ಬೆಂಗಳೂರು: ತಡವಾಗಿ ಮನೆಗೆ ಬಂದ ಕಾರಣ ಅಣ್ಣನೊಬ್ಬ ತನ್ನ ತಮ್ಮನನ್ನು ಪ್ರಶ್ನೆ ಮಾಡಿದ್ದಾನೆ. ಈ ಸಿಟ್ಟಿನಲ್ಲಿ ತಮ್ಮ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ವೇಳೆ ಜಗಳ ಬಿಡಿಸಲು ಒಬ್ಬ ಸ್ನೇಹಿತನಿಗೆ ಗಾಯವಾಗಿರುವ ಘಟನೆ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಮನೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬಿಬಿಎಂಪಿ ಮಾಜಿ ಸದಸ್ಯ ಸಮೀವುಲ್ಲಾ ಎಂಬುವರ ಮನೆಯಲ್ಲಿ ಡಿಸೆಂಬರ್ 20ರ(ಸೋಮವಾರ) ಬೆಳಗಿನ ಜಾವ ಈ ಘಟನೆ ನಡೆದಿದೆ. ಸಮೀವುಲ್ಲಾಗೆ ಅಮಿನ್ದಾದ ಮತ್ತು ಸಲ್ಮಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಹೊರ ಹೋಗಿದ್ದ ಕಿರಿಯ ಮಗ ಸಲ್ಮಾನ್ ನಿನ್ನೆ ಮನೆಗೆ ತಡವಾಗಿ ಸ್ನೇಹಿತನ ಜೊತೆ ಬಂದಿದ್ದ.
ಮನೆಯಲ್ಲಿದ್ದ ಅಣ್ಣ ಅಮಿನ್ ದಾದಾ ತಮ್ಮನನ್ನು ಪ್ರಶ್ನಿಸಿ ಗದರಿಸಿದ್ದಾರೆ. ಇದರಿಂದ ಕೆರಳಿದ ಸಲ್ಮಾನ್ ಪಿಸ್ತೂಲ್ನಿಂದ ಮೂರು ಬಾರಿ ಫೈರ್ ಮಾಡಿದ್ದಾನೆ. ಮೊದಲ ಗುಂಡು ಗೋಡೆಗೆ, ಎರಡನೇ ಗುಂಡು ಮನೆಯ ಛಾವಣಿಗೆ ಹಾರಿಸಿ, ಮೂರನೇಯದಾಗಿ ತನ್ನ ತಲೆಗೆ ಇಟ್ಟುಕೊಂಡು ಶೂಟ್ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಬಿಡಿಸಲು ಬಂದ ಸ್ನೇಹಿತ ಫೈಜಲ್ನ ಬಲಗೈಗೆ ಗುಂಡು ಹಾರಿಸಿದ್ದಾನೆ. ಸದ್ಯ ಫೈಜಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಲ್ಮಾನ್ ಹಾಗೂ ಆತನ ಅಣ್ಣ ಅಮಿನ್ ದಾದ ಪ್ರತಿ ದಿನ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದರಂತೆ. ಮೆಂಟಲ್ ಎಂದು ಸಲ್ಮಾನ್ಗೆ ಅಮಿನ್ ಆಗಾಗ್ಗೆ ಬೈಯುತ್ತಿದ್ದ. ಇದರಿಂದ ಸಿಟ್ಟಾದ ಸಲ್ಮಾನ್ ಪಿಸ್ತೂಲ್ ಹಿಡಿದು ತಲೆಗೆ ಗುಂಡು ಹಾರಿಸಿಕೊಳ್ಳುವುದಕ್ಕೆ ಮುಂದಾಗಿದ್ದ. ಆದರೆ ತಕ್ಷಣ ಸ್ನೇಹಿತ ಫೈಜಲ್ ಪಿಸ್ತೂಲ್ ಅನ್ನು ಸಲ್ಮಾನ್ ಕೈಯಿಂದ ಬೇರೆಡೆ ತಿರುಗಿಸಿದ್ದನು.
ಘಟನೆ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಲ್ಮಾನ್ನನ್ನ ವಶಕ್ಕೆ ವಶಕ್ಕೆ ಪಡೆದುಕೊಳ್ಳಲಾಗಿದೆ. 2007ರಲ್ಲಿ ರವಿ ಪೂಜಾರಿ ಸಹಚರರಿಂದ ಸಮೀವುಲ್ಲಾ ಕಚೇರಿ ಮೇಲೆ ಶೂಟೌಟ್ ನಡೆದಿತ್ತು. ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ರವಿ ಮತ್ತು ಶ್ವೇತಾ ಎಂಬ ಇಬ್ಬರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಆಟೋ ಮೇಲೆ ಉರುಳಿಬಿದ್ದ ಲಾರಿಗಳು.. ಅಪ್ಪ-ಅಮ್ಮನೊಂದಿಗೆ ಮಗು ಸ್ಥಳದಲ್ಲೇ ಸಾವು!