ಬೆಂಗಳೂರು : ಕಾಂಗ್ರೆಸ್ ಪಾದಯಾತ್ರೆ ಚುನಾವಣೆ ಟೈಮ್‌ನಲ್ಲಿ ವೋಟ್‌ಬ್ಯಾಂಕ್ ಆಗುತ್ತದೆಯೇ ಹೊರತು ಜನಪರ ಆಗಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ಆರ್.ಟಿ.ನಗರದಲ್ಲಿ ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಪಾದಯಾತ್ರೆ ಮಾಡಲು ನಮ್ಮ ವಿರೋಧವಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೆ ಹೋರಾಟ ಮಾಡುವ ಹಕ್ಕಿದೆ. ಸಮಯ ಸಂದರ್ಭ ನೋಡ್ಕೊಂಡು ಹೋರಾಟ ಮಾಡಬೇಕು.
ಕೊರೊನಾ ಬರುವ ಸಮಯದಲ್ಲಿ ಜನರನ್ನು ಸೇರಿಸಿ ಹೋರಾಟ ಮಾಡುವುದು ಎಷ್ಟು ಸರಿ?. 2013-18ರವರೆಗೂ ಕಾಂಗ್ರೆಸ್ ಸರ್ಕಾರ ನೀರಾವರಿಯಲ್ಲಿ ಮಾಡಬೇಕಾದ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಸರ್ಕಾರಿ ನೌಕರರಿಗೆ ಬಂಪರ್.. ಶೇ.23ರಷ್ಟು ವೇತನ ಹೆಚ್ಚಳ.. ನಿವೃತ್ತಿ ವಯಸ್ಸು 2 ವರ್ಷ ಏರಿಕೆ ಮಾಡಿದ ಜಗನ್..
ಕೊರೊನಾ ಮಾರ್ಗಸೂಚಿ ಪಾಲಿಸಿ ಹೋರಾಟ ಮಾಡಲಿ. ಸಿದ್ದರಾಮಯ್ಯನವರು ಅಣ್ಣಾಮಲೈ ವಿರೋಧ ಮಾಡ್ತಿದ್ದಾರೆ ಅಂತಾ ಹೇಳ್ತಿದ್ದಾರೆ. ಅಣ್ಣಾಮಲೈ ಚುನಾಯಿತ ಪ್ರತಿನಿಧಿಯಲ್ಲ, ಪಕ್ಷದ ಅಧ್ಯಕ್ಷ. ಅಲ್ಲಿರುವುದು ಡಿಎಂಕೆ ಮತ್ತು ಕಾಂಗ್ರೆಸ್ ಶಾಸಕರು, ನಿಮ್ಮ ಶಾಸಕರಿಗೆ ಒತ್ತಾಯ ಮಾಡಿ. ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೀನಿ.
ನಾನು ಮತ್ತು ಮುಖ್ಯಮಂತ್ರಿಗಳು ಕಾನೂನು ಹೋರಾಟ ಮಾಡಲು ಲೀಗಲ್ ಟೀಂ ಜತೆ ಮಾತನಾಡಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರ ಜತೆ ಮಾತನಾಡಿದ್ದೇವೆ, ಪರಿಸರ ಮಂಜೂರಾತಿ ತೆಗೆದುಕೊಂಡಿದ್ದೇವೆ. ಯೋಜನೆ ಜಾರಿಗೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ವೀಕೆಂಡ್ ಕರ್ಪ್ಯೂಗೆ ಸಾರ್ವಜನಿಕರ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನರು ಸಹಕರಿಸಬೇಕಿದೆ. ಇಡೀ ವಿಶ್ವದಲ್ಲಿ ಕೋವಿಡ್ನಿಂದ ಸಾವು-ನೋವು ಸಂಭವಿಸಿವೆ. ರಾಜ್ಯದಲ್ಲೂ ಸಮಸ್ಯೆ ಆಗಿತ್ತು. ಮತ್ತೆ ಆ ಸಮಸ್ಯೆ ಆಗಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಏನು ಕ್ರಮ ತಗೆದುಕೊಳ್ಳಬೇಕೋ ಅದನ್ನ ನಾವು ತೆಗೆದುಕೊಂಡಿದ್ದೇವೆ. ಜನರ ರಕ್ಷಣೆ ಮಾಡೋದು ಕೋವಿಡ್ ನಿಯಂತ್ರಣ ಮಾಡೋದು ಸರ್ಕಾರದ ಜವಾಬ್ದಾರಿ ಇದೆ ಎಂದರು.
ಓದಿ: ವಿಡಿಯೋ ನೋಡಿ: ಭಾರಿ ಹಿಮಪಾತದ ನಡುವೆಯೂ ಗಸ್ತು ತಿರುಗುತ್ತಿರುವ ನಮ್ಮ ವೀರ ಯೋಧರು