ETV Bharat / city

ಜ.14 ರಿಂದ ಹರಜಾತ್ರೆ, ಈ ಬಾರಿ ಹರಮಾಲೆ ವೃತ ಪರಿಚಯ: ವಚನಾನಂದ ಶ್ರೀ

ಹರಿಹರದ ಹರಜಾತ್ರೆ 2022 ರ ಜನವರಿ 14 ಮತ್ತು 15 ರಂದು ನಡೆಯಲಿದೆ ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು. ಸಿಎಂ ಬೊಮ್ಮಾಯಿ ಅವರು ಹರಮಾಲೆ ಕಾರ್ಯಕ್ರಮದ ಲೋಗೋ ಹಾಗೂ ಬ್ಯಾನರ್‌ ಬಿಡುಗಡೆಗೊಳಿಸಿ, ಶುಭಾಶಯ ಕೋರಿದರು.

Hara Jatre in Harihar,ಹರಜಾತ್ರೆ
ಜ.14 ರಿಂದ ಹರಜಾತ್ರೆ
author img

By

Published : Dec 9, 2021, 7:57 PM IST

ಬೆಂಗಳೂರು: ಕಳೆದ ಎರಡು ವರ್ಷ ಯಶಸ್ವಿಯಾಗಿ ನಡೆದಿರುವ ಹರಿಹರದ ಹರಜಾತ್ರೆ 2022 ರ ಜನವರಿ 14 ಮತ್ತು 15 ರಂದು ನಡೆಯಲಿದ್ದು, ಈ ಬಾರಿ ಅಯ್ಯಪ್ಪ ಸ್ವಾಮಿ ಮಾಲೆ ಮಾದರಿಯಲ್ಲಿ ಹರಮಾಲೆ ಪರಿಚಯ ಮಾಡಲಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಈ ಬಾರಿ ಹರಮಾಲೆಯನ್ನು ಆರಂಭ ಮಾಡುತ್ತಿದ್ದೇವೆ. ಅಯ್ಯಪ್ಪ ಸ್ವಾಮಿ ಮಾಲೆ ಮಾದರಿಯಲ್ಲಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು 21ದಿನಗಳ ಕಾಲ ಮಾಲೆ ಧರಿಸಿ ವೃತಾಚರಣೆ ಮಾಡುವ ನಿಯಮ ಮಾಡಿದ್ದೇವೆ. ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.

ಜನವರಿ 14-15ರಂದು ಹರ ಜಾತ್ರೆ ಮಾಡಲಾಗುತ್ತದೆ. ಕಳೆದ ಎರಡು ವರ್ಷದಿಂದ ಹರ ಜಾತ್ರೆ ಯಶಸ್ವಿಯಾಗಿದೆ. ಮೂರನೇ ವರ್ಷವೂ ಹರಜಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ, ಸ್ವತಃ ಸಿಎಂ ಬೊಮ್ಮಾಯಿ 21 ದಿನ ಹರ ಮಾಲೆ ಧರಿಸುವುದಾಗಿ ತಿಳಿಸಿದ್ದಾರೆ ಎಂದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಚನಾನಂದ ಶ್ರೀ

ಹರ ಜಾತ್ರೆಯಲ್ಲಿ ಹಲವು ವೈಶಿಷ್ಠ ಕಾರ್ಯಕ್ರಮಗಳಿವೆ, ಕೇವಲ ಹಬ್ಬದ ರೀತಿ ಆಚರಣೆ ಮಾತ್ರ ಇರುವುದಿಲ್ಲ ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿ, ಉದ್ಯಮಿಯಾಗಿ ಉದ್ಯೋಗ ನೀಡುವ ಯೋಜನೆಯಂತಹ ಕಾರ್ಯಕ್ರಮಗಳ ಜಾಗೃತಿ ಸಹ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮೀಸಲಾತಿಗೆ ಮತ್ತೊಮ್ಮೆ ಮನವಿ:
ಪಂಚಮಸಾಲಿ ಮೀಸಲಾತಿ ವಿಚಾರ ಸಂಬಂಧ ಮತ್ತೆ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟಿದ್ದೇವೆ. ಕೇಂದ್ರದಲ್ಲಿ ಪಂಚಮಸಾಲಿಗೆ ಒಬಿಸಿ ಮೀಸಲಾತಿ ಕೊಡಬೇಕು. ರಾಜ್ಯದಲ್ಲಿ 2ಎ ಮೀಸಲಾತಿ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಅದಕ್ಕೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲ ದಾಖಲಾತಿಗಳನ್ನು ಈಗಾಗಲೇ ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಒಳ್ಳೆಯ ದಿನ ಬರಲಿದೆ ಎಂದರು.

Hara Jatre in Harihar,ಹರಜಾತ್ರೆ
ಹರಮಾಲೆ ಕಾರ್ಯಕ್ರಮದ ಲೋಗೋ ಹಾಗೂ ಬ್ಯಾನರ್‌ ಬಿಡುಗಡೆ

ಗಂಗಾರತಿ ಮಾದರಿ ತುಂಗಾರತಿ:

ಉತ್ತರ ಭಾರತದ ಕಾಶಿ, ಉಜ್ಜಯಿನಿಯಲ್ಲಿನ ಗಂಗಾರತಿ ಮಾಡುವ ರೀತಿಯಲ್ಲಿ ಹರಿಹರದಲ್ಲಿ ತುಂಗಾರತಿ ಆಗಬೇಕು ಎನ್ನುವುದು ನಮ್ಮ ಕನಸಿತ್ತು, ಅದಕ್ಕೆ ಮುಖ್ಯಮಂತ್ರಿಗಳು ಜನವರಿ 14 ರಂದು ಅಡಿಗಲ್ಲು ಹಾಕಲಿದ್ದಾರೆ. 2023 ಜನವರಿ 14-15 ರಂದು ದೇಶದ ಪ್ರಧಾನಿ ಮೋದಿ ಅವರು ಬಂದು ತುಂಗಾರತಿ ಮಾಡಲಿದ್ದಾರೆ ಎಂದರು.

ಹರಮಾಲೆಗೆ ಸಿಎಂ ಶುಭಾಶಯ:

ಹರಜಾತ್ರೆಯಲ್ಲಿ ಪಾಲ್ಗೊಳ್ಳುವ ಯುವ ಹಾಗೂ ಉತ್ಸಾಹಿ ಜನರಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸುವ ಹಾಗೂ ಮಾನಸಿಕ ಸ್ಥೈರ್ಯಗಳನ್ನು ಹೆಚ್ಚಿಸುವ ಉದ್ದೇಶದಲ್ಲಿ ಹರಮಾಲೆ ಯಶಸ್ವಿಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹಾರೈಸಿದರು.

ಗೃಹ ಕಚೇರಿ ಕೃಷ್ಣದಲ್ಲಿ ಹರಿಹರ ಪೀಠಾಧ್ಯಕ್ಷ ವಚನಾನಂದ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಹರಮಾಲೆ ಕಾರ್ಯಕ್ರಮದ ಲೋಗೋ ಹಾಗೂ ಬ್ಯಾನರ್‌ ಬಿಡುಗಡೆಗೊಳಿಸಿ ಮಾತನಾಡಿದ ಸಿಎಂ, ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಮಹಾಸ್ವಾಮಿಗಳು, ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸುವ, ಪರಂಪರೆಯನ್ನು ಮುಂದುವರೆಸುವ ಹಾಗೂ ಹೊಸತನ್ನು ತಿಳಿಸಿಕೊಡುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.
ಹರಜಾತ್ರೆಯ ಮೂಲಕ ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಒಗ್ಗೂಡಿಸಿ ಹಲವಾರು ಅತ್ಯವಶ್ಯಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಬಾರಿ ಸಮುದಾಯದ ಉತ್ಸಾಹಿ ಯುವಕರಲ್ಲಿ ಮತ್ತಷ್ಟು ಸಾಂಸ್ಕೃತಿಕ ಪರಂಪರೆ ಬೆಳೆಸುವ, ಒಳ್ಳೆಯ ಅಭ್ಯಾಸಗಳನ್ನು ಅವರ ಜೀವನದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಹರಮಾಲೆ ವೃತವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದಾರೆ. ಈ ವೃತದಲ್ಲಿ ನಿಷ್ಠರಾಗಿ ಪಾಲ್ಗೊಳ್ಳುವ ಮೂಲಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಯುವಕರಿಗೆ ಕರೆ ನೀಡಿದರು.

ಹರಿಹರ ಜಗದ್ಗುರು ಪೀಠದ ವಚನಾನಂದ ಮಹಾಸ್ವಾಮೀಜಿಗಳು ಮಾತನಾಡಿ, ನಾವು ಪೀಠಕ್ಕೆ ಬರುವ ಸಾವಿರ ಸಾವಿರ ಯುವ ಮನಸುಗಳನ್ನು ಬಹಳ ಹತ್ತಿರದಿಂದ ಗಮನಿಸಿದ್ದೇವೆ. ಅವರಲ್ಲಿ ಅಪಾರ ಬುದ್ಧಿ ಶಕ್ತಿ ಇರುತ್ತದೆ. ಯುಕ್ತಿ ಇರುತ್ತದೆ. ಪ್ರತಿಭೆಯ ಜೊತೆಗೆ ಏನಾದರೂ ಸಾಧಿಸಬೇಕು ಅನ್ನೋ ಅತೀವ ಹಂಬಲವಿರುತ್ತದೆ. ಆದರೆ, ಕೆಲವರು ಬೇಕೋಬೇಡವೋ ಯಾವುದೋ ಒಂದು ಚಟಕ್ಕೆ ದಾಸರಾಗಿರುತ್ತಾರೆ.
ಮಾನಸಿಕವಾಗಿ ಸ್ಥೈರ್ಯ ಗುಂದಿರುತ್ತಾರೆ. ಸಣ್ಣಪುಟ್ಟ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುತ್ತಾರೆ. ಅಂತಃಕರಣ, ಪ್ರೀತಿ ಗೌರವ ಕಳೆದುಕೊಂಡಿರುತ್ತಾರೆ. ಅಯ್ಯೋ ನನಗಿನ್ನೂ ಯಶಸ್ಸು ಸಿಕ್ಕಿಲ್ಲವಲ್ಲ ಅಂತ ಹಪಹಪಿಸುತ್ತಿರುತ್ತಾರೆ. ಜೀವನದ ಹೊಸ್ತಿಲಿನಲ್ಲೇ ಗೊಂದಲಕ್ಕೀಡಾಗಿರುವ ಅಂಥ ಲಕ್ಷಲಕ್ಷ ಯುವಮನಸುಗಳನ್ನು ಸರಿದಾರಿಗೆ ತರುವ ಹೊಣೆ ನಮ್ಮ ಮೇಲಿದೆ. ಅಧ್ಯಾತ್ಮದ ತೆಕ್ಕೆಗೆ ಅವರನ್ನು ತಂದು, ಹರಸಂಕಲ್ಪ ಮಾಡಿಸಿ ಜೀವನ ಪಯಣಕ್ಕೆ ಹೊಸ ದಾರಿ ತೋರಿಸಬೇಕು. ಆ ಹೊಣೆಯನ್ನು ಅರಿತೇ ನಾವು ಪವಿತ್ರವಾದ ಹರಜಾತ್ರಾ ಮಹೋತ್ಸವದಂದು ಹರಮಾಲೆ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದೇವೆ ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಡಾ. ಸಿ ಎನ್ ಅಶ್ವತ್ಥ ನಾರಾಯಣ, ಶಂಕರ ಪಾಟೀಲ್ ಮುನೇನಕೊಪ್ಪ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಸಮಾರಂಭದಲ್ಲಿ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.