ETV Bharat / city

ಜಿಗಣಿಯಲ್ಲಿ ಅಡುಗೆ ಅನಿಲ ಪೈಪ್ ಸೋರಿಕೆಯಾಗಿ ಸ್ಫೋಟ: ಏಳು ಮಂದಿಗೆ ಗಾಯ - seven people injured

ಘಟನೆಯ ವೇಳೆ ಸ್ಥಳೀಯರು ದೊಡ್ಡ ಸದ್ದು ಕೇಳಿ ಹೌಹಾರಿದ್ದಾರೆ. ಅವರು ತಕ್ಷಣ ಅಗ್ನಿಶಾಮಕ ದಳ ಮತ್ತು ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

gas pipe blost
ಸ್ಪೋಟ: ಏಳು ಮಂದಿಗೆ ಗಾಯ
author img

By

Published : Nov 6, 2021, 3:29 PM IST

Updated : Nov 6, 2021, 3:51 PM IST

ಆನೇಕಲ್​: ಗ್ಯಾಸ್ ಪೈಪ್ ಸೋರಿಕೆಯಾಗಿ ಸ್ಫೋಟಗೊಂಡು 7 ಮಂದಿ ಗಾಯಗೊಂಡ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.

gas pipe blost
ಸ್ಪೋಟ: ಏಳು ಮಂದಿಗೆ ಗಾಯ

ಜಿಗಣಿ ಪೊಲೀಸ್ ಠಾಣೆಯ ಪಕ್ಕದ ಅಶ್ವತ್ಥ್ ರೆಡ್ಠಿ ಬಡಾವಣೆಯ ಮಂಜುನಾಥರೆಡ್ಡಿ ಎಂಬುವವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ರಾಜಸ್ಥಾನದ ಮೂಲದ ಕುಟುಂಬವೊಂದು ಈ ಮನೆಯಲ್ಲಿ ಬಾಡಿಗೆ ಪಡೆದು ವಾಸವಾಗಿದ್ದರು.

ಜಿಗಣಿಯಲ್ಲಿ ಅಡುಗೆ ಅನಿಲ ಪೈಪ್ ಸೋರಿಕೆಯಾಗಿ ಸ್ಫೋಟ: ಏಳು ಮಂದಿಗೆ ಗಾಯ

ಬಾಡಿಗೆದಾರ ಜಗದೀಶ್​ ಶನಿವಾರ ಬೆಳಗ್ಗೆ 8 ಗಂಟೆಗೆ ಅಡುಗೆ ಮನೆಯ ಸ್ವಿಚ್​ ಆನ್​ ಮಾಡಿದಾಗ ದಿಢೀರ್​ ಬೆಂಕಿ ಕಾಣಿಸಿಕೊಂಡಿದೆ. ಗ್ಯಾಸ್​ ಪೈಪ್​ಗೂ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ಅಲ್ಲೇ ಇದ್ದ ಜಗದೀಶ್​ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದ ಸದ್ದಿಗೆ ಎಚ್ಚೆತ್ತ ಕುಟುಂಬಸ್ಥರು ಬಂದು ನೋಡಿದಾಗ ಜಗದೀಶ್​ಗೆ ಬೆಂಕಿ ಹೊತ್ತಿಕೊಂಡಿದ್ದು ಕಂಡುಬಂದಿದೆ. ಈ ವೇಳೆ ರಕ್ಷಣೆಗೆ ಧಾವಿಸಿ ಬಂದಾಗ ಬೆಂಕಿಯ ಕೆನ್ನಾಲಿಗೆ ಅವರನ್ನೂ ಆವರಿಸಿಕೊಂಡಿದೆ.

ಮನೆಯಲ್ಲಿದ್ದವರ ಕಿರುಚಾಟ ಆಲಿಸಿದ ಪಕ್ಕದ ಮನೆಯ ವಲ್ಲಿ ಎಂಬುವವರು ಇವರ ರಕ್ಷಣೆಗೆ ಧಾವಿಸಿದ್ದಾರೆ. ಜಗದೀಶ್​ನನ್ನು ಬೆಂಕಿಯಿಂದ ರಕ್ಷಿಸುವಾಗ ಅವರಿಗೂ ಬೆಂಕಿಯ ಸುಟ್ಟ ಗಾಯಗಳಾಗಿವೆ.

ಸ್ಥಳೀಯರು ಕೂಡ ದೊಡ್ಡ ಸದ್ದು ಕೇಳಿ ಹೌಹಾರಿದ್ದಾರೆ. ಅಗ್ನಿಶಾಮಕ ದಳ ಮತ್ತು ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ತೀವ್ರ ಗಾಯಗೊಂಡ ಜಗದೀಶ್​ ಮತ್ತು ಇನ್ನಿತರರನ್ನು ಜಿಗಣಿ ಸುಹಾಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಫೋಟದಿಂದ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅಲ್ಲದೇ ಪಕ್ಕದ ಮನೆಗೂ ಹಾನಿಯಾಗಿದ್ದು, ಗಾಜುಗಳು ಚೂರುಚೂರಾಗಿವೆ. ರಾಜಸ್ಥಾನ ಮೂಲದ ಈ ಕುಟುಂಬ ಹೊದಿಕೆಗಳು, ದಿಂಬುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿದ್ದರು ಎನ್ನಲಾಗಿದೆ. ಜಗದೀಶ್​ ದೇಹ ಬೆಂಕಿಗೆ ಸುಟ್ಟಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

Last Updated : Nov 6, 2021, 3:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.