ETV Bharat / city

ಪಡಿತರ ಅಕ್ಕಿ ಪ್ರಮಾಣ ಕಡಿತ ಮಾಡಿ ರಾಗಿ, ಜೋಳ ವಿತರಣೆ; ಅಕ್ಕಿ ಕಡಿತದ ಹಿಂದಿನ ಸರ್ಕಾರದ ಲೆಕ್ಕಾಚಾರ ಏನು? - ಬೆಂಗಳೂರು ಸುದ್ದಿ

ಅಕ್ಕಿಯನ್ನು ಹೊರರಾಜ್ಯಗಳಿಂದ ಆಮದು ಮಾಡಿಕೊಂಡು ವಿತರಿಸಲಾಗುತ್ತಿತ್ತು. ಅದರ ಬದಲಿಗೆ ನಮ್ಮದೇ ರಾಜ್ಯದ ರೈತರು ಬೆಳೆದ ರಾಗಿಯನ್ನು ಬೆಂಬಲ ಬೆಲೆ ನೀಡಿ ಖರೀದಿಸಿ ಪಡಿತರ ವ್ಯವಸ್ಥೆ ಮೂಲಕ ವಿತರಿಸಲು ನಿರ್ಧರಿಸಲಾಗಿದೆ.

rice
rice
author img

By

Published : Apr 29, 2021, 3:50 PM IST

ಬೆಂಗಳೂರು: ಸಾರ್ವಜನಿಕ ವಿತರಣಾ ಪದ್ಧತಿಯಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ವಿತರಿಸುತ್ತಿರುವ ಅಕ್ಕಿಯ ಪ್ರಮಾಣವನ್ನು ರಾಜ್ಯ ಸರ್ಕಾರ ಐದು ಕೆಜಿಯಿಂದ 2 ಕೆಜಿಗೆ ಮತ್ತೆ ಕಡಿತಗೊಳಿಸಿದೆ. ಅಕ್ಕಿ ಪ್ರಮಾಣ ಕಡಿತಗೊಳಿಸಿರುವ ಸಂಬಂಧ ಈಗಾಗಲೇ ಪ್ರತಿಪಕ್ಷ ಹಾಗೂ ಸಾರ್ವಜನಿಕ ವಲಯದಿಂದ ಟೀಕೆಗಳು ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಕೋವಿಡ್ ಭೀಕರತೆ ಮಧ್ಯೆ ಸರ್ಕಾರ ಪಡಿತರ ಅಕ್ಕಿ ಪ್ರಮಾಣ ಕಡಿತ‌ ಮಾಡಲು ಕಾರಣ ಏನು ಎಂಬ ವರದಿ ಇಲ್ಲಿದೆ.

ರಾಜ್ಯ ಸರ್ಕಾರದಿಂದ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ಈ ಹಿಂದೆ 5 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ವಿತರಿಸಲಾಗುತಿತ್ತು. ಈಗ ಹೊಸ ಪದ್ಧತಿಯಲ್ಲಿ ಈ ತಿಂಗಳಿನಿಂದ 2 ಕೆ.ಜಿ ಅಕ್ಕಿ, 3 ಕೆ.ಜಿ ರಾಗಿ ಮತ್ತು 2 ಕೆ.ಜಿ ಗೋಧಿ ನೀಡಲಾಗುತ್ತಿದೆ. ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಗೆ 15 ಕೆ.ಜಿ ಅಕ್ಕಿ, 20 ಕೆ.ಜಿ ರಾಗಿ ಪೂರೈಸಲಾಗುತ್ತಿದೆ. ಇಲ್ಲಿ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸಿರುವುದು ಕೆಲ ಕಾರ್ಡ್​ದಾರರ ಕಣ್ಣು ಕೆಂಪಾಗಿಸಿದೆ. 7 ಕೆಜಿ ಪಡಿತರ ಅಕ್ಕಿಯನ್ನು ಕಳೆದ ವರ್ಷ 5 ಕೆಜಿಗೆ ಕಡಿತಗೊಳಿಸಲಾಗಿತ್ತು. ಇದೀಗ ಮತ್ತೆ ಪಡಿತರ ಅಕ್ಕಿ ಪ್ರಮಾಣವನ್ನು 2 ಕೆಜಿಗೆ ಕಡಿತಗೊಳಿಸಿರುವುದರಿಂದ ಸರ್ಕಾರ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಅಕ್ಕಿ ಕಡಿತಗೊಳಿಸಿರುವುದಕ್ಕೆ ಕೆಲ ಪಡಿತರದಾರರೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಆಹಾರ ಇಲಾಖೆ ಹೇಳುವುದೇನು?

ಅಕ್ಕಿಯನ್ನು ಹೊರರಾಜ್ಯಗಳಿಂದ ಆಮದು ಮಾಡಿಕೊಂಡು ವಿತರಿಸಲಾಗುತ್ತಿತ್ತು. ಅದರ ಬದಲಿಗೆ ನಮ್ಮದೇ ರಾಜ್ಯದ ರೈತರು ಬೆಳೆದ ರಾಗಿಯನ್ನು ಬೆಂಬಲ ಬೆಲೆ ನೀಡಿ ಖರೀದಿಸಿ ಪಡಿತರ ವ್ಯವಸ್ಥೆ ಮೂಲಕ ವಿತರಿಸಲು ನಿರ್ಧರಿಸಲಾಗಿದೆ. ಅದರಲ್ಲೂ ರಾಗಿ, ಜೋಳ ಬೆಳೆಯುವ ಕರ್ನಾಟಕದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಡಿತರ ಚೀಟಿದಾರರಿಗೆ ಅಕ್ಕಿ ಕಡಿತ ಮಾಡಿ ರಾಗಿ, ಜೋಳ ನೀಡಲು ನಿರ್ಧರಿಸಲಾಗಿದೆ.

ಅಕ್ಕಿಯನ್ನು ನಾವು ಛತ್ತೀಸಗಡ, ಹರಿಯಾಣದಿಂದ ತರುತ್ತಿದ್ದು, ಅಲ್ಲಿಯ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತಿದೆ. ಹೀಗಾಗಿ, ನಮ್ಮ ರೈತರಿಗೆ ಅನುಕೂಲ ಮಾಡಿಕೊಡಲು ಸ್ಥಳೀಯವಾಗಿ ಬೆಂಬಲ ಬೆಲೆಯಲ್ಲಿ ಖರೀದಿಸಿದ ರಾಗಿಯನ್ನು ಸ್ಥಳೀಯ ಕಾರ್ಡ್‌ದಾರರಿಗೆ ವಿತರಿಸಲಾಗುತ್ತಿದೆ. ಸ್ಥಳೀಯ ಜಿಲ್ಲೆಗಳ ಆಹಾರ ಪದ್ಧತಿಗೆ ಅನುಸಾರವಾಗಿ ಆಹಾರಧಾನ್ಯ ನೀಡಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಅಕ್ಕಿ ಹೆಚ್ಚಾಗಿ ಬಳಸದಿರುವ ಜಿಲ್ಲೆಗಳಲ್ಲಿ ಪಡಿತರ ಮೂಲಕ ನೀಡುವ ಅಕ್ಕಿಯನ್ನು ಅನೇಕ ಗ್ರಾಹಕರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಹೆಚ್ಚಾಗಿವೆ. ಹೀಗಾಗಿ ಪಡಿತರ ಅಕ್ಕಿ ದುರ್ಬಳಕೆಗೆ ನಿಯಂತ್ರಣ ಹೇರಲು ಪ್ರಾದೇಶಿಕ ಆಹಾರ ಪದ್ಧತಿಗೆ ಅನುಸಾರವಾಗಿ ಜೊತೆಗೆ ಸ್ಥಳೀಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಡಿತರ ಆಹಾರ ಧಾನ್ಯ ನೀಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ‌ ಪಡಿತರ ಪದ್ಧತಿ ಹೇಳುವುದೇನು?

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದಲ್ಲಿನ ಆದ್ಯತಾ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯವನ್ನು ವಿತರಿಸಬೇಕಾಗಿರುತ್ತದೆ. ಅದರಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಸಹಾಯ ಧನ (ಸಬ್ಸಿಡಿ) ದರದಲ್ಲಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರ ಪ್ರತಿ ಕೆ.ಜಿಗೆ 3 ರೂ. ದರದಲ್ಲಿ ಅಕ್ಕಿಯನ್ನು ಹಂಚಿಕೆ ಮಾಡುತ್ತಿದೆ. ಈ ಅಕ್ಕಿಯನ್ನು ರಾಜ್ಯ ಸರ್ಕಾರವು ಖರೀದಿಸಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ಆದ್ಯತಾ ಪಡಿತರ ಫಲಾನುಭವಿಗಳಿಗೆ ಉಚಿತವಾಗಿ ಹಂಚಿಕೆ ಮಾಡುತ್ತಿದೆ.

2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕೇಂದ್ರ ಸರ್ಕಾರದ ಪರವಾಗಿ ರಾಜ್ಯದ ರೈತರಿಂದ 18.10 ಲಕ್ಷ ಮೆಟ್ರಿಕ್ ಟನ್ ಭತ್ತ, 7 ಲಕ್ಷ ಮೆಟ್ರಿಕ್ ಟನ್ ರಾಗಿ ಮತ್ತು 6 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಖರೀದಿಸಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಜೊತೆಗೆ ರಾಜ್ಯದಲ್ಲಿ ಸಂಗ್ರಹಿಸಿದ ಆಹಾರ ಧಾನ್ಯಗಳನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ರಾಜ್ಯದಲ್ಲಿನ ಆದ್ಯತಾ ಪಡಿತರ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ತಿಳಿಸಿದೆ.

ಇದನ್ನೂ ಓದಿ: ಉಮೇಶ್ ಕತ್ತಿ ಇರೆಸ್ಪಾನ್ಸಿಬಲ್ ಮಿನಿಸ್ಟರ್... ನೀ ಸಾಯಿ ಹೋಗು ಅನ್ನೋದು ಉದ್ದಟತನ: ಸಿದ್ದರಾಮಯ್ಯ

2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲ ಯೋಜನೆಯಡಿ 2.62 ಲಕ್ಷ ಮೆಟ್ರಿಕ್ ಟನ್ ಭತ್ತ, 4.52 ಲಕ್ಷ ಮೆಟ್ರಿಕ್ ಟನ್ ರಾಗಿ ಹಾಗೂ 72,238 ಮೆಟ್ರಿಕ್‌ ಟನ್‌ ಜೋಳವನ್ನು ರಾಜ್ಯದ ರೈತರಿಂದ ಖರೀದಿಸಲಾಗಿದೆ. ಈ ಆಹಾರ ಧಾನ್ಯಗಳನ್ನು ರಾಜ್ಯದಲ್ಲಿಯೇ ಉಪಯೋಗಿಸಿಕೊಳ್ಳಬೇಕಾಗಿದ್ದು, ಅದರಂತೆ, ರಾಗಿಯನ್ನು ಆಹಾರ ಧಾನ್ಯವನ್ನಾಗಿ ಉಪಯೋಗಿಸುವ ಹಳೆ ಮೈಸೂರು ಭಾಗದ 14 ಜಿಲ್ಲೆಗಳಲ್ಲಿನ ಆದ್ಯತಾ ಪಡಿತರ ಫಲಾನುಭವಿಗಳಿಗೆ ವಿತರಿಸಲಾಗುವ 5 ಕೆ.ಜಿ ಆಹಾರ ಧಾನ್ಯದ ಪೈಕಿ 3 ಕೆ.ಜಿ ರಾಗಿ ಮತ್ತು 2 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.

ಜೋಳದ ಸಂಗ್ರಹಣೆ ಕಡಿಮೆ ಇರುವ ಹಿನ್ನೆಲೆಯಲ್ಲಿ, ರೈತರಿಂದ ಜೋಳವನ್ನು ಸಂಗ್ರಹಿಸಲಾಗಿರುವ 3 ಜಿಲ್ಲೆಗಳಾದ ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿನ ಪಡಿತರ ಫಲಾನುಭವಿಗಳಿಗೆ 2021ರ ಮೇ ತಿಂಗಳಿನಲ್ಲಿ 3 ಕೆ.ಜಿ ಜೋಳ ಮತ್ತು 2 ಅಕ್ಕಿಯನ್ನು ವಿತರಿಸಲು ಉದ್ದೇಶಿಸಲಾಗಿದೆ. ಜೋಳ ಹೆಚ್ಚಾಗಿ ಬಳಸುವ ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಪಡಿತರ ಮೂಲಕ ಜೋಳ ವಿತರಿಸಲು ನಿರ್ಧರಿಸಲಾಗಿದೆ. ಅಕ್ಕಿಯನ್ನು ಹೆಚ್ಚಾಗಿ ಬಳಸುವ ಇನ್ನುಳಿದ ಜಿಲ್ಲೆಗಳಲ್ಲಿನ ಆದ್ಯತಾ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ.

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಪ್ರತಿ ವರ್ಷ ಸುಮಾರು 28 ಲಕ್ಷ ಟನ್ ಅಕ್ಕಿ ನೀಡುತ್ತದೆ. ಆದರೆ ನಾವು ರಾಜ್ಯದಲ್ಲಿ ಬಳಕೆ ಮಾಡುವುದಕ್ಕಿಂತ ಹೆಚ್ಚಿನ ಅಕ್ಕಿಯನ್ನು ರಾಜ್ಯಕ್ಕೆ ನೀಡಲಾಗುತ್ತಿದೆ. ರಾಜ್ಯಕ್ಕೆ ಕೇವಲ 18 ಲಕ್ಷ ಟನ್ ಅಕ್ಕಿ ಸಾಕಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ನಮಗೆ ನೀಡುವ ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿ ಆ ಉಳಿಕೆ ಹಣದಿಂದ ಜೋಳ, ಕೆಂಪಕ್ಕಿ ಮತ್ತು ರಾಗಿ ಖರೀದಿಸಲು ಅನುವು ಮಾಡಿಕೊಡುವಂತೆ ಈಗಾಗಲೇ ಆಹಾರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿಂದ ಹಳ್ಳಿಗಳಿಗೆ ಬಂದವರ ಮೇಲೆ ನಿಗಾ ಇಡಿ: ಜಿಲ್ಲಾಡಳಿತಗಳಿಗೆ ಸಿಎಂ ಬಿಎಸ್​​ವೈ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.