ETV Bharat / city

ಉಪ ಚುನಾವಣೆಯಲ್ಲಿ ನಾವು ಯಾವುದೇ ಖರ್ಚು ಮಾಡದೆ ಗೆಲುವಿನ ಹತ್ತಿರಕ್ಕೆ ಹೋಗಿದ್ದೇವೆ: ಹೆಚ್​​​​ಡಿಕೆ - ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ

ಕೆ‌.ಆರ್.ಪೇಟೆಯ ಚುನಾವಣೆಯಲ್ಲಿ ಬಿಜೆಪಿಯವರು ಸಕ್ಸಸ್ ಆಗಿದ್ದಾರೆ. ಅದೇ ರೀತಿ ಇಲ್ಲೂ (ಆರ್​​ಆರ್​​ ನಗರ) ಕೂಡ ಚುನಾವಣೆ ನಡೆಸಿದ್ದಾರೆ. ಅದನ್ನು ಗಮನಿಸಿದರೆ ನಮ್ಮ ಪರಿಸ್ಥಿತಿ ಎರಡು ಅಥವಾ ಮೂರನೇ ಸ್ಥಾನಕ್ಕೆ ನಾವು ಬರಬಹದು. ಆದರೆ ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

HD kumarswamy statement on Shira RR nagar by-polls
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
author img

By

Published : Nov 5, 2020, 3:23 PM IST

ಬೆಂಗಳೂರು: ಆರ್​​ಆರ್ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ನಾವು ಹೆಚ್ಚು ಖರ್ಚು ಮಾಡುವ ಶಕ್ತಿ ಇರಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಾಕಷ್ಟು ಹಣ ಖರ್ಚು ಮಾಡಿವೆ. ನಾವು ಯಾವುದೇ ಖರ್ಚು ಮಾಡದೆ ಗೆಲುವಿನ ಹತ್ತಿರ ಹೋಗಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೆಪಿ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಆರ್​​​​ಆರ್ ನಗರ ಹಾಗೂ ಶಿರಾ ಕ್ಷೇತ್ರದ ಮತದಾನದ ನಂತರ ಎರಡು ಪಕ್ಷದವರು ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದೇವೆ ಅ‌ಂತಾರೆ. ಆಡಳಿತ ಪಕ್ಷ, ವಿಪಕ್ಷ ಸ್ಥಾನದ ನಾಯಕತ್ವ ಬದಲಾವಣೆ ಬಗ್ಗೆ ಮಾತಾಡಿಕೊಂಡಿದ್ದಾರೆ. ಹಣದ ಮುಖಾಂತರ ಚುನಾವಣೆ ನಡೆಸಿದ್ದಾರೆ. ಕೆ‌.ಆರ್.ಪೇಟೆಯ ಚುನಾವಣೆಯಲ್ಲಿ ಬಿಜೆಪಿಯವರು ಸಕ್ಸಸ್ ಆಗಿದ್ದಾರೆ. ಅದೇ ರೀತಿ ಇಲ್ಲೂ ಕೂಡ ಚುನಾವಣೆ ನಡೆಸಿದ್ದಾರೆ. ಇದನ್ನು ಗಮನಿಸಿದರೆ ನಮ್ಮ ಪರಿಸ್ಥಿತಿ ಎರಡು ಅಥವಾ ಮೂರನೇ ಸ್ಥಾನಕ್ಕೆ ನಾವು ಬರಬಹದು. ಆದರೆ ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಎರಡು ವರ್ಷದ ಹಿಂದಿನ ಪ್ರಕರಣಕ್ಕೆ ನಿನ್ನೆ ಪತ್ರಿಕಾ ಸ್ನೇಹಿತರನ್ನು ಬಂಧಿಸಲಾಗಿದೆ. ಇಂತಹ ವಿಚಾರದಲ್ಲಿ ರಾಜಕೀಯ ಶೆಲ್ಟರ್ ಪಡೆಯುವುದು ಸಾಮಾನ್ಯ ಎಂದರು. ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎರಡೂ ಪಕ್ಷದವರು ವಿನಯ್ ಕುಲಕರ್ಣಿ ವಿಚಾರಕ್ಕೆ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ನ್ಯಾಯಯುತ ತನಿಖೆ ನಡೆಸಿ ಯೋಗೇಶ್​ ಗೌಡ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.

ಈ ಪ್ರಕರಣದ ಕುರಿತು ಹಲವಾರು ರೀತಿಯ ಗುಮಾನಿ ಇತ್ತು. ಯೋಗೇಶ್​ ಗೌಡ ಸಾವಿನ ಸತ್ಯಾಸತ್ಯತೆ ಏನಿದೆ, ಯಾವುದೇ ರಾಜಕೀಯಕ್ಕೆ ಒಳಗಾಗದೇ ನ್ಯಾಯ ಒದಗಿಸಬೇಕು. ಯಾವುದೇ ರೀತಿಯ ಪ್ರಭಾವ ಇರದೆ ನ್ಯಾಯ ಕೊಡಿಸಬೇಕು ಎಂದರು.

ಯಾವುದೇ ಸ್ಥಾನ ನಮ್ಮಲ್ಲಿ ಇಲ್ಲ: ಚುನಾವಣೆಯ ನಂತರ ಸಿಎಂ‌, ವಿಪಕ್ಷ ಸ್ಥಾನ ಬದಲಾವಣೆ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್​​​ನಲ್ಲಿ ಬದಲಾವಣೆ ಮಾಡುವ ಯಾವುದೇ ಸ್ಥಾನ ಇಲ್ಲ. ಪಕ್ಷ ಸಂಘಟನೆಗೆ ಕೆಲ ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಸದ್ಯದಲ್ಲೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.