ETV Bharat / city

ಗಾರ್ಮೆಂಟ್ಸ್ ನೌಕರರ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿ ಸರ್ಕಾರದಿಂದ ಪರಿಷ್ಕೃತ ಆದೇಶ

ನಿನ್ನೆ ರಾತ್ರಿಯಿಂದ ಜಾರಿಗೆ ಬರುವಂತೆ ಹೊರಡಿಸಿದ ಆದೇಶದಲ್ಲಿ ಮಾರ್ಪಾಡು ಮಾಡಿ ಸರ್ಕಾರ ನೂತನ ಆದೇಶ ಹೊರಡಿಸಿದೆ. ಗಾರ್ಮೆಂಟ್ಸ್ ನೌಕರರು ನಾಳೆಯಿಂದಲೇ ತಮ್ಮ ಕೆಲಸಕ್ಕೆ ತೆರಳಬಹುದಾಗಿದೆ.

ಸರ್ಕಾರ
ಸರ್ಕಾರ
author img

By

Published : Apr 28, 2021, 7:45 PM IST

ಬೆಂಗಳೂರು: ಮಹಾನಗರದಲ್ಲಿ ಗಾರ್ಮೆಂಟ್ಸ್ ನೌಕರರಿಗೆ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿ ಹೊಸ ಆದೇಶ ಹೊರಡಿಸಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರು ಈ ಆದೇಶ ಹೊರಡಿಸಿದ್ದಾರೆ. ಶೇಕಡ 50ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಗಾರ್ಮೆಂಟ್ಸ್ ಗಳು ನೀಡಿರುವ ಗುರುತಿನ ಚೀಟಿಯನ್ನು ತೋರಿಸಿ ಸಿಬ್ಬಂದಿ ನಗರದಲ್ಲಿ ಸಂಚರಿಸಬಹುದು.

ಸರ್ಕಾರದ ಮಾರ್ಗಸೂಚಿಯಲ್ಲಿ ಮತ್ತೆ ಪರಿಷ್ಕರಣೆ ಆಗಿದ್ದು, ಗಾರ್ಮೆಂಟ್ಸ್ ಸಹ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಹೊರಡಿಸಿದ ಆದೇಶದಲ್ಲಿ ಮಾರ್ಪಾಡು ಮಾಡಿ ನೂತನ ಆದೇಶ ನೀಡಲಾಗಿದ್ದು, ಗಾರ್ಮೆಂಟ್ಸ್ ನೌಕರರು ನಾಳೆಯಿಂದಲೇ ತಮ್ಮ ಕೆಲಸಕ್ಕೆ ತೆರಳಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.