ETV Bharat / city

ಚಂದ್ರು ಕೊಲೆ ಕೇಸ್ : ಮೃತ ಸ್ನೇಹಿತ ಸೈಮನ್‌ ಒಂದ್‌ ಹೇಳಿದ್ರೆ, ಕಮಿಷನರ್‌ ಪಂತ್‌ ಇನ್ನೊಂದ್‌ ಮಾತು..

author img

By

Published : Apr 9, 2022, 7:54 PM IST

Updated : Apr 9, 2022, 8:26 PM IST

ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್, ಘಟನಾ ಸಂದರ್ಭದಲ್ಲಿ ಮೃತ ಚಂದ್ರು ಜೊತೆಗಿದ್ದ ಸೈಮನ್ ನಮ್ಮ ತನಿಖೆಯಲ್ಲಿ ಬೈಕ್ ಟಚ್ ಆಗಿದ್ದರಿಂದಲೇ ಗಲಾಟೆಯಾಗಿದೆ, ಬಳಿಕ ಚಾಕುವಿನಿಂದ ಇರಿದಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿಸಿದರು..

chandru friend Simon
ಮೃತ ಚಂದ್ರು ಸ್ನೇಹಿತ ಸೈಮನ್

ಬೆಂಗಳೂರು : ಜೆ.ಜೆ.ನಗರದಲ್ಲಿ ನಡೆದ ಚಂದ್ರು ಹತ್ಯೆಯ ಸಂದರ್ಭದಲ್ಲಿ ಆತನ ಜೊತೆಗಿದ್ದ ಸ್ನೇಹಿತ ಸೈಮನ್ ಎಂಬಾತ ಕೊಲೆಯ ಸನ್ನಿವೇಶವನ್ನು ವಿವರಿಸಿದ್ದಾನೆ. ಆ ದಿನ ನನ್ನ ಹುಟ್ಟು ಹಬ್ಬವಿತ್ತು. ಚಿಕನ್ ರೋಲ್ ತಿನ್ನಲು ಗುಡ್ಡದಹಳ್ಳಿಗೆ ಹೋಗಿದ್ದೆವು. ಆಗ ಬೈಕ್​ ಟಚ್​ ಆಗಿದ್ದಕ್ಕೆ ಕಿರಿಕ್​ ಮಾಡಿದ್ದರು.

ನಾವಲ್ಲದೇ ಬೇರೆ ಯಾರೇ ಹೋಗಿದ್ದರೂ ಅವರು ಅಟ್ಯಾಕ್ ಮಾಡಲು ಸಿದ್ಧರಾಗಿದ್ದರು. ಮೊದಲು ಗಾಡಿ ಟಚ್ ಆಗಿದ್ದಕ್ಕೆ ಗಲಾಟೆ ಮಾಡಿದ್ರು. ನಂತರ ‌ಉರ್ದುವಿನಲ್ಲಿ ಮಾತನಾಡು, ನನಗೆ ಕನ್ನಡ ಬರಲ್ಲ, ಏನ್ ಬೈದೆ ಹೇಳು ಅಂತಾ ಗಲಾಟೆ ಮಾಡಿದ್ರು. ಏನೂ ಬೈದಿಲ್ಲ ಅಂತಾ ಹೇಳಿದ್ರೂ ಕೂಡ ಅವರು ಕೇಳಲಿಲ್ಲ.

ಚಂದ್ರು ಕೊಲೆ ಪ್ರಕರಣ

ಏಕಾಏಕಿ ಚಾಕು ತೆಗೆದು ಹಲ್ಲೆ ನಡೆಸಿದ್ರು. ಕನ್ನಡ ಬರದಿದ್ದಕ್ಕೆ ಉರ್ದುವಿನಲ್ಲಿ ಮಾತನಾಡು ಅಂತಾ ಹೇಳಿದ್ದರು. ನಂತರ ಚಂದ್ರುವನ್ನು ಆಟೋದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆದ್ರೆ, ಜಾಸ್ತಿ ಬ್ಲಡ್ ಬ್ಲೀಡ್ ಆದ ಹಿನ್ನೆಲೆ ಚಂದ್ರು ಸಾವನ್ನಪ್ಪಿದ್ದಾನೆ ಎಂದು ಮೃತ ಚಂದ್ರು ಸ್ನೇಹಿತ ಸೈಮನ್ ತಿಳಿಸಿದ್ದಾನೆ.

ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ: ಸ್ನೇಹಿತ ಸೈಮನ್ ನೀಡಿದ ದೂರಿನಲ್ಲೇನಿದೆ?

ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್, ಘಟನಾ ಸಂದರ್ಭದಲ್ಲಿ ಮೃತ ಚಂದ್ರು ಜೊತೆಗಿದ್ದ ಸೈಮನ್ ನಮ್ಮ ತನಿಖೆಯಲ್ಲಿ ಬೈಕ್ ಟಚ್ ಆಗಿದ್ದರಿಂದಲೇ ಗಲಾಟೆಯಾಗಿದೆ, ಬಳಿಕ ಚಾಕುವಿನಿಂದ ಇರಿದಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿಸಿದರು.

Last Updated : Apr 9, 2022, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.