ETV Bharat / city

ನಮ್ಮ ಮೆಟ್ರೋದಲ್ಲಿ ತಾಂತ್ರಿಕ ಸಮಸ್ಯೆ: ಕೆಲ ಕಾಲ ಪರದಾಡಿದ ಪ್ರಯಾಣಿಕರು - ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ

ನಮ್ಮ ಮೆಟ್ರೋದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ಕಾಲ ಪ್ರಯಾಣಿಕರು ಪರದಾಡುವಂತಾಗಿತ್ತು.

Technical problem in Bengaluru Metro
ನಮ್ಮ ಮೆಟ್ರೋದಲ್ಲಿ ತಾಂತ್ರಿಕ ಸಮಸ್ಯೆ: ಕೆಲ ಕಾಲ ಪರದಾಡಿದ ಪ್ರಯಾಣಿಕರು
author img

By

Published : Feb 7, 2022, 2:24 PM IST

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಇಂದು ಬೆಳಗ್ಗೆ ತಾಂತ್ರಿಕ ದೋಷ ಉಂಟಾಗಿತ್ತು. ನಗರದ ಮಾಗಡಿ ಮೆಟ್ರೋ ನಿಲ್ದಾಣದಲ್ಲಿ ಒಂದು ರೈಲಿನಲ್ಲಿ 9:10 ಸಮಯದಲ್ಲಿ ಕಾಣಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ನೇರಳೆ ಮಾರ್ಗದ ರೈಲುಗಳು ನಿಂತಲ್ಲೇ ನಿಂತಿದ್ದವು.

ಈ ವೇಳೆ, ಎಂಜಿ ರಸ್ತೆ, ನಾಡಪ್ರಭು ಕೆಂಪೇಗೌಡ ರೈಲ್ವೆ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಿತ್ತು. ಅಲ್ಲದೇ ಇಂದು ಸೋಮವಾರವಾಗಿದ್ದರಿಂದ ಜನರು ತಮ್ಮ ಕಚೇರಿಗಳಿಗೆ ಹೋಗಲು ತಡವಾಗಿದೆ.

ಬಳಿಕ ಮೆಟ್ರೋ ಸಿಬ್ಬಂದಿ ರೈಲಿನಲ್ಲಿ ತಾಂತ್ರಿಕ ದೋಷ ಸರಿಪಡಿಸಿದ್ದಾರೆ. ಬೆಳಗ್ಗೆ 10-30ಕ್ಕೆ ಮೆಟ್ರೋ ಸಂಚಾರ ಯಥಾಸ್ಥಿತಿ ಮುಂದುವರೆದಿದೆ ಎಂದು ಮೆಟ್ರೋ ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕುಂದಾಪುರದ ಹಿಜಾಬ್​ ವಿವಾದ: ನಾಳೆ ಹೈಕೋರ್ಟ್​​ನಲ್ಲಿ ವಿಚಾರಣೆ, ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.