ಆನೇಕಲ್( ತಮಿಳುನಾಡು): ಕೇರಳದಿಂದ ರಾಜ್ಯಕ್ಕೆ ಒಳಬರುವ ಪ್ರಮುಖ ಮಾರ್ಗದಲ್ಲಿ ಹೊರ ರಾಜ್ಯದ ಜನರು ಪೊಲೀಸರ ಕಟ್ಟೆಚ್ಚರದ ಹಿನ್ನೆಲೆ ಪರದಾಟ ಅನುಭವಿಸುತ್ತಿದ್ದಾರೆ.
ನಿನ್ನೆ ಸಂಜೆಯಿಂದಲೇ ರಾಜ್ಯದ ಒಳ ಬರುವ ವಾಹನಗಳ ಸಂಖ್ಯೆ ಗಣನೀಯವಾಗಿ ಹೇರಿಕೆ ಕಂಡ ಹಿನ್ನೆಲೆ ಆರೋಗ್ಯ ಇಲಾಖೆ ಹಾಗೂ ಸಿಎಂ ಯಡಿಯೂರಪ್ಪ ಒಳ ಬರುವವರ ಆರೋಗ್ಯ ತಪಾಸಣೆಗೆ ಕಡ್ಡಾಯದ ಎಚ್ಚರಿಕೆ ರವಾನಿಸಿದ್ದರು. ಇದರ ಬೆನ್ನಲ್ಲೇ ಅತ್ತಿಬೆಲೆ ಪೊಲೀಸರು ಅತ್ತಿಬೆಲೆ ಗಡಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಒಳಬರುವ ವಾಹನ ಸವಾರರನ್ನು ತಪಾಸಣೆಗೆ ಒಳಪಡಿಸುತ್ತಿರುವ ಕಾರಣಕ್ಕೆ ಸಾಕಷ್ಟು ವಾಹನಗಳು ಗಡಿಯಾಚೆಗೆ ನಿಲ್ಲುವಂತಾಗಿದೆ. ಯಾವುದೇ ಆದಾರ ಇಲ್ಲದ ವಲಸಿಗರನ್ನು ವಾಪಸ್ ಕಳಿಸುತ್ತಿರುವ ಪೊಲೀಸರ ಗದರಿಕೆಯಿಂದ ಆಕಡೆಯೂ ಹೋಗಲಾಗದೇ ಈ ಕಡೆಯೂ ಬರಲಾಗದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.