ETV Bharat / city

ಇಂದು ಡಾ.ರಾಜ್​​ಕುಮಾರ್ ಜನ್ಮದಿನ : ಟ್ವೀಟ್ ಮೂಲಕ ಭಾವಪೂರ್ಣ ನಮನ ಸಲ್ಲಿಸಿದ ಹೆಚ್​ಡಿಡಿ, ಹೆಚ್​ಡಿಕೆ - ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್

ಕನ್ನಡಿಗರ ಸಾಕ್ಷಿಪ್ರಜ್ಞೆ, ಆಸ್ಮಿತೆ, ಶಕ್ತಿ, ಸ್ಫೂರ್ತಿಯ ಸೆಲೆಯೂ ಆಗಿರುವ ಡಾ.ರಾಜ್​​ಕುಮಾರ್‌ ಅವರನ್ನು ಸದಾ ಸ್ಮರಿಸುತ್ತಾ ಅವರ ಆದರ್ಶ ಹೆಜ್ಜೆಗಳಲ್ಲಿ ಶ್ರದ್ಧೆಯಿಂದ ನಡೆಯೋಣ. ನಾಡು, ನುಡಿ, ನೆಲ, ಜಲ ವಿಚಾರಗಳಲ್ಲಿ ಅಣ್ಣಾವ್ರು ಹೊಂದಿದ್ದ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸೋಣ ಎಂದು ಹೆಚ್​ಡಿಕೆ ಹೇಳಿದ್ದಾರೆ..

HD Devegowda and HD  Kumaraswamy
ಹೆಚ್.ಡಿ.ದೇವೇಗೌಡ , ಹೆಚ್.ಡಿ.ಕುಮಾರಸ್ವಾಮಿ
author img

By

Published : Apr 24, 2022, 10:49 AM IST

ಬೆಂಗಳೂರು : ವರನಟ ಡಾ.ರಾಜ್​​ಕುಮಾರ್ ಅವರ ಜನ್ಮದಿನದ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದೇವೇಗೌಡರು, ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಮತ್ತು ಸದ್ಭಾವನೆಯನ್ನು ಹರಡಬಲ್ಲವರು‌ ರಾಜ್​​ಕುಮಾರ್-ಕುವೆಂಪು. ಅಭಿಮಾನಿಗಳನ್ನು ದೇವರು ಎಂದು ಕರೆದು ಕನ್ನಡಿಗರ ಕಣ್ಮಣಿಯಾದ ಮೇರು ನಟ, ಶ್ರೇಷ್ಠ ಗಾಯಕ ಮತ್ತು ಯೋಗ ಸಾಧಕರೂ ಆದ ಡಾ.ರಾಜ್ ಕುಮಾರ್ ಅವರ 93ನೇ ಜನ್ಮಮಹೋತ್ಸವದಂದು ಅವರಿಗೆ ನನ್ನ ಆದರ ಮತ್ತು ಗೌರವಪೂರಕ ನಮನಗಳು ಎಂದು ತಿಳಿಸಿದ್ದಾರೆ.

  • ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಮತ್ತು ಸದ್ಭಾವನೆಯನ್ನು ಹರಡಬಲ್ಲವರು‌ ರಾಜ್ ಕುಮಾರ್ ಒಬ್ಬರೇ - ಕುವೆಂಪು
    ಅಭಿಮಾನಿಗಳನ್ನು ದೇವರು ಎಂದು ಕರೆದು ಕನ್ನಡಿಗರ ಕಣ್ಮಣಿಯಾದ ಮೇರು ನಟ, ಶ್ರೇಷ್ಠ ಗಾಯಕ ಮತ್ತು ಯೋಗ ಸಾಧಕರೂ ಆದ
    ಡಾ|| ರಾಜ್ ಕುಮಾರ್ ಅವರ 93 ನೇ ಜನ್ಮಮಹೋತ್ಸವದಂದು ಅವರಿಗೆ ನನ್ನ ಆದರ ಮತ್ತು ಗೌರವಪೂರಕ ನಮನಗಳು. pic.twitter.com/wJDCm0fpuv

    — H D Devegowda (@H_D_Devegowda) April 24, 2022 " class="align-text-top noRightClick twitterSection" data=" ">

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್‌ ತಾರೆ, ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್​​ಕುಮಾರ್‌ ಅವರ ಜನ್ಮ ದಿನದೊಂದು ಆ ಮೇರುನಟರಿಗೆ ನನ್ನ ಭಾವಪೂರ್ಣ ನಮನಗಳು ಎಂದು ತಿಳಿಸಿದ್ದಾರೆ.

ಸಿನಿಮಾ ಎಂದರೆ ಮನರಂಜನೆಯಷ್ಟೇ ಅಲ್ಲ, ಸಮಾಜದ ಪಾಲಿನ ಚಿಕಿತ್ಸಕ ಮಾರ್ಗ ಎಂದು ನಂಬಿ ನಡೆದ ಭಾರತೀಯ ಚಿತ್ರರಂಗದ ಏಕೈಕ ಕಲಾಸಂತರು ಅವರು. ಈ ಕಾರಣಕ್ಕಾಗಿಯೇ ಅಣ್ಣಾವ್ರು ಅಜರಾಮರ. ಅವರ ಚಿತ್ರಗಳನ್ನೇ ನೋಡಿಕೊಂಡು ಬೆಳೆದ ನನ್ನ ಮೇಲೆ ಅವರ ಪ್ರಭಾವ ಹೆಚ್ಚು. 'ಬಂಗಾರದ ಮನುಷ್ಯ' ಚಿತ್ರವೇ ನಾನಿಂದು ಕೃಷಿಕನಾಗಲು ಪ್ರೇರಣೆ ಎಂದು ಬಣ್ಣಿಸಿದ್ದಾರೆ.

  • ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್‌ ತಾರೆ, ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್‌ ಕುಮಾರ್‌ ಅವರ ಜಯಂತಿಯಂದು ಆ ಮೇರುನಟರಿಗೆ ನನ್ನ ಭಾವಪೂರ್ಣ ನಮನಗಳು.1/3 pic.twitter.com/wwdzUCPQra

    — H D Kumaraswamy (@hd_kumaraswamy) April 24, 2022 " class="align-text-top noRightClick twitterSection" data=" ">

ಕನ್ನಡಿಗರ ಸಾಕ್ಷಿಪ್ರಜ್ಞೆ, ಆಸ್ಮಿತೆ, ಶಕ್ತಿ, ಸ್ಫೂರ್ತಿಯ ಸೆಲೆಯೂ ಆಗಿರುವ ಡಾ.ರಾಜ್​​ಕುಮಾರ್‌ ಅವರನ್ನು ಸದಾ ಸ್ಮರಿಸುತ್ತಾ ಅವರ ಆದರ್ಶ ಹೆಜ್ಜೆಗಳಲ್ಲಿ ಶ್ರದ್ಧೆಯಿಂದ ನಡೆಯೋಣ. ನಾಡು, ನುಡಿ, ನೆಲ, ಜಲ ವಿಚಾರಗಳಲ್ಲಿ ಅಣ್ಣಾವ್ರು ಹೊಂದಿದ್ದ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸೋಣ ಎಂದು ಹೆಚ್​ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: ಆರ್​ಜಿವಿ ಹಾಗೂ ರಿಯಲ್ ಸ್ಟಾರ್ ಡೆಡ್ಲಿ ಜೋಡಿ ಎಂದ ಅಭಿನಯ ಚಕ್ರವರ್ತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.