ETV Bharat / city

ರಾಜ್ಯ ಸರ್ಕಾರ ಜನ ವಿರೋಧಿ ಭೂಸುಧಾರಣಾ ಕಾಯ್ದೆ ವಿರುದ್ಧ ಕಾಂಗ್ರೆಸ್‌ ಹೋರಾಟ- ಉಗ್ರಪ್ಪ

ಮುಖ್ಯಮಂತ್ರಿ ಬಿಎಸ್​ವೈ, ಬಿಜೆಪಿ ಪಕ್ಷ ಹಾಗೂ ಮುಖಂಡು ಜನರ ಸಮಸ್ಯೆಗೆ ಸ್ಪಂಧಿಸದೇ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದಾರೆ. ಸಿಎಂ ನಾಚಿಕೆಗೇಡಿನ ಹೇಳಿಕೆ ನೀಡುತ್ತಿದ್ದಾರೆ ಎಂದು ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Former MP V.S. Ugrappa
ವಿ.ಎಸ್. ಉಗ್ರಪ್ಪ
author img

By

Published : Jun 13, 2020, 10:24 PM IST

ಬೆಂಗಳೂರು : ರಾಜ್ಯ ಸರ್ಕಾರ ಈಗ ಜನ ಹಾಗೂ ರೈತ ವಿರೋಧಿಯಾಗಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ ಎಂದು ಮಾಜಿ ಸಂಸದ ವಿ ಎಸ್‌ ಉಗ್ರಪ್ಪ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಜನ ಬದುಕಿನ ಜತೆ ಹೋರಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಬಿಎಸ್​ವೈ, ಬಿಜೆಪಿ ಪಕ್ಷ ಹಾಗೂ ಮುಖಂಡು ಜನರ ಸಮಸ್ಯೆಗೆ ಸ್ಪಂದಿಸದೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದಾರೆ. ಸಿಎಂ ನಾಚಿಕೆಗೇಡಿನ ಹೇಳಿಕೆ ನೀಡುತ್ತಿದ್ದಾರೆ. ಜನಪರ, ರೈತಪರ ಕಾಯ್ದೆಯನ್ನು ತಿದ್ದಲು ಹೋದ್ರೆ ನಿಮ್ಮ ಅಧಿಕಾರ ಕಳೆದುಕೊಳ್ಳುವ ದಿನ ಹೆಚ್ಚು ದೂರವಿಲ್ಲ ಎಂದರು. ಸರ್ಕಾರ ಕಾನೂನು ತಿದ್ದುಪಡಿ ಮೂಲಕ ತಮಗೆ ಹಾಗೂ ತಮ್ಮ ಬೆಂಬಲಿಗರಿಗೆ ಹಾಗೂ ಈಗಾಗಲೇ ಸಾಕಷ್ಟು ಉಳ್ಳವರಿಗೆ ಇನ್ನಷ್ಟು ಭೂಮಿ ಒದಗಿಸಿಕೊಡುವ ಕಾರ್ಯ ಮಾಡಲು ಮುಂದಾಗಿದೆ. ಕೊರೊನಾ ಆತಂಕದ ನಡುವೆ ರಾಜ್ಯ ಸರ್ಕಾರ ಜನರ ಸಮಸ್ಯೆಯ ಬದಲು ತನ್ನ ಸ್ವಾರ್ಥ ಸಾಧನೆಗೆ ಒಂದಾಗಿದೆ. ಇದನ್ನು ಖಂಡಿಸಿ ನಾವು ರಾಜ್ಯಾದ್ಯಂತ ಜನಜಾಗೃತಿ ಹಾಗೂ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ವಿವರಿಸಿದರು.

ಹಿರೇಮಠ್ ವಿರುದ್ಧ ಆಕ್ರೋಶ : ಡಿಕೆಶಿ ಈ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗ‌ ಹಣ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಹೇಳಿದ್ದಾರೆ. ಬಿಜೆಪಿ ವಕ್ತಾರರಾಗಿ ಕೆಲಸ ಮಾಡಿ. ಬಿಜೆಪಿ ಏಜೆಂಟ್‌ರಂತೆ ವರ್ತಿಸಬೇಡಿ. ಡಿಕೆಶಿ ಅಧಿಕಾರ ವಹಿಸಿಕೊಂಡು ಮೂರು ತಿಂಗಳ ನಂತರ ಆರೋಪ ಮಾಡುವುದು ಸರಿಯಲ್ಲ. ತಾವು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದೀರಿ, ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಸಲಹೆ ಇತ್ತರು.

ಜಿಂದಾಲ್ ಸಮಸ್ಯೆ: ಜಿಂದಾಲ್​ನಲ್ಲಿ 28 ಸಾವಿರ ಕೆಲಸಗಾರರಿದ್ದು, 12 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. 103 ಪಾಸಿಟಿವ್ ಬಂದಿದೆ. 300 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲಿನ ಅಧಿಕಾರಿ ಸುಬ್ರಹ್ಮಣ್ಯಂ ವಿಜ್ರಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಿಂದ ರೋಗ ಹರಡಿದೆ. ಇವರ ತಾಯಿಗೋ, ಪತ್ನಿಗೋ ರೋಗ ಇತ್ತು. ಇದು ಉಳಿದವರಿಗೆ ಹಬ್ಬಿದೆ. ಜಿಲ್ಲಾಡಳಿತದ ವೈಫಲ್ಯ ಇದಕ್ಕೆ ‌ಕಾರಣ. ಇಲ್ಲಿನ ವಿವಿಧ ಹಳ್ಳಿಗಳು ಆತಂಕದಲ್ಲಿ ಕಳೆಯುವಂತಾಗಿದೆ. ಜಿಲ್ಲಾಡಳಿತ, ಸರ್ಕಾರ ಜೀವಂತ ಆಗಿದ್ದರೆ ಜಿಂದಾಲ್​ನಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಬೇಕು. ಇದಕ್ಕೆ ಜಿಂದಾಲ್ ಹಣ ಬಳಸಬೇಕು. ಬಿಹಾರ್, ಒಡಿಶಾದವರು ಜಿಂದಾಲ್​ನಲ್ಲಿ ಇದಾರೆ. ಇಂತವರಿಂದ ಹರಡುತ್ತಿದೆ. ಈ ಭಾಗದ ಮಂತ್ರಿಗಳು ಪರಸ್ಪರ ಸಂವಹನ ಮಾಡಿಕೊಳ್ಳಬೇಕು ಎಂದರು.

ಕರಪತ್ರ ವಿತರಣೆ : ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಸುಳ್ಳು ಸುದ್ದಿ ಜನರನ್ನು‌ ವಂಚಿಸುತ್ತಿದೆ. ಮುಗ್ದ ಜನರಿಗೆ ‌ಜಾಗೃತಿ ಮೂಡಿಸುವ ಸಲುವಾಗಿ ನಾವು ಪ್ರಯತ್ನಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ಗಿಮಿಕ್​ ಮಹಿಳಾ ಕಾಂಗ್ರೆಸ್ ವತಿಯಿಂದ ಎಳೆ ಎಳೆಯಾಗಿ ವಿವರಿಸಲು ಮುಂದಾಗಿದ್ದೇವೆ. ಕೊರೊನಾ ವಿಚಾರದಲ್ಲಿ ನಾವು ನಿಯಂತ್ರಣ ಸಾಧಿಸಿದ್ದೇವೆ ಎಂದು ಜನರ ಮುಂದೆ ಬಿಜೆಪಿ ತೆರಳಲು ಮುಂದಾಗಿದೆ. ಆದರೆ, ಈಗ ದೇಶದ ಸ್ಥಿತಿ ಹೇಗಿದೆ ಎನ್ನುವುದು ಕಾಣುತ್ತೇವೆ. ಇಂದಿರಾ ಕ್ಯಾಂಟೀನ್ ನಿಲ್ಲಿಸಲು ಸರ್ಕಾರ ಮುಂದಾಗಿದೆ. ಇದನ್ನು ಲಾಭಕ್ಕೆ ತರಲು ಸಾಧ್ಯವಿಲ್ಲ, ಹಣ ನೀಡಲು ಸಾಧ್ಯವಿಲ್ಲ ಎಂದು ಮುಚ್ಚಲು ಮುಂದಾಗಿದ್ದನ್ನು ನಾವು ಖಂಡಿಸುತ್ತೇವೆ. ಇಂದಿರಾ ಕ್ಯಾಂಟೀನ್ ಮುಚ್ಚಲು ಬಿಡಲ್ಲ, ರಕ್ತಪಾತ ಆದರೂ ಸರಿ ಎಂದರು.

ತಮ್ಮ ಸಾಧನೆ ಮನೆ ಮನೆಗೆ ತಲುಪಿಸುತ್ತೇವೆ ಎಂದಿದ್ದಾರೆ. ಯಾವ ಅಭಿವೃದ್ಧಿ ಆಗಿದೆ ಎಂದು ನಾವು ಕೇಳುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಮುಂದಿನ ವಾರದಿಂದ ಕರಪತ್ರ ಹಂಚುವ ಚಳುವಳಿ ನಡೆಸುತ್ತೇವೆ. ಮಹಿಳಾ ಕಾಂಗ್ರೆಸ್ ವತಿಯಿಂದ 3 ಲಕ್ಷ ಕರಪತ್ರ ಮುದ್ರಿಸಿ ಹಂಚುತ್ತೇವೆ. ಇನ್ನು ಇಂಧನ ಬೆಲೆ ಹೆಚ್ಚಳ ಆಗುತ್ತಿದೆ. ಕಚ್ಚಾತೈಲ ಬೆಲೆ ಇಳಿದಿದ್ದರೂ ಬೆಲೆ ಹೆಚ್ಚಳ ಆಗುತ್ತಲೇ ಇದೆ. ಇದನ್ನೂ ಖಂಡಿಸುತ್ತೇವೆ. ಹೊಟೇಲ್ ಆಹಾರ ಬೆಲೆ ಹೆಚ್ಚಾಗಿದೆ. ಸಾಲದ ಮೇಲಿನ ಬಡ್ಡಿ ಹೆಚ್ಚಿಸಲಾಗಿದೆ. ಜನ ಹಿತ ಮರೆತ ಸರ್ಕಾರದ ವಿರುದ್ಧ ಜಾಗೃತಿ ಮೂಡಿಸುತ್ತೇವೆ. ಮನೆ‌ಮನೆಗೆ ತೆರಳಿ ಕರಪತ್ರ ಹಂಚುತ್ತೇವೆ. ಮಹಿಳಾ ಜಾಗೃತಿ ಮೂಡಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದಕ್ಕೆ ಚಾಲನೆ ನೀಡಲಿದ್ದಾರೆ. ನಮ್ಮ ಅಭಿಯಾನ ಇಲ್ಲಿಗೆ ನಿಲ್ಲಲ್ಲ. ಉಗ್ರ ಹೋರಾಟ ನಡೆಸುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.