ETV Bharat / city

ದಿನವೂ ನೂರಾರು ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ... ಸಮಾಜಸೇವಕನಿಂದ ನಿಸ್ವಾರ್ಥ ಸೇವೆ - ದಿನವೂ ನೂರಾರು ಪೌರ ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ

ಕೋವಿಡ್​ ಸಂಕಷ್ಟ ಕಾಲದಲ್ಲಿ ಹಲವಾರು ಜನರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇವರ ಸಾಲಿನಲ್ಲಿ ಬೆಂಗಳೂರಿನ ಗುರುದತ್ತ ಪ್ರಭು ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತಾರೆ. ದಿನವೂ ನೂರಾರು ಮಂದಿ ಪೌರಕಾರ್ಮಿಕರಿಗೆ ದಿನಸಿ ಕಿಟ್ ಒದಗಿಸುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.

Bangalore
Bangalore
author img

By

Published : May 26, 2021, 8:59 AM IST

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಲಾಕ್​ಡೌನ್ ಪ್ರಾರಂಭವಾದ ದಿನದಿಂದ ನೂರಾರು ಪೌರ ಕಾರ್ಮಿಕರಿಗೆ ದಿನಸಿ ಕಿಟ್ ಹಂಚುವ ಮೂಲಕ ಗುರುದತ್ತ ಪ್ರಭು ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.

ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ದಿನವೂ ಸುಮಾರು 100 ಜನ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ಕೊಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ನಗರ ಸ್ವಚ್ಛ ಇಡುವ ಕಾರ್ಯಕ್ಕೆ ಅವರ ಕೊಡುಗೆ ಬಹಳ ಮುಖ್ಯ ಎಂದು ಸಮಾಜ ಸೇವಕ ಗುರುದತ್ತ ಪ್ರಭು ಹೇಳಿದರು. ನಿತ್ಯ ನೂರಾರು ಬಡ ಜನರಿಗೆ, ಪೌರ ಕಾರ್ಮಿಕರಿಗೆ ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ನಿಸ್ವಾರ್ಥ ಭಾವದಿಂದ ತಮ್ಮ ಸ್ವಂತ ಹಣದಿಂದ ದಿನಸಿ ಕಿಟ್ ಹಂಚುತ್ತಿರುವ ಪ್ರಭು ಎಲ್ಲರಿಗೂ ಮಾದರಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆಯಿಂದ ಜನರು ಭಯಭೀತರಾಗಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರ ವೈದ್ಯಕೀಯ ವ್ಯವಸ್ಥೆ ಬಹಳ ಧೈರ್ಯದಿಂದ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ, ನಮ್ಮ ವೈದ್ಯಕೀಯ ಸೌಲಭ್ಯಗಳು, ಆಮ್ಲಜನಕದ ಕೊರತೆ, ಐಸಿಯು ಸಿಗದಿದ್ದಕ್ಕೆ ಸಾಕಷ್ಟು ಸಾವು ನೋವುಗಳನ್ನು ಕಂಡಿದ್ದೇವೆ. ಈ ಸಂದರ್ಭದಲ್ಲಿ ನಾವು ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಈ ರೋಗದಿಂದ ಪಾರಾಗುವುದು ಹೇಗೆ ಎಂದು ಜಾಗೃತಿ ಮೂಡಿಸುವಂತಹ ಕೆಲಸವನ್ನು ಸಹ ಮಾಡಬೇಕಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ನಾವು ಜಾಗೃತಿ ಮೂಡಿಸುವಂತಹ, ಧೈರ್ಯ ತುಂಬುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯವನ್ನು ತುಂಬಿ, ಮುಖ್ಯವಾಗಿ ಧೈರ್ಯ ತುಂಬುವಂತಹ ಕೆಲಸವನ್ನು ಮಾಡಬೇಕು. ಹಲವರು ಸಹಾಯ ಕೇಳಿಕೊಂಡು ಬರುತ್ತಾರೆ. ಆಮ್ಲಜನಕ, ಐಸಿಯು ಬೇಕಾಗಿರುತ್ತದೆ. ಅಂತಹ ಸಮಯದಲ್ಲಿ ಜನಪ್ರತಿನಿಧಿಗಳು, ವೈದ್ಯರನ್ನು ಸಂಪರ್ಕಿಸಿ ಯಾವ ಆಸ್ಪತ್ರೆಗಳಲ್ಲಿ ಸೌಲಭ್ಯಗಳಿವೆ ಎಂದು ತಿಳಿಹೇಳುವ ಕೆಲಸವನ್ನು ಮಾಡಿಕೊಂಡು, ಸೇರಿಸುವಂತಹ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಆಕ್ಸಿಜನ್​ ಸಂಪರ್ಕ ಕಿತ್ತು ಇನ್ನೋರ್ವ ರೋಗಿಗೆ ನೀಡಿದ ಆರೋಪ: ಸೋಂಕಿತ ಸಾವು

ಶವ ಸಂಸ್ಕಾರಕ್ಕೆ ಯಾವ ರೀತಿ ಮಾಹಿತಿ ಪಡೆಯಬೇಕು ಎಂದು ಗೊತ್ತಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳ ಸಹಾಯ ಪಡೆದು ಗೈಡ್ ಮಾಡುತ್ತೇವೆ. ನಮ್ಮ ಸಮಾಜಮುಖಿ ಕಾರ್ಯಗಳನ್ನು ನೋಡಿ ಸಂಬಂಧಿಕರಿಗಾಗಿ ಜನರು ತುಂಬಾ ದೂರದ ಊರುಗಳಿಂದ ಕರೆ ಮಾಡುತ್ತಾರೆ. ಮುಂಬೈ, ದೆಹಲಿ, ಮಂಗಳೂರು, ದುಬೈ, ಅಮೆರಿಕದಿಂದ ಸಹಾಯ ಕೋರಿ ಕರೆಗಳು ಬರುತ್ತಿವೆ ಎಂದು ಹೇಳಿದರು.

ಇನ್ನು ರೆಮ್ಡಿಸಿವಿರ್ ಔಷಧ, ಬೆಡ್, ಐಸಿಯು ಒದಗಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ. ಫ್ರಂಟ್ ಲೈನ್ ವಾರಿಯರ್ಸ್​ಗಳಾದ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆರಿಗೆ ಮಾಸ್ಕ್, ಸ್ಯಾನಿಟೈಸರ್ ಕೊಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಆಯುಷ್ ಇಲಾಖೆಯಿಂದ ಮಾನ್ಯತೆ ಪಡೆದ ಆಯುಷ್ ವಾತ್ ಎನ್ನುವ ಕಷಾಯವನ್ನು ಸಹ ಕೊಡುತ್ತಿದ್ದೇವೆ ಎಂದು ಹೇಳಿದರು.

ಧೈರ್ಯ ತುಂಬುವ ಕೆಲಸವಲ್ಲದೆ, ಅವರ ಆರೋಗ್ಯವನ್ನು ಕಾಪಾಡುವ ಕೆಲಸವನ್ನು ಸಹ ಮಾಡುತ್ತಿದ್ದೇವೆ. ದಿನಾಲೂ ಸುಮಾರು 100 ಜನ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ಸಹ ಕೊಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ನಗರ ಸ್ವಚ್ಛ ಇಡುವ ಕಾರ್ಯಕ್ಕೆ ಅವರ ಕೊಡುಗೆ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು. ಮೊದಲನೇಯ ಅಲೆಯಿಂದಲೂ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದೇವೆ. ಮಲ್ಲೇಶ್ವರದ ಕಾಶಿ ಮಠ ಮತ್ತು ಪಾರ್ಥಸಾರಥಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುಗಳ ಅಣತಿಯಂತೆ ಸುಮಾರು ಎರಡು ಲಕ್ಷ ಆಹಾರ ಪೊಟ್ಟಣಗಳನ್ನು ಮತ್ತು 1300 ದಿನಸಿ ಕಿಟ್​ಗಳನ್ನು ಸಹ ವಿತರಿಸಿದ್ದೇವೆ ಎಂದು ಹೇಳಿದರು.

ಮಹಾಲಕ್ಷ್ಮೀಪುರ, ಮಲ್ಲೇಶ್ವರ, ರಾಜಾಜಿನಗರದ ಸುಮಾರು 7ರಿಂದ 8 ವಾರ್ಡ್​ಗಳ ಪೌರ ಕಾರ್ಮಿಕರಿಗೆ, ಆಶಾ ಕಾರ್ಯಕರ್ತೆಯರಿಗೆ, ಮಾಸ್ಕ್, ಸ್ಯಾನಿಟೈಸರ್, ಜಿಂಕೋವಿಟ್ ಮಾತ್ರೆಗಳನ್ನು ಕೊಟ್ಟಿದ್ದೇವೆ. ರಾಜಾಜಿನಗರ, ಮಲ್ಲೇಶ್ವರ, ಬಸವೇಶ್ವರನಗರದ ಪೊಲೀಸ್ ಠಾಣೆಗಳ ಸಿಬ್ಬಂದಿಗೆ ಕಷಾಯ, ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದೇವೆ ಎಂದು ತಮ್ಮ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಇಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಜನರ ಮಧ್ಯದಲ್ಲಿ ಇದ್ದೇವೆ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಕೇರಳದಿಂದ ರೆಮ್ಡಿಸಿವಿರ್‌ ಖರೀದಿಸಿ ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಎಲ್ಲರೂ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನನ್ನ ಮನವಿ ಏನೆಂದರೆ ದಯವಿಟ್ಟು ಮನೆಯ ಹೊರಗೆ ಹೋಗಬೇಡಿ. ಹೋದರೂ ಸಾಮಾಜಿಕ ಅಂತರವಿರಲಿ, ಮಾಸ್ಕ್ ಧರಿಸಿ ಸೋಂಕಿತರಿಗೆ ಧೈರ್ಯ ತುಂಬುವಂತಹ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.