ಬೆಂಗಳೂರು: ಎರಡಂಕಿ ಲಾಟರಿ ಹಗರಣ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಅಮಾನತು ಆದೇಶವನ್ನು ಹಿಂಪಡೆದಿದೆ.
ಆರೋಪ ಕೇಳಿ ಬರುತ್ತಿದ್ದಂತೆ ಐದು ತಿಂಗಳು ಕಾಲ ಸರ್ಕಾರ ಅಲೋಕ್ಕುಮಾರ್ ಅವರನ್ನು ಅಮಾನತು ಮಾಡಿತ್ತು. ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂದು ಸಿಬಿಐ ವರದಿ ನೀಡಿದ ಹಿನ್ನೆಲೆ ಅಮಾನತು ಆದೇಶ ರದ್ದುಪಡಿಸಿ ಕರ್ತವ್ಯದಲ್ಲಿದ್ದಂತೆ ತೋರಿಸಲು ಸೂಚನೆ ನೀಡಿದೆ.
ಲಾಟರಿ ಹಗರಣಕ್ಕೂ ಅಲೋಕ್ ಕುಮಾರ್ಗು ಯಾವುದೇ ಸಂಬಂಧ ಇಲ್ಲ. ಅವರ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆ ಐದು ತಿಂಗಳು ಅಮಾನತು ಮಾಡಲಾಗಿತ್ತು. ಆದರೆ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಹೀಗಾಗಿ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಇಲ್ಲವೆಂದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದೀಗ ಅಮಾನತು ಮಾಡಿ ಶಿಸ್ತುಕ್ರಮ ಜರುಗಿಸಿದ್ದನ್ನ ರೆಗ್ಯುಲರ್ ಮಾಡಬಹುದು. ಸಿಬಿಐ ಅಧಿಕಾರಿಗಳಿಂದ ತನಿಖಾ ವರದಿ ಮತ್ತು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯದ ಮೂಲಕ ಮಾಹಿತಿ ನೀಡಿದೆ. ಅಲ್ಲದೆ ಎಫ್ಐಆರ್ ಹಾಗೂ ಚಾರ್ಜ್ ಶೀಟ್ನಲ್ಲಿ ಎಲ್ಲಿಯೂ ಅಲೋಕ್ ಕುಮಾರ್ ಹೆಸರು ಉಲ್ಲೇಖ ಆಗಿಲ್ಲ. ಸದ್ಯ ಇದರಿಂದ ಅಲೋಕ್ ಕುಮಾರ್ ಮೇಲೆ ಇದ್ದ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ.