ETV Bharat / city

ಡಾ. ಗಣೇಶ ಆಯ್ತು, ಈಗ ಆರ್ಮಿ ಜೊತೆ ಪ್ರಧಾನಿ ಕರ್ಕೊಂಡು ಬಂದ ಏಕದಂತ...

ಇತ್ತೀಚಿಗಷ್ಟೇ ಪ್ರಧಾನಿ ಮೋದಿ ಲಡಾಖ್​ನ ವಿವಾದಿತ ​ಗಾಲ್ವಾನ್ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿ ದೇಶದ ವೀರ ಯೋಧರಿಗೆ ಧೈರ್ಯ ತುಂಬಿದ್ದರು. ಈಗ ಅದೇ ಕಲ್ಪನೆಯಲ್ಲಿ ವಿನಾಯಕನ ಮೂರ್ತಿ ಮೂಡಿ ಬಂದಿದೆ. ಮೂರ್ತಿಯನ್ನು ಮಾವಳ್ಳಿಯ ಗಣೇಶ ಮೂರ್ತಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

Ganesha idol
ಗಣೇಶ ಮೂರ್ತಿ
author img

By

Published : Aug 2, 2020, 1:48 PM IST

ಬೆಂಗಳೂರು: ಕೊರೊನಾಗೆ ಚಿಕಿತ್ಸೆ ಕೊಡೋಕೆ ತನ್ನ ವಾಹನ ಇಲಿಯನ್ನೇ ನರ್ಸ್ ಆಗಿಸಿಕೊಂಡು ಆ್ಯಂಬುಲೆನ್ಸ್ ಹತ್ತಿ ನಗರಕ್ಕೆ ಬಂದಿದ್ದ ಡಾ. ಗಣೇಶ ವಾಹನನ ನಂತರ, ಈಗ ಇಂಡಿಯನ್ ಆರ್ಮಿ ಜೊತೆ ಪ್ರಧಾನಿ ನರೇಂದ್ರ ಮೋದಿಯನ್ನು ಕರೆದುಕೊಂಡು ಏಕದಂತ ನಗರದಲ್ಲಿ ಪ್ರತ್ಯಕ್ಷ ಆಗಿದ್ದಾನೆ.

ಹೌದು, ಗಣೇಶ ಚತುರ್ಥಿ ಹತ್ತಿರ ಬರುತ್ತಿದಂತೆ ವಿಭಿನ್ನ ಅಕಾರದ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದೇ ರೀತಿ ಈ ವರ್ಷವೂ ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಕಲಾವಿದ ಶಶಿ ಎಂಬವರು ಕೊರೊನಾಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯ ಗಣಪನ ಮೂರ್ತಿ ತಯಾರಿಸಿ ಗಮನ ಸೆಳೆದಿದ್ದರು. ಈಗ ಅದೇ ರೀತಿ ಪ್ರಧಾನಿ ಮೋದಿ ಜೊತೆ ಇರುವ ಗಣಪ‌ನ ಮೂರ್ತಿ ಜನರನ್ನು ಆಕರ್ಷಿಸುತ್ತಿದೆ.

ಪ್ರಧಾನಿ ಜೊತೆಗೆ ಬಂದ ಗಣೇಶ

ಕಾರಣ ಏನಪ್ಪ ಅಂದ್ರೆ, ಇತ್ತೀಚಿಗಷ್ಟೇ ಪ್ರಧಾನಿ ಮೋದಿ ಲಡಾಖ್​ನ ವಿವಾದಿತ ​ಗಾಲ್ವಾನ್ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿ ದೇಶದ ವೀರ ಯೋಧರಿಗೆ ಧೈರ್ಯ ತುಂಬಿದ್ದರು. ಈಗ ಅದೇ ಕಲ್ಪನೆಯಲ್ಲಿ ವಿನಾಯಕನ ಮೂರ್ತಿ ಮೂಡಿ ಬಂದಿದೆ.

ಪ್ರಧಾನಿ ಮೋದಿ ಸೈನಿಕರ ಜೊತೆ ಚರ್ಚೆ ಮಾಡುತ್ತಿರುವ ಪ್ರತಿಮೆಗಳ ಜೊತೆ ಗಣೇಶ ಇರುವ ಚಿತ್ರಣವನ್ನು ರೆಡಿ ಮಾಡಿದ್ದು, ಈ ಗಣಪನ ಮೂರ್ತಿ ಜನರನ್ನು ತನ್ನತ್ತ ಸೆಳೆಯುತ್ತಿದೆ. ಮೂರ್ತಿಯನ್ನು ಮಾವಳ್ಳಿಯ ಗಣೇಶ ಮೂರ್ತಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಆದರೆ, ಈ ಮೂರ್ತಿ ಮಾರಾಟಕ್ಕಿಲ್ಲ. ಜನರಲ್ಲಿ ದೇಶ ಪ್ರೇಮ ಮೂಡಿಸುವ ಸಲುವಾಗಿ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.