ಬೆಂಗಳೂರು : 73ನೇ ಗಣರಾಜ್ಯೋತ್ಸವವನ್ನ ಇಂದು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ, ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂಗೊಳ್ಳಿ ರಾಯಣ್ಣರವರ ಭಾವಚಿತ್ರಗಳಿಗೆ ಪುಷ್ಪನಮನಗಳನ್ನು ಸಲ್ಲಿಸಿದರು. ಬಳಿಕ ಧ್ವಜಾರೋಹಣವನ್ನು ನೆರವೇರಿಸಿದರು.
ಗಣರಾಜ್ಯೋತ್ಸವದ ಮಹತ್ವ ಹಾಗೂ ಸಂಗೊಳ್ಳಿ ರಾಯಣ್ಣರ ಬಗ್ಗೆ ಮಾತನಾಡಿ, ಇವರೆಲ್ಲರೂ ನಮಗೆ ಆದರ್ಶ ಹಾಗೂ ದಾರಿ ದೀಪವಾಗಿದ್ದಾರೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕರ್ತವ್ಯ ನಿರ್ವಹಿಸಬೇಕು ಎಂದು ಶಿವಯೋಗಿ ಸಿ ಕಳಸದ ತಿಳಿಸಿದರು.
ಓದಿ: 73ನೇ ಗಣರಾಜ್ಯೋತ್ಸವ; ಪರೇಡ್ನಲ್ಲಿ ಗಮನ ಸೆಳೆದ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು
ಇದೇ ವೇಳೆ 15 ವರ್ಷಗಳ ಅಪಘಾತ ರಹಿತ ಮತ್ತು ಅಪರಾಧ ರಹಿತ ನಿರಂತರ ಸೇವೆಗಾಗಿ ಚಾಲಕರಾದ ರಾಮಚಂದ್ರೇಗೌಡ, ಬೆಂಗಳೂರು ಕೇಂದ್ರಿಯ ವಿಭಾಗದ ನಾರಾಯಣಪ್ಪ ಎನ್ ಎಸ್ ವಿ ವೆಂಕಟಸ್ವಾಮಿ, ಸಿ ಜಿ ಗಂಗಣ್ಣ ಇವರಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.
ಹಾಗೆಯೇ, ಕೇಂದ್ರ ಕಚೇರಿಯ ವಾಹನ ಮಳಿಗೆಯ ಎಮ್.ಎಸ್.ರವೀಂದ್ರ ಚಾಲಕ ಕಂ-ನಿರ್ವಹಕ, ಷಂಷುದ್ದೀನ್ ಎಸ್. ತಾಳಿಕೋಟೆ, ಜಿ.ರಮೇಶ್, ಎನ್.ಬಿ. ಗಂಗಣ್ಣ, ರಾಮಪ್ಪ ಕೆ.ಸಿ, ಎಂ.ಎಸ್.ಚಂದ್ರಶೇಖರ್ ಅವರಿಗೆ ತಮ್ಮ 7 ವರ್ಷಗಳ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆಗಾಗಿ ಬೆಳ್ಳಿ ಪದಕವನ್ನು ಪ್ರದಾನ ಮಾಡಲಾಯಿತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ