ETV Bharat / city

ಮಾನವ ಸಹಿತ ಗಗನಯಾನ ಯೋಜನೆ: ಇಸ್ರೋಗೆ ಮೊದಲ ಹಂತದ ಹಾರ್ಡ್​ವೇರ್ ಹಸ್ತಾಂತರ

ಮಾನವಸಹಿತ ಗಗನಯಾನ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದರು.

HAL hands over the first set of Gaganyaan hardware to ISRO
ಹೆಚ್​​ಎಎಲ್ ನಿಂದ ಇಸ್ರೋಗೆ ಗಗನಯಾನ ಕಕ್ಷಾ ವಾಹಕದ ರಚನೆ ಹಸ್ತಾಂತರ
author img

By

Published : Apr 5, 2022, 9:02 AM IST

Updated : Apr 5, 2022, 9:19 AM IST

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಮಾನವಸಹಿತ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್​​ಎಎಲ್) ಮೊದಲ ಹಂತದ ಹಾರ್ಡ್​ವೇರ್ ಹಸ್ತಾಂತರಿಸಿತು. ನಗರದ ಓಲ್ಡ್ ಏರ್ಪೋರ್ಟ್ ರಸ್ತೆಯ ಹೆಚ್​​ಎಎಲ್ ಸಂಸ್ಥೆಯ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎರಡನೇ ಹಂತದ ಪಿಎಸ್​​ಎಲ್​​ವಿ ರಾಕೆಟ್ ಜೋಡಣಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಯಿತು.

HAL hands over the first set of Gaganyaan hardware to ISRO
ಹೆಚ್​​ಎಎಲ್ ನಿಂದ ಇಸ್ರೋಗೆ ಗಗನಯಾನ ಕಕ್ಷಾ ವಾಹಕದ ರಚನೆ ಹಸ್ತಾಂತರ

ಈ ವೇಳೆ ಹೆಚ್​​ಎಎಲ್‌ನಿಂದ ಇಸ್ರೋಗೆ ಗಗನಯಾನ ಕಕ್ಷಾ ವಾಹಕದ ರಚನೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಮಾನವ ಸಹಿತ ಗಗನಯಾನ ದೇಶದ ಪ್ರಸ್ತುತ ಹಾಗೂ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದರು.

ಬಾಹ್ಯಾಕಾಶ ಮಿಷನ್​​ಗಳಲ್ಲಿ ಖಾಸಗಿಯವರ ಪಾತ್ರ: ಬಾಹ್ಯಾಕಾಶ ಮಿಷನ್​​ಗಳಲ್ಲಿ ಸ್ವದೇಶಿ ಹಾಗೂ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ಜಾರಿಗೆ ತರುವ ಸವಾಲಿನ ಕೆಲಸದಲ್ಲಿ ಹೆಚ್​​ಎಎಲ್ ಜೊತೆ ಜೊತೆಗೆ ಖಾಸಗಿಯವರ ಪಾತ್ರ ಕೂಡ ಬಹಳ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹೆಚ್​​ಎಎಲ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಮಾತನಾಡಿ, ಇಸ್ರೋ ಜತೆಗಿನ ನಾಲ್ಕು ದಶಕಗಳ ಸಂಬಂಧವನ್ನು ಮೆಲುಕು ಹಾಕಿದರು. ಜತೆಗೆ ಇಸ್ರೋ ಬಾಹ್ಯಾಕಾಶ ಉಡಾವಣಾ ವಾಹಕದ ಜೋಡಣೆ ಕಾರ್ಯದಲ್ಲಿ ಹೆಚ್​​ಎಎಲ್ ದೊಡ್ಡ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿದೆ. ಇಸ್ರೋ ಜತೆ ಹೆಚ್​​ಎಎಲ್ ನಂಬಿಕಸ್ಥ ಜೊತೆಗಾರನಾಗಿ ಸಮರ್ಪಣಾ ಮನೋಭಾವ ಹಾಗೂ ಹುರುಪಿನಿಂದ ಕಾರ್ಯನಿರ್ವಹಿಸಲಿದೆ ಎಂದರು.

ಇದನ್ನೂ ಓದಿ: ಇಸ್ರೋದಿಂದ ವರ್ಷದ ಮೊದಲ ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ 3 ಉಪಗ್ರಹಗಳು

Last Updated : Apr 5, 2022, 9:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.