ETV Bharat / city

ಸಚಿವ ಸಿ.ಟಿ.ರವಿ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ವಜುಭಾಯಿ ವಾಲಾ - .ಟಿ.ರವಿ ರಾಜೀನಾಮೆಯನ್ನು ಅಂಗೀಕಾರ

ಸಚಿವ ಸ್ಥಾನಕ್ಕೆಸಿ.ಟಿ.ರವಿ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಗೀಕರಿಸಿದ್ದಾರೆ.

CTRAVI
ಸಿ.ಟಿ.ರವಿ ರಾಜೀನಾಮೆ
author img

By

Published : Nov 7, 2020, 11:41 PM IST

ಬೆಂಗಳೂರು: ಪ್ರವಾಸೋದ್ಯಮ, ಕನ್ನಡ ಹಾಗೂ ಸಂಸ್ಕೃತಿ ಸಚಿವ ಸ್ಥಾನಕ್ಕೆ ಸಿ.ಟಿ.ರವಿ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಿ.ಟಿ. ರವಿ, ಕಳೆದ ತಿಂಗಳು ಸಿಎಂಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದರು. ಆದರೆ, ಸಿಎಂ ಯಡಿಯೂರಪ್ಪ ರಾಜೀನಾಮೆ ಪತ್ರದ ಬಗ್ಗೆ ನಿರ್ಧಾರ ಕೈಗೊಂಡಿರಲಿಲ್ಲ. ಸದ್ಯಕ್ಕೆ ಸಚಿವನಾಗಿ ಮುಂದುವರಿಯುವಂತೆ ಸಿ.ಟಿ.ರವಿಗೆ ಸೂಚನೆ ನೀಡಿದ್ದರು.

Governor of Karnataka accepts resignation of Karnataka Minister CT Ravi
ಸಚಿವ ಸಿ.ಟಿ.ರವಿ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲ ವಜುಭಾಯಿ ವಾಲಾ
ಇದೀಗ ಸಿ.ಟಿ.ರವಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಸಿಎಂ ಶಿಫಾರಸಿನ ಮೇರೆಗೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.ರಾಜ್ಯೋತ್ಸವ ಪ್ರಶಸ್ತಿ ಪ್ರದಾನದ ಬಳಿಕ ಸಿ.ಟಿ.ರವಿ‌ ಮಾಧ್ಯಮದವರಿಗೆ ರಾಜೀನಾಮೆ ಅಂಗೀಕಾರವಾಗುವ ಮುನ್ಸೂಚನೆ ನೀಡಿದ್ದರು. ಶನಿವಾರ ಸಿಎಂ ಯಡಿಯೂರಪ್ಪ ಅವರು ಸಿ.ಟಿ.ರವಿ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದರು ಮತ್ತು ರಾಜೀನಾಮೆಯನ್ನು ಅಂಗೀಕರಿಸುವಂತೆ ಶಿಫಾರಸು ಮಾಡಿದ್ದರು. ಅದರಂತೆ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.