ಬೆಂಗಳೂರು: ಭರ್ಜರಿ ಕಾರ್ಯಾಚರಣೆ ನಡೆಸಿ ದರೋಡೆ, ಕಳ್ಳತನ, ಸರಗಳ್ಳತನ ಸೇರಿದಂತೆ 342 ಪ್ರಕರಣಗಳನ್ನು ಬೇಧಿಸಿರುವ ದಕ್ಷಿಣ ವಿಭಾಗ ಪೊಲೀಸರು, ಒಟ್ಟು 229 ಆರೋಪಿಗಳಿಂದ ₹ 5.17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಪತ್ತೆಯಾದ ವಸ್ತುಗಳನ್ನು ಸಾರ್ವಜನಿಕರಿಗೆ ಹಿಂದಿರುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಏನೇನು ಪತ್ತೆ: 8.7 ಕೆಜಿ ಚಿನ್ನ, 25 ಕೆಜಿ ಬೆಳ್ಳಿ, 155 ಮೂರು ಚಕ್ರದ ವಾಹನಗಳು, 10 ನಾಲ್ಕು ಚಕ್ರದ ವಾಹನಗಳು, 122 ಮೊಬೈಲ್, 54 ಲ್ಯಾಪ್ಟಾಪ್ ಹಾಗೂ 23.85 ಲಕ್ಷ ನಗದು ಸೇರಿ ಒಟ್ಟು ₹ 5.17 ಕೋಟಿ ಮೌಲ್ಯದ ವಸ್ತಗಳನ್ನ ಜಪ್ತಿ ಮಾಡಿದ್ದಾರೆ.
ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಫಟ್ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾರ್ಯಾಚರಣೆ ನಡೆಸುವಂತೆ ಆದೇಶ ನೀಡಿದ್ದರು.
ವಶಪಡಿಸಿಕೊಂಡಿರುವ ಎಲ್ಲ ವಸ್ತುಗಳ ವಾರಸುದಾರರ ಪತ್ತೆ ಹಚ್ಚಿ ಪೊಲೀಸರು ನಗರ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಅವರಿಗೆ ವಸ್ತುಗಳನ್ನು ಮರಳಿಸಲಾಯಿತು. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ ಹಾಗೂ ಉತ್ತಮ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳಿಗೆ ಬಹುಮಾನ ನೀಡಲಾಯಿತು.