ETV Bharat / city

ಸಂಸತ್ತಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನಡೆದುಕೊಂಡ ರೀತಿ ಸರಿಯಲ್ಲ: ಹೆಚ್​​ಡಿಡಿ

ಸಂಸತ್ತಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನಡೆದುಕೊಂಡ ರೀತಿ ಸರಿಯಲ್ಲ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

dewegowda
ಮಾಜಿ ಪ್ರಧಾನಿ ದೇವೇಗೌಡ
author img

By

Published : Aug 15, 2021, 10:45 AM IST

ಬೆಂಗಳೂರು: ಸಂಸತ್ತಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನಡೆದುಕೊಂಡಿದ್ದು ಸರಿಯಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಜೆ.ಪಿ.ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅಧಿವೇಶನ ನಡೆದ ಅಷ್ಟು ದಿನಗಳು ಕೂಡ ಸರಿಯಾಗಿ ಚರ್ಚೆ ನಡೆಯಲಿಲ್ಲ. ಇನ್ನು ಮುಂದೆಯಾದ್ರೂ ರಾಷ್ಟ್ರೀಯ ಪಕ್ಷಗಳು ಸರಿಯಾಗಿ ನಡೆದುಕೊಳ್ಳಬೇಕು. ನಮ್ಮ ದೇಶಕ್ಕೆ ಅಂಬೇಡ್ಕರ್ ಸಂವಿಧಾನ ರಚನೆ ಮಾಡುವಾಗ ಎಲ್ಲ ಮುಖಂಡರು ಸೇರಿ ರಾಜ್ಯಸಭೆ, ಲೋಕಸಭೆ ಎರಡನ್ನು ದೇಶಕ್ಕೆ ಅನುಷ್ಟಾನ ಮಾಡಿಕೊಟ್ಟರು. ಅದರ ಮೌಲ್ಯಗಳನ್ನು ಸ್ವಲ್ಪ ಮಟ್ಟಿಗೆ ಎಂಬಂತೆ ದಿನೇ ದಿನೆ ಹೀಗೆ ಧಿಕ್ಕರಿಸಿ ನಡೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಚರ್ಚೆಗೆ ಹಲವು ವಿಷಯಗಳಿದ್ದವು:

25 ದಿನಗಳ ಕಾಲ ನಡೆದ ಅಧಿವೇಶನವನ್ನು ನೋಡಿದ್ದೇನೆ. 24 ದಿನವೂ ಸರಿಯಾಗಿ ಆಗಲಿಲ್ಲ. ಒಂದೇ ಒಂದು ಕಾರ್ಯಕ್ರಮ ಆಗಲಿಲ್ಲ. ಇದು ಆಗಬಾರದು. ನಾನಗಲೇ ಇದರ ಬಗ್ಗೆ ಮಾತನಾಡಿದ್ದೇನೆ. ಇದು ಒಳ್ಳೆಯ ಸಂಪ್ರದಾಯ ಅಲ್ಲ. ಏನೇ ಕಾರ್ಯಕ್ರಮ ನಡೆದರೂ, ಸರ್ಕಾರದ ವಿರುದ್ಧವಾಗಿ ಕಾಂಗ್ರೆಸ್ ಕಾರ್ಯಕ್ರಮ ಗಳು ನಡೆಯುತ್ತಿವೆ. ಇಲ್ಲಿ ಪರಸ್ಪರ ಸ್ಪರ್ಧೆ ಅಷ್ಟೇ ಆಗಿದೆ. ಇದು ಸಂವಿಧಾನಕ್ಕೆ ಕೊಟ್ಟ ಅಗೌರವ. ಹಲವಾರು ವಿಷಯಗಳು ಚರ್ಚೆಗೆ ಇದ್ದವು. ಬೆಲೆ ಏರಿಕೆ, ಕೋವಿಡ್, ರೈತರದ್ದು ಎಂಬಂತೆ ಹಲವಾರು ವಿಚಾರ ಚರ್ಚೆಗೆ ಇದ್ದವು. ಆದರೆ ಯಾವುದೂ ಚರ್ಚೆಯಾಗಿಲ್ಲ. ಒಂದೇ ಒಂದು ಬಿಲ್ ಪಾಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಾನಂಗಳದಲ್ಲಿ ಹಾರಾಡಿತು 150 ಅಡಿ ಎತ್ತರದ ತ್ರಿವರ್ಣ ಧ್ವಜ

ಆಗಸ್ಟ್ 22 ರಿಂದ ನಾನು ಕಚೇರಿಯಲ್ಲಿಯೇ ಇರುತ್ತೇನೆ. ಮತ್ತೆ ದೆಹಲಿಗೆ ನಾನು ಹೋಗಲ್ಲ. ನಾನು ಕಚೇರಿಗೆ ಬರುತ್ತೇನೆ, ಪ್ರವಾಸ ಮಾಡೋದಾದ್ರೆ ಮಾಡ್ತೇನೆ. ಕುಮಾರಸ್ವಾಮಿಯವರು, ನಮ್ಮ ಅನೇಕ ಮುಖಂಡರು ಹಲವಾರು ಕಾರ್ಯಕ್ರಮ ಮಾಡಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ, ನಮ್ಮ ಪಕ್ಷದ ನೆಲೆಗಟ್ಟಿನ ಮೇಲೆ ಕೆಲಸ ಮಾಡುತ್ತೇವೆ. ಪಕ್ಷ ಸಂಘಟನೆ ಮಾಡುತ್ತೇವೆ. ನವೆಂಬರ್​ವರೆಗೆ ನಮಗೆ ಯಾವುದೇ ಸೆಷನ್ ಇಲ್ಲ. ಹಾಗಾಗಿ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದರು.

ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡ್ತೇವೆ:

ಕೊರೊ‌ನಾ‌ ಮಹಾಮಾರಿ ಕೇವಲ ಭಾರತ ಅಲ್ಲ, ಇಡೀ ಪ್ರಪಂಚವನ್ನು ಪೀಡಿಸುತ್ತಿದೆ. ಕೇಂದ್ರದಲ್ಲಿ ಇದರ ಬಗ್ಗೆ ಆಸಕ್ತಿ ಇಲ್ಲ ಅಂತ ಹೇಳ್ತಾ ಇಲ್ಲ. ಅವರೂ ಸರ್ವ ಪ್ರಯತ್ನ ಮಾಡ್ತಾ ಇದ್ದಾರೆ. ನಮ್ಮ ರಾಜ್ಯ ಕೂಡ ಉಪಯೋಗ ಮಾಡಿಕೊಳ್ಳಬೇಕು. 20 ಪರ್ಸೆಂಟ್ ಮಾತ್ರ ವ್ಯಾಕ್ಸಿನ್ ಆಗಿದೆ. ವ್ಯಾಕ್ಸಿನ್ ಕೊರತೆ ಇದೆ ಅಂತಿದ್ದಾರೆ. ಸರ್ಕಾರ ಎಲ್ಲಿ ತಪ್ಪು ದಾರಿಗೆ ಹೋಗುತ್ತೋ ಅದರ ಬಗ್ಗೆ ಹೋರಾಟ ಮಾಡುತ್ತೇವೆ. ಪ್ರಾದೇಶಿಕ ಪಕ್ಷ ಉಳಿಸಲು ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನಾನು ಇಂದು ಮಾತನಾಡಲ್ಲ. ಕುಮಾರಸ್ವಾಮಿ ಈ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಪಕ್ಷಕ್ಕೆ ಶಕ್ತಿ ತುಂಬಲು ಅನೇಕ ಕಾರ್ಯಕ್ರಮ ಮಾಡುತ್ತೇನೆ ಎಂದರು.

ಹೆಚ್​ಡಿಕೆಯಿಂದ ಶುಭಾಶಯ:

ಮಾಜಿ ಸಿಎಂ ಕುಮಾರಸ್ವಾಮಿ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಈ‌ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮಲ್ಲಿ ನಾನಾ ಜಾತಿ-ಧರ್ಮಗಳು, ವಿವಿಧ ಭಾಷೆಗಳು, ವಿಶಿಷ್ಟ ಜೀವನಶೈಲಿಗಳಂತಹ ಹಲವಾರು ವರ್ಗಗಳಿದ್ದರೂ, ನಮೆಲ್ಲರನ್ನು ಒಗ್ಗೂಡಿಸಲು ನಮ್ಮಲ್ಲಿರುವ ಭಾರತೀಯತೆಯ ಒಂದು ಅಂಶ ಸಾಕು ಎಂದಿದ್ದಾರೆ.

  • ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮಲ್ಲಿ ನಾನಾ ಜಾತಿ-ಧರ್ಮಗಳು, ವಿವಿಧ ಭಾಷೆಗಳು, ವಿಶಿಷ್ಟ ಜೀವನಶೈಲಿಗಳಂತಹ ಹಲವಾರು ವರ್ಗಗಳಿದ್ದರೂ, ನಮೆಲ್ಲರನ್ನು ಒಗ್ಗೂಡಿಸಲು ನಮ್ಮಲ್ಲಿರುವ ಭಾರತೀಯತೆಯ ಒಂದು ಅಂಶ ಸಾಕು. (1/2) #happyindependenceday pic.twitter.com/toLoI9Vp4S

    — H D Kumaraswamy (@hd_kumaraswamy) August 15, 2021 " class="align-text-top noRightClick twitterSection" data=" ">

ಈ ಪುಣ್ಯದಿನದ ಹಿಂದಿರುವ ಅಸಂಖ್ಯಾತ ತ್ಯಾಗ ಮತ್ತು ಬಲಿದಾನಗಳನ್ನು ವಿಧೇಯತೆಯಿಂದ ಸ್ಮರಿಸುತ್ತಾ, ಬ್ರಿಟಿಷರ ನೂರಾರು ವರ್ಷಗಳ ಸರ್ವಾಧಿಕಾರದ ಸರಪಳಿಯನ್ನು ಕಿತ್ತೊದಗಿದ ಈ ಅಮೃತ ಮಹೋತ್ಸವದಂದು ಭಾರತ ಮಾತೆಗೆ ಗರ್ವದಿಂದ ಗೌರವ ಸಲ್ಲಿಸೋಣ ಎಂದು ಕರೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.