ETV Bharat / city

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಗಂಡು ಮರಿ ಆನೆ ಹಸ್ತಾಂತರ - Handover elephant calf to Bannerghatta Biological Park

ಕಾವೇರಿ ವನ್ಯಜೀವಿ ಅಭಯಾರಣ್ಯದ ಮೂರುವರೆ ತಿಂಗಳ ಗಂಡು ಮರಿ ಆನೆಯೊಂದನ್ನು ಆರೈಕೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹಸ್ತಾಂತರಿಸಲಾಗಿದೆ. ಆನೆ ಮಾವುತರು ಮರಿಯನ್ನು ಆರೈಕೆ ಮಾಡುತ್ತಿದ್ದಾರೆ.

elephant calf
ಗಂಡು ಮರಿ ಆನೆ
author img

By

Published : Aug 4, 2022, 9:57 AM IST

ಬೆಂಗಳೂರು: ಕಾವೇರಿ ವನ್ಯಜೀವಿ ಅಭಯಾರಣ್ಯದ ಹಲಗೂರು ವಿಭಾಗದಲ್ಲಿ ತಾಯಿಯಿಂದ ಬೇರ್ಪಟ್ಟ 3.5 ತಿಂಗಳ ಗಂಡು ಮರಿ ಆನೆಯೊಂದನ್ನು ಆರೈಕೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಸ್ತಾಂತರಿಸಲಾಗಿದೆ ಎಂದು ಕಾರ್ಯ ನಿರ್ವಾಹಣಾ ನಿರ್ದೇಶಕ ಸುನಿಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮರಿ ಆನೆ ಹಸ್ತಾಂತರ

ಜುಲೈ 30ರಂದು ಮುತ್ತತ್ತಿ ಕಡೆಗೆ ಹೋಗುವ ದಾರಿಯಲ್ಲಿ ಆನೆ ಮರಿಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಬಿದ್ದಿತ್ತು. ಬಳಿಕ ಅರಣ್ಯ ಇಲಾಖೆ ವ್ಯಾಪ್ತಿಯ ಆನೆಗಳ ಹಿಂಡುಗಳೊಂದಿಗೆ ಈ ಮರಿ ಆನೆ ಸೇರಿಸಲು ಸಿಬ್ಬಂದಿ ಪ್ರಯತ್ನಿಸಿದರೂ, ಗಜ ಪಡೆ ತಿರಸ್ಕರಿಸಿತ್ತು. ಹೀಗಾಗಿ, ಪ್ರಸ್ತುತ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆ ಮಾವುತರು ಮರಿಯನ್ನು ಆರೈಕೆ ಮಾಡುತ್ತಿದ್ದಾರೆ. ಕನಿಷ್ಠ 6 ತಿಂಗಳಿಂದ 1 ವರ್ಷದವರೆಗೆ ತಾಯಿಯ ಹಾಲಿಲ್ಲದ ಮರಿಗಳು ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿದ್ದು, ಬದುಕುಳಿಯುವುದು ಕಷ್ಟಸಾಧ್ಯ. ಆದ್ದರಿಂದ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ ಎಂದಿದ್ದಾರೆ.

ಮರಿಗೆ ಉತ್ತಮ ಸ್ಥಿತಿ ಒದಗಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನದ ಪಶು ವೈದ್ಯರು ಮತ್ತು ಮಾವುತರು ತೀವ್ರ ನಿಗಾ ವಹಿಸುತ್ತಿದ್ದಾರೆ. ಈಗಾಗಲೇ ಮರಿ ಆನೆಯ ರಕ್ತದ ಮಾದರಿಯನ್ನ ಸಂಗ್ರಹಿಸಿ ನಿಯತಾಂಕಗಳನ್ನು ಪರಿಶೀಲಿಸಲಾಗಿದೆ. ಬೇರೆ ವೈರಲ್​ ಸೋಂಕು ಹರಡಿದೆಯಾ ಎಂದು ಪರೀಕ್ಷಿಸಲು ಮತ್ತೊಂದು ರಕ್ತದ ಮಾದರಿಯನ್ನು ಹೆಬ್ಬಾಳದ ಐಎಹೆಚ್​ ಮತ್ತು ವಿಬಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಲೆಗೆ ಬ್ಯಾಟರಿ ಕಟ್ಟಿಕೊಂಡು ಜೋಳಕ್ಕೆ ನುಗ್ಗಿದ ಆನೆ ಓಡಿಸಿದರಂತೆ ಅಪ್ಪು: 'ಗಂಧದಗುಡಿ' ಅನುಭವ ಬಿಚ್ಚಿಟ್ಟ ಮಿಲ್ಟ್ರಿ ಮಾದೇವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.