ETV Bharat / city

ರಾಜ್ಯದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ; 8 ಪೂರ್ಣಗೊಂಡ ಹೆದ್ದಾರಿಗಳ ಲೋಕಾರ್ಪಣೆ

author img

By

Published : Dec 19, 2020, 5:38 PM IST

ಕೇಂದ್ರ ಸಚಿವ ನಿತಿನ್​ ಗಡ್ಕರಿ ಕರ್ನಾಟಕದಲ್ಲಿ 1,197 ಕಿ.ಮೀ ಉದ್ದದ ರೂ. 10,904 ಕೋಟಿ ವೆಚ್ಚದ‌ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

State road program
ಹೆದ್ದಾರಿಗಳ ಲೋಕಾರ್ಪಣೆ

ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಇಂದು ಕರ್ನಾಟಕದಲ್ಲಿ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ 8 ಪೂರ್ಣಗೊಂಡ ಹೆದ್ದಾರಿಗಳ ಲೋಕಾರ್ಪಣೆ ನೆರವೇರಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕರ್ನಾಟಕದಿಂದ ಸಕ್ಕರೆ ಉತ್ಪಾದನೆ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕು. ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಗಮನ ಕೊಡಿ. ಎಥೆನಾಲ್ ಉತ್ಪಾದನಾ ಘಟಕಗಳನ್ನು ತೆರೆಯಿರಿ. ಎಥೆನಾಲ್ ಉತ್ಪಾದನೆಯಿಂದ ರೈತರಿಗೂ ಅನುಕೂಲವಾಗುತ್ತದೆ ಎಂದರು.

ಮೈಸೂರು ಬೆಂಗಳೂರು ಚತುಷ್ಪಥ ಹೈವೇ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಸೆಪ್ಟಂಬರ್ 2022 ಕ್ಕೆ ಪೂರ್ಣಗೊಳಿಸುತ್ತೇವೆ. ಈಗಾಗಲೇ ಶೇ. 45 ರಷ್ಟು ಕೆಲಸ ಆಗಿದೆ. ಎರಡು ಪ್ಯಾಕೇಜ್‌ಗಳಲ್ಲಿ ಕೆಲಸ ಆಗುತ್ತಿದೆ ಎಂದು ಹೇಳಿದರು.

ವರ್ಚುಯಲ್ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ಎಥೆನಾಲ್ ಉತ್ಪಾದನೆ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಲಿದೆ. ಎಥೆನಾಲ್ ಘಟಕಗಳ ಬಗ್ಗೆ ಮಾಡುವುದಕ್ಕೆ ಚರ್ಚೆ ನಡೆಸುತ್ತೇವೆ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ಕೊಡಲಿದೆ. ಬಾಕಿಯಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತೇವೆ. ರೈತರಿಗೆ ಬಾಕಿಯಿರುವ ಭೂ ಪರಿಹಾರ ನೀಡಲು ಕ್ರಮವಹಿಸುತ್ತೇವೆ ಎಂದು ಭರವಸೆ ಇತ್ತರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಕರ್ನಾಟಕದಲ್ಲಿ ಸಿಆರ್ ಎಫ್ ರಸ್ತೆ ಕಾಮಗಾರಿಗಳು ನಿಂತು ಹೋಗಿದೆ. ನನ್ನ ಕ್ಷೇತ್ರ ಸೇರಿದಂತೆ ಹಲವು ಕಡೆಗಳಲ್ಲಿ ಸ್ಥಗಿತ ಆಗಿವೆ. ಗಡ್ಕರಿ ಅವರ ಮುಂದೆ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ‌ ಮಾಡಿಕೊಳ್ಳುತ್ತೇನೆ. ಸಾಫ್ಟ್ ಲೋನ್ ಮೂಲಕ‌ ಸಿಆರ್ ಎಫ್ ರಸ್ತೆಗಳನ್ನ ಪೂರ್ಣಗೊಳಿಸಿವೆ. ಹಾಗೆಯೇ ಬೈಪಾಸ್ ಗಳ ಅಗತ್ಯ ಇರುವ ಕಡೆ ರಾಜ್ಯ ಸರ್ಕಾರ ಅಗತ್ಯ ಭೂಮಿಯನ್ನ ಒದಗಿಸುವ ಕಡೆ ಗಮನಹರಿಸಬೇಕು‌ ಎಂದರು.

ಗಡ್ಕರಿ ಹೊಗಳಿದ ಗೌಡ್ರು : ವರ್ಚುವಲ್ ಮೀಟಿಂಗ್ ನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮಾತನಾಡಿ, ಗಡ್ಕರಿ ಅವರ ಕೆಲಸವನ್ನು ನಾನು ಗಮನಿಸುತ್ತಿದ್ದೇನೆ. ಅವರು ಪಕ್ಷಭೇದ ಮರೆತು ಕೆಲಸ ಮಾಡುತ್ತಾರೆ. ಯಾವುದೇ ಪ್ರಾಂತ್ಯಗಳಿದ್ರೂ ಆ ಭಾಗದವರಿಗೆ ಸ್ಪಂದಿಸುವ ‌ಕೆಲಸ ಮಾಡುತ್ತಾರೆ. ಬಹಳ ತಾಳ್ಮೆಯಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೊಗಳಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ ಜೋಶಿ, ಜನರಲ್ ಡಾ. ವಿ.ಕೆ. ಸಿಂಗ್, ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಚಿವ ಸಂಪುಟದ ಸದಸ್ಯರು, ಸಂಸದರು, ಶಾಸಕರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ (ಆನ್ ಲೈನ್ ಮೂಲಕ) ಈ ಸಮಾರಂಭ ನೆರವೇರಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.