ಬೆಂಗಳೂರು: ದುಡ್ಡು ನೀಡಿದರೆ ನಟಿ ಪ್ರಣಿತಾ ಸುಭಾಷ್ ಅವರು ನಿಮ್ಮ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಒಪ್ಪಂದಕ್ಕೆ ಗಂಟೆಯೊಳಗೆ ಸಹಿ ಹಾಕಲಿದ್ದಾರೆ ಎಂದು ಹೇಳಿ ಆರೋಪಿಗಳಿಬ್ಬರು ಎಸ್ವಿ ಗ್ರೂಪ್ & ಡೆವಲಪರ್ಸ್ ಮ್ಯಾನೇಜರ್ಗೆ 13.5 ಲಕ್ಷ ವಂಚಿಸಿದ್ದಾರೆ.
ಎಸ್ವಿ ಗ್ರೂಪ್ ಮ್ಯಾನೇಜರ್ಗೆ ಆತನ ಸ್ನೇಹಿತನ ಮುಖಾಂತರ ಆರೋಪಿಗಳು ಪರಿಚಯವಾಗಿದ್ದರು. ನಂತರ ಆ ಮ್ಯಾನೇಜರ್ನನ್ನು ಬೆಂಗಳೂರಿನ ಖಾಸಗಿ ಹೋಟೆಲ್ಗೆ ಕರೆಸಿಕೊಂಡಿದ್ದ ಆರೋಪಿಗಳು, ದುಡ್ಡು ಕೊಟ್ಟರೆ ಗಂಟೆಯೊಳಗೆ ಪ್ರಣಿತಾ ಅವರು ನಿಮ್ಮ ಬ್ರಾಂಡ್ ಅಂಬಾಸಿಡರ್ಗೆ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಎಂದಿದ್ದರು.
ಆರೋಪಿಗಳ ಮಾತು ನಂಬಿ ₹13.5 ಲಕ್ಷ ಮಹಮ್ಮದ್ ಜುನಾಯತ್ ಹಾಗೂ ವರ್ಷ ಎಂಬವರಿಗೆ ಕೊಟ್ಟಿದ್ದಾರೆ. ಹಣ ಪಡೆಯುತ್ತಿದ್ದಂತೆ ಹೋಟೆಲ್ ರೂಮ್ಗೆ ಹೋಗಿ ಬರುತ್ತೇವೆ ಎಂದು ಹೇಳಿ ಹೋದವರು ಮತ್ತೆ ಮರಳಿ ಬರಲಿಲ್ಲ. ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.