ETV Bharat / city

ಬಂಗಾರದ ಬಿಸ್ಕೆಟ್, ಹಣ ಡಬ್ಲಿಂಗ್ ಆಮಿಷ ತೋರಿಸಿ ವಂಚಿಸುತ್ತಿದ್ದ ಗ್ಯಾಂಗ್​ನ ನಾಲ್ವರು ಅಂದರ್​ - ಬೆಂಗಳೂರಿನಲ್ಲಿ ನಕಲಿ ಗೋಲ್ಡ್​ ಬಿಸ್ಕೆಟ್​​, ಹಣ ಡಬ್ಲಿಂಗ್​ ದಂಧೆ

ಬಂಧಿತ ಆರೋಪಿ ನಟರಾಜ್ ಆಂಧ್ರದ ವೆಲ್ಲೂರು ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದಾನೆ. ಮತ್ತೊಬ್ಬ ಆರೋಪಿ ಬಾಲಾಜಿ ತಾನು ಸಿನಿಮಾ ಪ್ರೊಡ್ಯೂಸರ್ ಎಂದು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

gold-biscuits
ಹಣ ಡಬ್ಲಿಂಗ್ ಆಮಿಷ
author img

By

Published : Jan 29, 2022, 6:56 PM IST

ಬೆಂಗಳೂರು : ಹಣ ಡಬ್ಲಿಂಗ್​, ಗೋಲ್ಡ್​ ಬಿಸ್ಕೆಟ್ ಕೊಡಿಸುವುದಾಗಿ ನಂಬಿಸಿ ನಕಲಿ ನೋಟು ಹಾಗೂ ಗೋಲ್ಡ್​ ಬಿಸ್ಕೆಟ್ ಕೊಟ್ಟು ವಂಚಿಸುತ್ತಿದ್ದ ಗ್ಯಾಂಗ್​ನ ನಾಲ್ವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನಟರಾಜ್ ಅಲಿಯಾಸ್ ರಾಜಾರೆಡ್ಡಿ, ಬಾಲಾಜಿ, ವೆಂಕಟೇಶ್, ರಾಕೇಶ್​ ಬಂಧಿತ ಆರೋಪಿಗಳು. ನಾಲ್ವರಿಂದ 5.57 ಲಕ್ಷ ರೂ., 80 ಗ್ರಾಂ ಚಿನ್ನಾಭರಣ ಹಾಗೂ 2 ಕಾರು, 20 ಕೋಟಿ ಮೌಲ್ಯದ ನಕಲಿ ನೋಟುಗಳು, 10 ನಕಲಿ ಗೋಲ್ಡ್ ಬಿಸ್ಕೆಟ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.

ಬಂಗಾರದ ಬಿಸ್ಕೆಟ್, ಹಣ ಡಬ್ಲಿಂಗ್ ಆಮಿಷ ತೋರಿಸಿ ವಂಚಿಸುತ್ತಿದ್ದ ಗ್ಯಾಂಗ್​ನ ನಾಲ್ವರು ಅಂದರ್​

ಪ್ರಾಪರ್ಟಿ ತೋರಿಸುವ ನೆಪದಲ್ಲಿ ದೋಚಿದ್ದ ಗ್ಯಾಂಗ್ : ಪ್ರಾಪರ್ಟಿ ತೋರಿಸುವ ನೆಪದಲ್ಲಿ ಕಳೆದ ವರ್ಷ ಅಕ್ಟೋಬರ್​ನಲ್ಲಿ ಜಕ್ಕೂರಿನ ಸಂಗೀತಾ ಮತ್ತು ಆಕೆಯ ಕಾರ್​ ಡ್ರೈವರ್ ಕೃಷ್ಣ ಎಂಬುವರನ್ನು ಅಪಹರಿಸಿದ್ದರು. ಇವರ ಬಿಡುಗಡೆಗೆ 10 ಲಕ್ಷ ರೂ. ಪಡೆದಿದ್ದರು.

ಈ ಪ್ರಕರಣದ ಸಂಬಂಧ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮನಿ ಡಬ್ಲಿಂಗ್ ದಂಧೆ ಮತ್ತು ನಕಲಿ ನೋಟಿನ ವಿಚಾರ ಬಾಯ್ಬಿಟ್ಟಿದ್ದರು. ಆರೋಪಿಗಳು ಹೊಸಕೋಟೆಯ ಸುತ್ತಮುತ್ತ ಹಣ ಡಬಲ್ ಮಾಡುವ ದಂಧೆ ನಡೆಸಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ನಟರಾಜ್ ಆಂಧ್ರದ ವೆಲ್ಲೂರು ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದಾನೆ. ಮತ್ತೊಬ್ಬ ಆರೋಪಿ ಬಾಲಾಜಿ ತಾನು ಸಿನಿಮಾ ಪ್ರೊಡ್ಯೂಸರ್ ಎಂದು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.