ದೇವನಹಳ್ಳಿ: ತನ್ನ ಒಳ ಉಡುಪಿನಲ್ಲಿ ಚಿನ್ನದ ಗಟ್ಟಿಯನ್ನ ಕಳ್ಳಸಾಗಾಣಿಕೆ ಮಾಡಲು ಯತ್ನಿಸಿದ ಯುವಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈತ ದುಬೈನಿಂದ ಬಂದಿದ್ದು, 50 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.
ಮೇ 6 ರಂದು ಅಬು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನ ಖಚಿತ ಮಾಹಿತಿ ಮೇರೆಗೆ DRI ಅಧಿಕಾರಿಗಳು ತಪಾಸಣೆ ನಡೆಸಿದರು. ಆಗ ಆತ ತನ್ನ ಒಳ ಉಡುಪಿಯಲ್ಲಿ ಚಿನ್ನದ ಗಟ್ಟಿಯನ್ನ ಮರೆಮಾಚಿ ಇಟ್ಟಿರುವುದು ಪತ್ತೆಯಾಗಿದೆ. 966.10 ಗ್ರಾಂ ತೂಕದ 50,07, 276 ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಯನ್ನ ಜಪ್ತಿ ಮಾಡಲಾಗಿದೆ.
ಬಳಿಕ ಆರೋಪಿ ಪ್ರಯಾಣಿಕನನ್ನ ವಶಕ್ಕೆ ಪಡೆದು, ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಖದೀಮರು ಚಿನ್ನ ಕಳ್ಳಸಾಗಣೆ ಮಾಡಲು ಬೇರೆ ಬೇರೆ ವಿಧಾನದಲ್ಲಿ ಯತ್ನಿಸುತ್ತಲೇ ಇರುತ್ತಾರೆ. ಆದ್ರೆ ಕಸ್ಟಮ್ಸ್ ಅಧಿಕಾರಿಗಳು ಅವರಿಗೆ ಬಲೆ ಹಾಕುವುದು ಸಾಮಾನ್ಯವಾಗಿದೆ.
(ಇದನ್ನೂ ಓದಿ: ವೈರ್ನಿಂದ ಕತ್ತು ಬಿಗಿದು ಪ್ರಿಯತಮೆ ತಾಯಿಯ ಕೊಲೆ.. ಕೆಲ ಗಂಟೆಗಳಲ್ಲೇ ಆರೋಪಿ ಅರೆಸ್ಟ್)