ಯೋಜನೆ ಪ್ರಗತಿಯಲ್ಲಿದೆ, ಇದಕ್ಕಾಗಿ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಮುಂದ್ದಾಗಿದ್ದು, ಇದರಿಂದ ಕೆರೆಯ ಅಂಗಳದಲ್ಲಿರುವ 6,316 ಮರಗಳನ್ನ ಕಡಿಯಲು ಮುಂದಾಗಿದ್ದಾರೆ. ಮರಗಳ ಕಟಾವ್‌ಗೆ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಯಲು ಸೀಮೆಯ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 65 ಕೆರೆಗಳಿಗೆ ನೀರು ತುಂಬಿಸಲು ಹೆಬ್ಬಾಳ–ನಾಗವಾರ ಕಣಿವೆ ಯೋಜನೆಯನ್ನ ಸರ್ಕಾರ ಜಾರಿ ಮಾಡಿದೆ. ಹೆಬ್ಬಾಳ - ನಾಗವಾರ ಕಣಿವೆ ಯೋಜನೆಯಲ್ಲಿ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೆರೆಗಳನ್ನು ತುಂಬಿಸಲಾಗುವುದು. ಇದರಿಂದ ಅಂತರ್ಜಲ ವೃದ್ಧಿಯಾಗಿ ಬಯಲು ಸೀಮೆಯ ನೀರಿನ ಬರ ಬಗೆಹರಿಯಲಿದೆ. ಈ ಯೋಜನೆಗೆ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಕೆರೆಯನ್ನ ಆಯ್ಕೆ ಮಾಡಲಾಗಿದೆ.

ಸಿಂಗನಾಯಕನಹಳ್ಳಿ ಕೆರೆ ಪುನಶ್ಚೇತನಕ್ಕೆ 6,316 ಮರಗಳಿಗೆ ಕೊಡಲಿ; ಪರಿಸರ ಪ್ರೇಮಿಗಳ ವಿರೋಧ

ಈ ಕೆರೆಯು ಸಿಂಗನಾಯಕನಹಳ್ಳಿ ಅಮಾನಿ ಕೆರೆ ಗ್ರಾಮದ ಸರ್ವೆ ನಂಬರ್‌ 33, ನಾಗದಾಸನಹಳ್ಳಿ ಗ್ರಾಮದ ಸರ್ವೆ ನಂಬರ್‌ 39, ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್‌ 12, ಅದ್ದಿಗಾನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 7ರ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. 400 ಎಕರೆಗಳಷ್ಟು ವ್ಯಾಪಿಸಿರುವ ಕೆರೆಯಂಗಳದಲ್ಲಿ ಜಾಲಿ, ನೇರಳೆ, ಬೇವು, ನೀಲಗಿರಿ, ಸಿಹಿ ಹುಣಸೆ, ಅಕೇಶಿಯಾ, ಹೊಂಗೆ, ಶಿವಾನಿ ಸೇರಿದಂತೆ 6,316 ಮರಗಳಿವೆ. ಈ ಮರಗಳಿಂದ 403.211 ಘನ ಮೀ. ನಾಟಾ ಹಾಗೂ 3,46,915 ಕೆ.ಜಿ ಸೌದೆ ಲಭಿಸುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದು, ಮರಗಳ ತೆರವಿಗೆ ಅನುಮತಿ ಕೋರಿ ಸಣ್ಣ ನೀರಾವರಿ ಇಲಾಖೆಯು ಅರಣ್ಯ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದೆ.

ಇದನ್ನೂ ಓದಿ: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ರಮೇಶ್ ಜಾರಕಿಹೊಳಿ‌: ಫಡ್ನವಿಸ್ ನೀಡಿದ ಅಭಯವೇನು?

ಮರಗಳನ್ನು ಕಡಿಯಲು ಪರಿಸರ ಪ್ರೇಮಿಗಳಿಂದ ವಿರೋಧ
ಮರಗಳನ್ನು ಕಡಿಯಲು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಸಿಂಗನಾಯಕನಹಳ್ಳಿ ಕೆರೆಯಂಗಳದಲ್ಲಿ 30 ವರ್ಷಗಳಿಂದ ಸಣ್ಣದೊಂದು ಕಾಡು ರೂಪುಗೊಂಡಿದೆ. ಇಲ್ಲಿನ ಸಣ್ಣ ಕಾಡಿನಲ್ಲಿ 40ಕ್ಕೂ ಅಧಿಕ ನವಿಲುಗಳಿವೆ. ಇಲ್ಲಿಯೇ ಮೊಟ್ಟೆ ಇಟ್ಟು ನವಿಲುಗಳು ವಂಶೋಭಿವೃದ್ಧಿ ಮಾಡುತ್ತಿವೆ. ಇದರ ಜೊತೆ ನರಿ ಮತ್ತು ಮೊಲಗಳು ಸಹ ಆಶ್ರಯ ಪಡೆದಿವೆ. ಸುತ್ತಮುತ್ತಲಿನ ಗ್ರಾಮಸ್ಥರ ಜಾನುವಾರುಗಳಿಗೆ ಮೇವಿನ ತಾಣವೂ ಇದಾಗಿದೆ. ಮರಗಳನ್ನ ಕಟಾವ್ ಮಾಡುವುದರಿಂದ ಜೈವಿಕ ಪರಿಸರದ ಮೇಲೆ ಪರಿಣಾಮ ಬೀರಲಿದೆ. ಪರಿಸರ ವ್ಯವಸ್ಥೆ ಮತ್ತು ಜೀವ ವೈವಿಧ್ಯವನ್ನು ಉಳಿಸಿಕೊಂಡು ಕೆರೆಯ ಅಭಿವೃದ್ಧಿ ಮಾಡಿ ಅನ್ನುವುದು ಪರಿಸರ ಪ್ರೇಮಿಗಳ ವಾದವಾಗಿದೆ.

ಸ್ಥಳೀಯ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಪರಿಸರ ಪ್ರೇಮಿಗಳ ವಾದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಜಾಲಿ ಮತ್ತು ಅಕೇಶಿಯಾ ಮರಗಳಿಂದ ಕೆರೆ ಹಾಳಾಗಿದೆ. ಕೆರೆಯ ಮುಕ್ಕಾಲು ಭಾಗ ಜಾಲಿಯ ಮರಗಳಿಂದ ತುಂಬಿದೆ. ಒಮ್ಮೆ ಕೆರೆ ತುಂಬಿದರೆ ಜಾಲಿ ಮರಗಳು ಒಣಗಿ ಹೋಗುತ್ತೆ ಇದರಿಂದ ತೆರವು ಮಾಡಲು ಅಸಾಧ್ಯವಾಗುತ್ತೆ. ಅರ್ಕಾವತಿ ಪುನಶ್ಚೇತನಕ್ಕೆ ಪಾದಯಾತ್ರೆ ಮಾಡಿದವರು, ಕೆರೆಗಳ ಅಭಿವೃದ್ಧಿಗೆ ಪಣತೊಟ್ಟವರು ನಾವು. ಪರಿಸರ ಪ್ರೇಮಿಗಳು ಕಾಡಿಗೆ ಹೋಗಿ ಕೆಲಸ ಮಾಡಲಿಯೆಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕೇರಳ, ಮಹಾರಾಷ್ಟ್ರ ಸೇರಿ ದೇಶದಲ್ಲಿ 22 Delta+ ರೂಪಾಂತರ ಪತ್ತೆ: ರಾಜೇಶ್ ಭೂಷಣ್​ ಮಾಹಿತಿ

ಕೆರೆಗೆ ನೀರು ಬಂದರೆ ಸುತ್ತಮುತ್ತಲಿನ ಅಂತರ್ಜಲ ವೃದ್ಧಿಯಾಗುತ್ತದೆ. ಕೃಷಿ ಕ್ಷೇತ್ರ ಅಭಿವೃದ್ಧಿಯಾಗುತ್ತೆ ಅನ್ನುವುದು ಸ್ಥಳೀಯರ ವಾದ, ಪರಿಸರ ಪ್ರೇಮಿಗಳ ಮನವಿಗೆ ಸ್ಪಂದಿಸಿರುವ ಅರಣ್ಯ ಇಲಾಖೆ ಮರಗಳ ಸ್ಥಳಾಂತರ ಮಾಡಿ ಬೇರೆಡೆ ನಾಟಿ ಮಾಡುವ ಆಲೋಚನೆ ನಡೆಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.