ETV Bharat / city

ಪದವಿ ಕಾಲೇಜು ಆರಂಭ: ಕಾಲೇಜಿನಲ್ಲೇ ಲಸಿಕೆ ನೀಡಲು ಮುಂದಾದ ಆರೋಗ್ಯ ಇಲಾಖೆ - ಕೋವಿಡ್ ಲಸಿಕಾ ಕಾರ್ಯ ನಡೆಸಲು NHM ನಿರ್ದೇಶಕಿ ಅರುಂಧತಿ ಆದೇಶ

ಪದವಿ ಕಾಲೇಜು ಆರಂಭಕ್ಕೆ ಸರ್ಕಾರ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕಾ ಕಾರ್ಯ ನಡೆಸಲು ನ್ಯಾಷನಲ್ ಹೆಲ್ತ್ ಮಿಷನ್‌ ನಿರ್ದೇಶಕಿ ಅರುಂಧತಿ ಆದೇಶ ಹೊರಡಿಸಿದ್ದಾರೆ.

Bangalore
ಪದವಿ ಕಾಲೇಜಿಲ್ಲೇ ಲಸಿಕೆ ನೀಡಲು ಮುಂದಾದ ಆರೋಗ್ಯ ಇಲಾಖೆ
author img

By

Published : Jun 24, 2021, 12:01 PM IST

ಬೆಂಗಳೂರು: ಪದವಿ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಕಾಲೇಜಿನಲ್ಲಿ ವ್ಯಾಕ್ಸಿನೇಷನ್ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಗೆ ವ್ಯಾಕ್ಸಿನೇಷನ್‌ ಮಾಡಲು ತೀರ್ಮಾನಿಸಲಾಗಿದೆ.

Bangalore
ಆದೇಶ ಪ್ರತಿ

ಆದೇಶದಲ್ಲಿರುವ ಅಂಶಗಳಿವು..

  • ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಪದವಿ, ಡಿಪ್ಲೋಮಾ, ಐಟಿ ಕಾಲೇಜುಗಳ ಪಟ್ಟಿಯನ್ನು ಪಡೆಯಬೇಕು.
  • ಎಲ್ಲಾ ಕಾಲೇಜಿನ 18 ವರ್ಷ ಮೇಲ್ಪಟ್ಟ ಅರ್ಹರ ಪಟ್ಟಿಯನ್ನು ಆರೋಗ್ಯ ಇಲಾಖೆಗೆ ನೀಡಬೇಕು.
  • ಪಟ್ಟಿ ಪಡೆಯಲು ಆಯಾ ಕಾಲೇಜಿನ ಮುಖ್ಯಸ್ಥರು ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಬೇಕು.
  • ವ್ಯಾಕ್ಸಿನ್ ಪಡೆಯುವ ಅರ್ಹರಿಗೆ ಕಾಲೇಜಿನ ಆವರಣದಲ್ಲೇ ವ್ಯಾಕ್ಸಿನೇಷನ್‌ ಕಾರ್ಯ ನಡೆಸಬೇಕು.
  • ವ್ಯಾಕ್ಸಿನ್ ಪಡೆಯುವವರಿಗೆ ನೋಡಲ್ ಅಧಿಕಾರಿಗಳು ಎಲ್ಲಾ ಮಾಹಿತಿ ನೀಡಬೇಕು.
  • ವ್ಯಾಕ್ಸಿನೇಷನ್‌ನ ಎಲ್ಲಾ ಹಂತದಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು.
  • ವ್ಯಾಕ್ಸಿನೇಷನ್‌‌ಗೆ ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಸಬೇಕು.

ಇದನ್ನೂ ಓದಿ: ಮೈಸೂರಲ್ಲಿ ಮತ್ತೆ ಮೂರು ಡೆಲ್ಟಾ ಪ್ಲಸ್‌ ಸೋಂಕು ಪ್ರಕರಣ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.