ETV Bharat / city

ಅಮೆರಿಕದ ಹನಿವೆಲ್‌ ಜೊತೆ $100 ಮಿಲಿಯನ್‌ ಒಪ್ಪಂದಕ್ಕೆ ಹೆಚ್‌ಎಎಲ್‌ ಸಹಿ - ಈಟಿವಿ ಭಾರತ

HTT-40 ಇಂಜಿನ್‌ಗಳಿಗಾಗಿ ಅಮೆರಿಕದ ಹನಿವೆಲ್‌ ಕಂಪನಿಯೊಂದಿಗೆ ಪ್ರಮುಖ ಒಪ್ಪಂದಕ್ಕೆ ಎಚ್​ಎಎಲ್​ ಸಹಿ ಮಾಡಿದೆ.

HAL Signs with Honeywell for HTT 40 Engines  HAL Signs Contract Worth Over 100 Million dollar with Honeywell  Hindustan Trainer Aircraft  hindustan aeronautics limited locations  Bengaluru HAL news  HTT 40 ಇಂಜಿನ್‌ಗಳಿಗಾಗಿ HAL ಸಹಿ  ಹಿಂದೂಸ್ತಾನ್ ಟ್ರೈನರ್ ಏರ್‌ಕ್ರಾಫ್ಟ್  ಹನಿವೆಲ್‌ನೊಂದಿಗೆ 100 ಮಿಲಿಯನ್‌ ಡಾಲರ್​ಗೂ ಹೆಚ್ಚು ಮೌಲ್ಯದ ಒಪ್ಪಂದಕ್ಕೆ HAL ಸಹಿ  ಬೆಂಗಳೂರು ಹೆಚ್​ಎಎಲ್​ ಸುದ್ದಿ
ಕೃಪೆ: Twitter
author img

By

Published : Jul 28, 2022, 10:22 AM IST

ಬೆಂಗಳೂರು: ಹಿಂದೂಸ್ತಾನ್ ಟ್ರೈನರ್ ಏರ್‌ಕ್ರಾಫ್ಟ್‌ಗೆ (HTT-40) ಶಕ್ತಿ ತುಂಬಲು ನಿರ್ವಹಣೆ ಮತ್ತು ಬೆಂಬಲ ಸೇವೆಗಳ ಜೊತೆಗೆ 88 TPE331-12B ಎಂಜಿನ್‌ಗಳು/ಕಿಟ್‌ಗಳ ಪೂರೈಕೆ ಮತ್ತು ತಯಾರಿಕೆಗಾಗಿ ಹೆಚ್‌ಎಎಲ್‌ 100 ಮಿಲಿಯನ್ ಡಾಲರ್​ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಹನಿವೆಲ್ ಓಇ ಸೇಲ್ಸ್ ವಿಭಾಗದ ಹಿರಿಯ ನಿರ್ದೇಶಕ ಎರಿಕ್ ವಾಲ್ಟರ್ಸ್ ಮತ್ತು ಎಚ್​ಎಎಲ್​ ಕಾರ್ಯನಿರ್ವಾಹಕ ನಿರ್ದೇಶಕ (ಇ & ಐಎಂಜಿಟಿ) ಬಿ.ಕೃಷ್ಣ ಕುಮಾರ್ ಅವರು ಎಚ್‌ಎಎಲ್ ಸಿಎಂಡಿ ಆರ್.ಮಾಧವನ್​ ಉಪಸ್ಥಿತಿಯಲ್ಲಿ ಒಪ್ಪಂದ ಪತ್ರವನ್ನು ವಿನಿಮಯ ಮಾಡಿಕೊಂಡರು.

ಐಎಎಫ್‌ನ ಮೂಲಭೂತ ತರಬೇತಿ ಅವಶ್ಯಕತೆಗಳನ್ನು ಪರಿಹರಿಸಲು ಹೆಚ್‌ಎಎಲ್ ಬೇಸಿಕ್ ಟ್ರೈನರ್ ಏರ್‌ಕ್ರಾಫ್ಟ್ (HTT-40) ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಅದಕ್ಕೆ 70 ವಿಮಾನಗಳ ಸಂಭಾವ್ಯ ಅವಶ್ಯಕತೆ ಇದೆ. ಐಎಎಫ್‌ ಜೊತೆಗಿನ ಒಪ್ಪಂದವು ಸುಧಾರಿತ ಹಂತದ ಅನುಮೋದನೆಯಲ್ಲಿದೆ ಎಂದು ಮಾಧವನ್ ಹೇಳಿದರು.

HAL Signs with Honeywell for HTT 40 Engines  HAL Signs Contract Worth Over 100 Million dollar with Honeywell  Hindustan Trainer Aircraft  hindustan aeronautics limited locations  Bengaluru HAL news  HTT 40 ಇಂಜಿನ್‌ಗಳಿಗಾಗಿ HAL ಸಹಿ  ಹಿಂದೂಸ್ತಾನ್ ಟ್ರೈನರ್ ಏರ್‌ಕ್ರಾಫ್ಟ್  ಹನಿವೆಲ್‌ನೊಂದಿಗೆ 100 ಮಿಲಿಯನ್‌ ಡಾಲರ್​ಗೂ ಹೆಚ್ಚು ಮೌಲ್ಯದ ಒಪ್ಪಂದಕ್ಕೆ HAL ಸಹಿ  ಬೆಂಗಳೂರು ಹೆಚ್​ಎಎಲ್​ ಸುದ್ದಿ

ಹೆಚ್‌ಎಎಲ್‌ ಜೊತೆಗಿನ ನಮ್ಮ ನಾಲ್ಕು ದಶಕಗಳ ಪಾಲುದಾರಿಕೆಯ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಈ ಹೊಸ ಒಪ್ಪಂದದೊಂದಿಗೆ ನಮ್ಮ ಸಂಬಂಧವನ್ನು ವಿಸ್ತರಿಸಲು ಸಂತೋಷಪಡುತ್ತೇವೆ. TPE331-12 ಸಂಬಂಧಿಸಿದ ಎಂಜಿನ್‌ಗಳು ಪ್ರಪಂಚದಾದ್ಯಂತ ಕಾರ್ಯಾಚರಣೆಗಳಲ್ಲಿ ತನ್ನನ್ನು ಸಾಬೀತುಪಡಿಸಿದೆ. ಐಎಎಫ್‌ನ ಅವಶ್ಯಕತೆಗಳನ್ನು ಪೂರೈಸಲು ನಿಗದಿತ ವೇಳಾಪಟ್ಟಿಯೊಳಗೆ ಎಂಜಿನ್‌ಗಳು ಮತ್ತು ಕಿಟ್‌ಗಳನ್ನು ಬೆಂಬಲಿಸಲು ಮತ್ತು ತಲುಪಿಸಲು ನಾವು ಬದ್ಧ. ಪ್ರಸ್ತುತ ರಾಡಾರ್‌ನಲ್ಲಿರುವ ಇತರ ಎಂಜಿನ್ ಕಾರ್ಯಕ್ರಮಗಳೊಂದಿಗೆ ಮುಂಬರುವ ವರ್ಷಗಳಲ್ಲಿ HTT-40 ವಿಮಾನಗಳ ರಫ್ತುಗೆ ಬೆಂಬಲ ನೀಡಲು ಹನಿವೆಲ್ ಬದ್ಧವಾಗಿದೆ. ಈ ಒಪ್ಪಂದವು ಹೆಚ್‌ಎಎಲ್‌ ಮತ್ತು ಹನಿವೆಲ್ ನಡುವಿನ ಭವಿಷ್ಯದ ಸಹಯೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಎರಿಕ್ ವಾಲ್ಟರ್ಸ್ ತಿಳಿಸಿದರು.

HTT-40 ಮೂಲಮಾದರಿಗಳು TPE331-12B ಎಂಜಿನ್‌ಗಳಿಂದ ಚಾಲಿತವಾಗಿವೆ. 2014 ರಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಹನಿವೆಲ್ TPE331-12B ಟರ್ಬೊಪ್ರೂಪ್ ಎಂಜಿನ್‌ಗಾಗಿ ಉತ್ಪಾದನೆ ಮತ್ತು ದುರಸ್ತಿ ಪರವಾನಗಿ ಒಪ್ಪಂದಕ್ಕೆ ಸಹಿ ಹಾಕುವುದು 70 HTT-40 ವಿಮಾನ ಕಾರ್ಯಗತಗೊಳಿಸುವ ಪ್ರಮುಖ ಮೈಲಿಗಲ್ಲು. HTT-40 ರ ರಫ್ತು ಸಾಮರ್ಥ್ಯದ ಬೆಂಬಲಕ್ಕಾಗಿ ಹೆಚ್‌ಎಎಲ್‌ ಹನಿವೆಲ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಹೆಚ್‌ಎಎಲ್‌ ಮತ್ತು ಹನಿವೆಲ್ 1MW ಟರ್ಬೊ ಜನರೇಟರ್‌ಗಳು, ಉತ್ಪಾದನೆ, TPE 331-10GP / 12JR ಎಂಜಿನ್‌ಗಳ ದುರಸ್ತಿ ಮತ್ತು ಡೋರ್ನಿಯರ್‌ನ ರೂಪಾಂತರಗಳಿಗಾಗಿ ಇತರ ಕ್ಷೇತ್ರಗಳನ್ನು ಅನ್ವೇಷಿಸುತ್ತಿವೆ.

ಇದನ್ನೂ ಓದಿ: ಮಾನವ ಸಹಿತ ಗಗನಯಾನ ಯೋಜನೆ: ಇಸ್ರೋಗೆ ಮೊದಲ ಹಂತದ ಹಾರ್ಡ್​ವೇರ್ ಹಸ್ತಾಂತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.