ETV Bharat / city

Legislative Council Election: ಪರಿಷತ್‌ ಚುನಾವಣೆಗೆ ಜೆಡಿಎಸ್​​ನಿಂದ ಮೈಸೂರು, ತುಮಕೂರು ಸೇರಿ 6 ಕಡೆ ಸ್ಪರ್ಧೆ- ಹೆಚ್​ಡಿಕೆ - ಹೆಚ್​ಡಿಕೆ

ಪರಿಷತ್ ಚುನಾವಣೆಗೆ ಹಾಸನದ ಅಭ್ಯರ್ಥಿ ಬಗ್ಗೆ ದೇವೇಗೌಡರು ನಿರ್ಧಾರ ಮಾಡುತ್ತಾರೆ. ‌ಈ ಬಗ್ಗೆಯೂ ಈಗಾಗಲೇ ನಾನು ಚರ್ಚೆ ಮಾಡಿದ್ದೇನೆ. ಇನ್ನೆರಡು ದಿನದಲ್ಲಿ 6 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿದೆ ಎಂದು ಹೆಚ್​​ಡಿಕೆ (HDK) ಹೇಳಿದರು.

HD Kumaraswamy
ಹೆಚ್.ಡಿ.ಕುಮಾರಸ್ವಾಮಿ
author img

By

Published : Nov 10, 2021, 6:35 PM IST

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ (Karnataka Legislative Council Election) ಮೈಸೂರಿನಲ್ಲಿ ಒಂದು ಕ್ಷೇತ್ರ ಸೇರಿದಂತೆ 6 ಕಡೆ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಿಳಿಸಿದ್ದಾರೆ.

ಪಕ್ಷದ ಕಚೇರಿ ಬೆಂಗಳೂರಿನ ಜೆ.ಪಿ ಭವನದಲ್ಲಿ ಇಂದು ಎರಡನೇ ಹಂತದ ಜನತಾ ಸಂಗಮ ಸಂಘಟನಾ ಕಾರ್ಯಾಗಾರದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.

ಮೈಸೂರಿನಲ್ಲಿ ಎರಡು ಕ್ಷೇತ್ರಗಳಿವೆ.‌ ಅದರಲ್ಲಿ ಒಂದು ಕ್ಷೇತ್ರ, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ-ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ನಿರ್ಧರಿಸಲಾಗಿದ್ದು, ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಲಾಗಿದೆ ಎಂದರು.

ಇನ್ನೆರಡು ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆ:

ತುಮಕೂರಿನ ನಾಯಕರ ಸಭೆಯನ್ನು ಕೂಡ ನಿನ್ನೆ (ಮಂಗಳವಾರ) ಮಾಡಿದ್ದೇನೆ. ಅಂತಿಮ ವರದಿಯನ್ನು ಅವರು ಕೊಡಲಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಶಾಸಕರು, ಮುಖಂಡರ ಸಭೆ ನಡೆಸಿದ್ದೇನೆ. ಇಂದು ಸಂಜೆ ಬೇರೆ ಕಡೆ ಕೋಲಾರ, ಚಿಕ್ಕಬಳ್ಳಾಪುರ ಮುಖಂಡರ ಸಭೆ ನಡೆಸುತ್ತೇನೆ.

ಹಾಸನದ ಅಭ್ಯರ್ಥಿ ಬಗ್ಗೆ ದೇವೇಗೌಡರು ನಿರ್ಧಾರ ಮಾಡುತ್ತಾರೆ. ‌ಈ ಬಗ್ಗೆಯೂ ಈಗಾಗಲೇ ನಾನು ಚರ್ಚೆ ಮಾಡಿದ್ದೇನೆ. ಇನ್ನೆರಡು ದಿನದಲ್ಲಿ 6 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುತ್ತೇವೆ. ರಾಯಚೂರು, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲೂ ಸ್ಪರ್ಧಿಸುವ ಬಗ್ಗೆ ಮನವಿ ಇದೆ. ಈ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ಹೆಚ್​​ಡಿಕೆ ಹೇಳಿದರು.

ಪರ್ಯಾಯ ಪ್ರಶ್ನೆಯೇ ಇಲ್ಲ:

ನಮ್ಮ ಪಕ್ಷ ಬಿಟ್ಟು ಹೋದವರಿಗೆ ಪರ್ಯಾಯ ಪ್ರಶ್ನೆ ಇಲ್ಲ. ಚುನಾವಣೆಯಲ್ಲಿ ಯಾರನ್ನು ನಿಲ್ಲಿಸಬೇಕೆಂದು ನಿರ್ಧಾರ ಮಾಡುತ್ತೇವೆ. ಕಳೆದ ಎರಡು ವರ್ಷಗಳಿಂದ ಕೆಲವರು ನಮ್ಮ ಸಂಪರ್ಕದಲ್ಲಿಯೇ ಇಲ್ಲ. ಅವರು ಎಲ್ಲಿಗೆ ಹೋಗ್ತಾರೆ ಎಂದು ಕಟ್ಟಿಕೊಂಡು ನಾನೇನು ಮಾಡಲಿ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಜಿ.ಟಿ.ದೇವೇಗೌಡರನ್ನು ಪಕ್ಷಕ್ಕೆ ಆಹ್ವಾನ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​​ಡಿಕೆ, ನಾನು ವಿಷಯಾಧಾರಿತ ವಿಚಾರ ಮುಂದಿಟ್ಟು ಪಕ್ಷದ ಸಂಘಟನೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಿದ್ದೇನೆ. ಯಾರು ಏನೇ ಮಾತನಾಡಿದರೂ, ಅದರ ಬಗ್ಗೆ ಗಮನ ನೀಡಲ್ಲಎಂದರು.

ರಾಜ್ಯದಲ್ಲಿ ಬಿಟ್ ಕಾಯಿನ್, ದೆಹಲಿಯಲ್ಲಿ ರಫೆಲ್‌ ಆರೋಪ:

ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳ ಹೇಳಿಕೆ ಗಮನಿಸಿದ್ದೇನೆ. ಕರ್ನಾಟಕದಲ್ಲಿ ಬಿಟ್ ಕಾಯಿನ್ (Bitcoin), ದೆಹಲಿಯಲ್ಲಿ ರಫೆಲ್ (Rafale deal controversy) ಬಗ್ಗೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಇವರ ಮೇಲೆ ಅವರು, ಅವರ ಮೇಲೆ ಇವರು ಆರೋಪಿಸುತ್ತಿದ್ದಾರೆ. ಇಬ್ಬರು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುವುದರಿಂದ ಸತ್ಯಾಂಶ ಹೊರಬರುವುದಿಲ್ಲ. ಆರಂಭದಲ್ಲಿ ಈ ಬಗ್ಗೆ ಚರ್ಚೆ ಆಗಿ ಬಳಿಕ ಇದು ತಣ್ಣಾಗಾಗುವ ಸಾಧ್ಯತೆ ಇದೆ. ಆ ರೀತಿ ಆಗಬಾರದು ಎಂದರು.

ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ

ಎರಡು ರಾಷ್ಟ್ರೀಯ ಪಕ್ಷಗಳು ಸುದೀರ್ಘವಾಗಿ ಆಡಳಿತ ನಡೆಸಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲೇ ಬಿಟ್ ಕಾಯಿನ್ (Bitcoin) ಪ್ರಕರಣದ ಪ್ರಸ್ತಾಪ ಆಗಿದ್ದು, ಅದನ್ನ ಗಂಭೀರವಾಗಿ ತೆಗೆದುಕೊಳ್ಳದಿರುವುದು ಈ ಪರಿಸ್ಥಿತಿಗೆ ಕಾರಣ ಎಂದು ಹೆಚ್​​ಡಿಕೆ ಹೇಳಿದರು.

ರಾಜ್ಯದ ತನಿಖಾ ಸಂಸ್ಥೆಗಳೇ ತನಿಖೆ ನಡೆಸುತ್ತಿರುವುದರಿಂದ ಸಿಎಂಗೆ ಮಾಹಿತಿ ಇರಬಹುದು. ಅದಕ್ಕಾಗಿ ಕಾಂಗ್ರೆಸ್‌ನವರು ಇದ್ದಾರೆ ಎಂದು ಅವರು ದೆಹಲಿಯಲ್ಲಿ ಹೇಳಿರಬಹುದು. ಮಾಧ್ಯಮಗಳ ಮುಂದೆ ಕೇವಲ ಪ್ರಚಾರಕ್ಕಾಗಿ, ಅನುಮಾನ ಬರುವ ವಾತಾವರಣ ಸೃಷ್ಠಿ ಮಾಡಿ, ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗದೆ ಹೊದರೆ ಜನತೆಗೆ ದ್ರೋಹ ಮಾಡಿದಂತೆ. ವಾಸ್ತವಾಂಶವನ್ನ ಜನತೆಯ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.

ಬಿಟ್ ಕಾಯಿನ್ (Bitcoin) ಪ್ರಕರಣ 2018ರ ಮೊದಲೇ ಹೊರಬಂತು. 2016, 17 ರಲ್ಲಿ ಕೆಲವು ಪ್ರಕರಣ ನಡೆದಿದೆ ಎಂಬ ಬಗ್ಗೆ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಆಗ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ವಿಪಕ್ಷ ನಾಯಕರೇ ಸಿಎಂ ಆಗಿದ್ರು. ಆಗಲೇ ಈ ಬಗ್ಗೆ ತನಿಖೆ ಆಗಿದ್ದರೆ ಸತ್ಯಾಂಶ ಹೊರ ಬರುತ್ತಿತ್ತು. ಇಷ್ಟು ದೊಡ್ಡ ಮಟ್ಟದಲ್ಲಿ ಹಗರಣ ಆಗುತ್ತಿರಲಿಲ್ಲ.

ಈಗ ಬಿಜೆಪಿ ಸರ್ಕಾರದಿಂದ ಪೊಲೀಸರ ತನಿಖೆ ನಡೆದಿದೆ. ಈಗ ಇಡಿಗೆ ವಹಿಸಿದ್ದಾರೆ. ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ವಾಸ್ತವಾಂಶ ತೆರದಿಡಬೇಕು. ನಿಖರ ಮಾಹಿತಿ ಇಲ್ಲದೆ ನಾನು ಕಾಂಗ್ರೆಸ್‌ ನಾಯಕರು, ಬಿಜೆಪಿಯ ನಾಯಕರು ಇದರಲ್ಲಿದ್ದಾರೆ ಎಂದು ಪ್ರಚಾರಕ್ಕೆ ಹೇಳುವುದಿಲ್ಲ. ಅವರವರೇ ಹೇಳಿಕೊಳ್ಳುತ್ತಿದ್ದಾರೆ ಎಂದು ಹೆಚ್​​ಡಿಕೆ ತಿವಿದರು.

ಯಾವ ತನಿಖೆ ಆಗಬೇಕು?, ಯಾವ ತನಿಖೆಯಾದ್ರು ಏನಾಗುತ್ತದೆ. ಯಾವ ತನಿಖೆ ಆದರೂ ಸರ್ಕಾರದ ಅಡಿಯಲ್ಲಯೇ ಬರುತ್ತದೆ. ನ್ಯಾಯಾಂಗ ತನಿಖೆ ಆಗಬೇಕೆಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ನ್ಯಾಯಾಂಗ ತನಿಖೆಗೆ ಬೆಂಬಲವಾಗಿ ಪೊಲೀಸ್​​ ಅಧಿಕಾರಿಗಳೇ ಇರುತ್ತಾರೆ ಎಂದು ಹೇಳಿದರು.

ನ್ಯಾಯಾಂಗ ತನಿಖೆ ವರದಿಗಳು ಏನಾಯಿತು? :

ಇಲ್ಲಿಯವರೆಗಿನ ನ್ಯಾಯಾಂಗ ತನಿಖೆ ಏನಾಯ್ತು?, ವರದಿಗಳು ಎಲ್ಲಿ ಹೋದವು? ಎಂದು ಪ್ರಶ್ನಿಸಿದ ಹೆಚ್​​ಡಿಕೆ, ಈ ಹಿಂದೆ ಅರ್ಕಾವತಿ ಬಡಾವಣೆಯ ರೀಡೂ ಪ್ರಕರಣ (Arkavathy Layout redo case)ದ ಬಗ್ಗೆ ಕೆಂಪಣ್ಣ ಆಯೋಗ ವರದಿ ಏನಾಯ್ತು?. ಅದಕ್ಕೆ ಎಷ್ಟು ಖರ್ಚಾಯ್ತು, ಆ ವರದಿ ಎಲ್ಲಿದೆ. ಯಾವುದೇ ತನಿಖೆ ಆದರೂ ಮುಕ್ತವಾಗಿ ತನಿಖೆ ನಡೆಸುವ ಅವಕಾಶ ನೀಡಬೇಕು ಎಂದರು.

ಇತ್ತಿಚಿನ ದಿನಗಳಲ್ಲಿ ದ್ವೇಷದ ರಾಜಕಾರಣ ದೊಡ್ಡಮಟ್ಟದಲ್ಲಿ ಆರಂಭವಾಗಿದೆ. ಇದರಿಂದ ಯಾವುದೋ ನಾಲ್ಕು ಜನಕ್ಕೆ ತೊಂದರೆ ಕೊಡುವುದಕ್ಕೆ ಬಳಸಿಕೊಂಡರೆ ಉಪಯೋಗಕ್ಕೆ ಬರುವುದಿಲ್ಲ. ವ್ಯವಸ್ಥೆ ಸರಿಪಡಿಸುವ ಕೆಲಸ ತನಿಖಾ ಸಂಸ್ಥೆಗಳು ಮಾಡಬೇಕು. ಇದಕ್ಕಾಗಿ ವ್ಯವಸ್ಥೆಯ ಲೋಪದೋಷ ಸರಿಪಡಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಹೇಳಿದರು.

ಈ ಪ್ರಕರಣವನ್ನು ಇಡಿಗೆ ಏಕೆ ನೀಡಿದರು?:

ನಮ್ಮ ಸರ್ಕಾರದ ಅಧಿಕಾರಿಗಳು ತನಿಖೆ ಆರಂಭಿಸಿದ ಬಳಿಕ, ಇಡಿಗೆ ಯಾವ ಕಾರಣಕ್ಕೆ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ರಾಜ್ಯ ಸರ್ಕಾರವೇ ಕೊಟ್ಟಿದ್ದಾರೋ, ಅಥವಾ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಇಡಿಗೆ ಕೊಟ್ಟಿದ್ದಾರೋ ಮಾಹಿತಿ ಹೊರಬರಬೇಕು.

ಬಿಟ್ ಕಾಯಿನ್ ಪ್ರಕರಣ ಸಿಎಂ ಕುರ್ಚಿಗೆ ಕಂಟಕವಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಅವರ ಉಸ್ತುವಾರಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರು ಊಹಾಪೋಹದ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅವರು ಆರೋಪವನ್ನು ನಿರಾಕರಿಸಿದರು. ಇನ್ನು ಯಡಿಯೂರಪ್ಪ ಅವರ ಬಗ್ಗೆಯೂ ಬಿಜೆಪಿಯ ಉಸ್ತುವಾರಿಗಳು ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ರು. ಬಳಿಕ ಬದಲಾವಣೆ ಆಯ್ತು. ಆ ರೀತಿ ಆಗಬಾರದೆಂದು ನಾನು ಆಶಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.