ETV Bharat / city

ಬೆಂಗಳೂರು ಗಲಭೆ ಪ್ರಕರಣ: ಫ್ರೇಜರ್ ಟೌನ್ ಕಾರ್ಪೊರೇಟರ್ ಎಸ್ಕೇಪ್​​​​ - ಫ್ರೇಜರ್ ಟೌನ್ ಮಾಜಿ ಕಾರ್ಪೊರೇಟರ್ ಎಸ್ಕೇಪ್​​​​

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಬಂಧನ ಭೀತಿಯಿಂದ ವಿಚಾರಣೆಗೆ ಹಾಜರಾಗದೆ ಫ್ರೇಜರ್ ಟೌನ್ ಕಾರ್ಪೊರೇಟರ್ ಜಾಕೀರ್ ಹುಸೇನ್ ನಾಪತ್ತೆಯಾಗಿದ್ದು, ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ಶೋಧ ಕಾರ್ಯ ಮುಂದುವರೆಸಿದೆ.

frazier-town-former-corporator-zakir-hussain-escape-from-ccb
ಫ್ರೆಜರ್ ಟೌನ್ ಮಾಜಿ ಕಾರ್ಪೋರೇಟರ್
author img

By

Published : Oct 12, 2020, 3:49 PM IST

Updated : Oct 13, 2020, 2:12 PM IST

ಬೆಂಗಳೂರು: ಡಿಜೆ ‌ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರೇಜರ್ ಟೌನ್ ಕಾರ್ಪೊರೇಟರ್ ಜಾಕೀರ್ ಹುಸೇನ್ ಸಿಸಿಬಿ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದಾರೆ.

ಸಿಸಿಬಿ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದ್ರೆ ಬಂಧನ ಭೀತಿಯಿಂದ ಜಾಕೀರ್​ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಾಕಂದ್ರೆ ಗಲಭೆಯಲ್ಲಿ ಕಾರ್ಪೊರೇಟರ್ ಪಾತ್ರವಿರುವುದು ಈಗಾಗಲೇ ಸಾಬೀತಾಗಿದೆ ಎನ್ನಲಾಗ್ತಿದೆ. ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ಜಾಕೀರ್​ಗಾಗಿ ಶೋಧ ಕಾರ್ಯ ಮುಂದುವರೆಸಿದೆ.

ಫ್ರೇಜರ್ ಟೌನ್ ಬಳಿ ಇರುವ ಜಾಕೀರ್​ ಹುಸೇನ್​​ ಮನೆಗೆ ನಿನ್ನೆ ಸಿಸಿಬಿ ಅಧಿಕಾರಿಗಳು ತೆರಳಿದ್ದರು. ಕಾರ್ಪೊರೇಟರ್​​ ಮನೆಯಲ್ಲಿ ಇರದ ಕಾರಣ ಅವರ ಅಣ್ಣನಿಗೆ ನೋಟಿಸ್ ನೀಡಲಾಗಿತ್ತು. ಸದ್ಯ ತಲೆಮರೆಸಿಕೊಂಡಿರುವ ವಿಚಾರ ತಿಳಿದು ಬಂದಿದೆ.

ಗಲಭೆ ಪ್ರಕರಣಕ್ಕೆ ಜಾಕೀರ್​ ಕುಮ್ಮಕ್ಕು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸದ್ಯ ಇವರನ್ನು ಬಂಧಿಸಿದ್ರೆ ಪ್ರಕರಣದ ಕುರಿತು ಬಹುತೇಕ ಮಾಹಿತಿಗಳು ಲಭ್ಯವಾಗುತ್ತವೆ. ಮತ್ತೊಂದೆಡೆ ಮಾಜಿ‌ ಮೇಯರ್ ಸಂಪತ್​ ರಾಜ್​ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಕೀರ್ ಹಾಗೂ ಮಾಜಿ ಮೇಯರ್ ಸಂಪತ್​ ರಾಜ್ ಪ್ರಕರಣದಲ್ಲಿ ಮುಖ್ಯ ಪಾತ್ರವಹಿಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ಹೇಳಲಾಗ್ತಿದೆ‌.

Last Updated : Oct 13, 2020, 2:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.