ETV Bharat / city

ಜೆಡಿಎಸ್​ಗೆ ಅಧಿಕಾರ ಕೊಟ್ರೆ ಬೆಂಗಳೂರು ಕೆರೆಗಳಿಗೆ ನದಿ ನೀರು: ಹೆಚ್.ಡಿ.ಕೆ ಸಂಕಲ್ಪ - Kumarswamy promises bengaluru people

ಜೆಡಿಎಸ್​ ಜನತಾ ಜಲಧಾರೆ ಕಾರ್ಯಕ್ರಮ ಮುಂದುವರಿದಿದ್ದು, ಇಂದು ಬೆಂಗಳೂರು ಜನರಿಗೆ ಮಾಜಿ ಸಿಎಂ ಕುಮಾರಸ್ವಾಮಿ ನೀರಿನ ಭರವಸೆ ನೀಡಿದ್ದಾರೆ. ಜೆಡಿಎಸ್​ಗೆ ಅಧಿಕಾರ ಕೊಟ್ರೆ ನಗರದ ಎಲ್ಲ ಕೆರೆಗಳನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದಾರೆ.

H D Kumarswamy
ಹೆಚ್​ ಡಿ ಕುಮಾರಸ್ವಾಮಿ
author img

By

Published : May 12, 2022, 3:57 PM IST

ಬೆಂಗಳೂರು : ನಗರದ ಜಲಮೂಲಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಮಾಡಲಾಗುವುದು ಹಾಗೂ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಣ್ಣಮ್ಮ ದೇವಿ ಸನ್ನಿಧಾನದಲ್ಲಿ ಸಂಕಲ್ಪ ಮಾಡಿದ್ದಾರೆ.

ಅಧಿಕಾರ ನೀಡುವಂತೆ ಮನವಿ.. ನಗರದ ಗಾಂಧಿನಗರದಲ್ಲಿರುವ ಅಣ್ಣಮ್ಮ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಇಂದು ನಡೆದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಕೊಟ್ಟು ಐದು ವರ್ಷಗಳ ಸರ್ಕಾರ ರಚನೆ ಮಾಡಲು ಜನರು ಬೆಂಬಲ ನೀಡಿದರೆ, ನೀರಿನ ವಿಷಯದಲ್ಲಿ ಬೆಂಗಳೂರು ಜನರು ಎದುರಿಸುತ್ತಿರುವ ಎಲ್ಲ ಸಂಸ್ಥೆಗಳನ್ನು ಬಗೆಹರಿಸಲಾಗುವುದು ಎಂದು ಅವರು ಘೋಷಣೆ ಮಾಡಿದರು.

HDK in Annamma devi temple
ಅಣ್ಣಮ್ಮ ದೇವಿ ಆಶೀರ್ವಾದ ಪಡೆದ ಹೆಚ್​ ಡಿಕೆ

ಜಲ ಮೂಲಗಳು ರಕ್ಷಿಸಿ ಅದನ್ನು ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಲಧಾರೆ ಕಾರ್ಯಕ್ರಮ ರೂಪಿಸಲಾಗಿದೆ. ಕೆರೆಗಳನ್ನು ಉತ್ತಮಪಡಿಸಿ ಅವುಗಳಿಗೆ ನದಿ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಬೆಂಗಳೂರಿಗೆ ಕಾವೇರಿ ನೀರು ತಂದಿದ್ದು ಹೆಚ್​ ಡಿಡಿ.. ಹೆಚ್​ ಡಿ ದೇವೇಗೌಡರು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅನೇಕ ನೀರಾವರಿ ಯೋಜನೆಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ. ಕಾವೇರಿ ನದಿಯಿಂದ 9 ಟಿ ಎಂ ಸಿ ನೀರು ಸಿಕ್ಕಿದ್ದು ದೇವೇಗೌಡರು ಪ್ರಧಾನಿಯಾಗಿ ಮಾಡಿದ ಒಂದು ಆದೇಶ ಕಾರಣ. ಇವತ್ತು ನಗರದ ಜನ ಕಾವೇರಿ ನೀರು ಕುಡಿಯುತ್ತಿದ್ದರೆ ಅದಕ್ಕೆ ಕಾರಣ ಗೌಡರು ಎಂದರು.

ಐಟಿ ಕ್ರಾಂತಿಗೆ ಹೆಚ್​ ಡಿ ದೇವೇಗೌಡ ಕಾರಣ.. ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗೆ ಅಡಿಗಲ್ಲು ಹಾಕಿ ಮೊದಲ ಹಂತಕ್ಕೆ ಚಾಲನೆಗೆ ಕಾರಣವಾಗಿದ್ದು ನಾನು. ನಗರದ ಐಟಿ ಕ್ರಾಂತಿಗೆ ಮುನ್ನುಡಿ ಬರೆದವರು ದೇವೇಗೌಡರು. ನಗರಕ್ಕೆ ಐಟಿ ಪಾರ್ಕ್ ಬರಲು ಕೂಡ ಅವರೇ ಕಾರಣ. ವರ್ತುಲ ರಸ್ತೆ ಇತ್ಯಾದಿ ಮೂಲಸೌಕರ್ಯವನ್ನು ಕಲ್ಪಿಸಿದವರು ದೇವೇಗೌಡರೇ. ಇದನ್ನು ಬೆಂಗಳೂರು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನೆಲಮಂಗಲದಲ್ಲಿ ನಾಳೆ ಜಲಧಾರೆಯ ಬೃಹತ್ ಸಮಾವೇಶ ನಡೆಯಲಿದೆ. ಸುಮಾರು ಐದರಿಂದ ಆರು ಲಕ್ಷ ಜನರು ಭಾಗವಹಿಸಲಿದ್ದಾರೆ. ತಾಯಿ ಅಣ್ಣಮ್ಮ ದೇವಿಯ ಕೃಪೆಯಿಂದ ಮಳೆಗೆ ಕೊಂಚ ಬಿಡುವು ಸಿಗಲಿದೆ. ಯಾವುದೇ ಸಮಸ್ಯೆ ಇಲ್ಲದೆ ಸಮಾವೇಶ ನಡೆಯಲಿದೆ. ಸಾರ್ವಜನಿಕರು ನಿರಾತಂಕವಾಗಿ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು ಎಂದು ಹೆಚ್​ ಡಿ ಕುಮಾರಸ್ವಾಮಿ ಕರೆ ನೀಡಿದರು.

ಇದನ್ನೂ ಓದಿ.. ಶಾಂತಿಯ ತೋಟವನ್ನು ಪವಿತ್ರಗೊಳಿಸಲು ಗಂಗಾ ಜಲ ಸಂಗ್ರಹಿಸಿದ್ದೇವೆ: ಸರ್ಕಾರಕ್ಕೆ ಹೆಚ್​ಡಿಕೆ ಟಾಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.