ಬೆಂಗಳೂರು: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಇಲ್ಲೊಂದು ಕಂಪನಿ ವೈರಸ್ ಆತಂಕವೇ ಇಲ್ಲದೇ ವೈದ್ಯರು, ನರ್ಸ್ಗಳಿಗೆ ಗೌನ್ ಸಿದ್ದಪಡಿಸುತ್ತಿದೆ.
ಸದ್ಯದ ಮಟ್ಟಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಗೌನ್ ಜೊತೆಗೆ ವೈದ್ಯಕೀಯ ಸಲಕರಣೆ ಅವಶ್ಯಕತೆ ಹೆಚ್ಚಾಗಿದೆ. ಹೋಮ್ ಕ್ವಾರಂಟೈನ್ ಸಂಖ್ಯೆ ಹೆಚ್ಚಾದ ಪರಿಣಾಮ ಗೌನ್ ಮತ್ತು ಗ್ಲೌಸ್ ಅನಿವಾರ್ಯತೆ ಇದೆ. ಏಪ್ರಿಲ್ 14ರವರೆಗೂ ಗಾರ್ಮೆಂಟ್ಸ್ಗಳಿಗೂ ಲಾಕ್ಡೌನ್ಗೆ ಸರ್ಕಾರ ಆದೇಶ ನೀಡಿದೆ.
ಬೆಂಗಳೂರಿನ ಟ್ರೈಯೋ ಗಾರ್ಮೆಂಟ್ಸ್ನಲ್ಲಿ ಅನುಮತಿ ಮೇರೆಗೆ ಗೌನ್ಗಳನ್ನು ಸಿದ್ದಪಡಿಸಲಾಗುತ್ತಿದೆ. ಪ್ರತಿ ವಾರಕ್ಕೆ ಸುಮಾರು 20,000 ಸಾವಿರದಷ್ಟು ಗೌನ್, ಗ್ಲೌಸ್, ಮುಖಗವಸುಗಳ ಅವಶ್ಯಕತೆ ಇದೆ. ಕಾರ್ಮಿಕರ ಕೊರತೆಯಿಂದ ಕೇವಲ 4,500 ತಯಾರಾಗ್ತಿವೆ.
ಕೊರೊನಾ ಭೀತಿಗೆ ಕಾರ್ಮಿಕರ ಸಂಖ್ಯೆ ಕೂಡ 500 ರಿಂದ 120ಕ್ಕೆ ಇಳಿಕೆಯಾಗಿದೆ. ಅಲ್ಲದೇ ಇಂದು ಟ್ರೈಯೋ ಗಾರ್ಮೆಂಟ್ಸ್ಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕೂಡ ಭೇಟಿ ನೀಡಿದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ವಿತರಿಸಲು ಸತೀಶ್ ರೆಡ್ಡಿ ಅವರು ಗೌನ್ಗಳನ್ನು ಖರೀದಿಸಿದರು.