ಬೆಂಗಳೂರು: ಹೆಚ್‌ಎಎಲ್ ನೌಕರರ ಹೋರಾಟ ಮತ್ತು ಹೆಚ್ಎಎಲ್ ಮ್ಯಾನೇಜ್‌ಮೆಂಟ್ ವಿಷಯ ಈಗ ರಾಜ್ಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ನೌಕರರ ಮಕ್ಕಳನ್ನ ಶಿಶುಪಾಲನಾ ಕೇಂದ್ರಕ್ಕೆ ಸೇರಿಸಿಕೊಳ್ಳಬೇಡಿ ಎಂದು ಹೆಚ್ಎಎಲ್ ಮ್ಯಾನೇಜ್‌ಮೆಂಟ್ ಅಧಿಕಾರಿಯೊಬ್ಬರು ಸೂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ನಿನ್ನೆ ಹೆಚ್ಎಎಲ್ ಶಿಶುಪಾಲನಾ ಕೇಂದ್ರದಿಂದ ನೌಕರರ ಮಕ್ಕಳನ್ನು ಮನೆಗೆ ಕಳುಹಿಸಿದ ವಿಡಿಯೋ ಈಗ ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಮಾರತ್ತಹಳ್ಳಿಯ ಸೆಂಟ್ರಲ್ ಟೌನ್ಶಿಪ್ ಶಿಶುಪಾಲನಾ ಕೇಂದ್ರದಲ್ಲಿ ಘಟನೆ ನಡೆದಿದೆ. ಫ್ಯಾಮಿಲಿ ವೆಲ್ಫೇರ್ ವಿಭಾಗದ ಮುಖ್ಯ ಅಧಿಕಾರಿ ಸೂಚನೆ ಮೇರೆಗೆ ಮಗುವನ್ನು ಮನೆಗೆ ಕಳುಹಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಹೆಚ್ಎಎಲ್ ನೌಕರರ ಪ್ರತಿಭಟನೆ ಮೂರನೇ ದಿನವೂ ಮುಂದುವರೆದಿದ್ದು, ಬೇಡಿಕೆ ಈಡೇರುವ ತನಕ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ನೌಕರರು ನಿರ್ಧರಿಸಿದ್ದಾರೆ. ಹೆಚ್ಎಎಲ್ ನೌಕರರ ಹೋರಾಟವನ್ನ ಹತ್ತಿಕ್ಕಲು ಈ ರೀತಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.