ETV Bharat / city

ನಾಳೆ ಭಾರತದ ಮಾಜಿ ಕ್ರಿಕೆಟರ್ ಬಿ ಎಸ್ ಚಂದ್ರಶೇಖರ್ ಆಸ್ಪತ್ರೆಯಿಂದ ಡಿಸ್ಚಾರ್ಜ್..

author img

By

Published : Jan 19, 2021, 10:28 PM IST

ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತಸ್ವಾಮಿ ಹೇಳಿಕೆ ನೀಡಿದ್ದು ಬಿ.ಎಸ್.ಚಂದ್ರಶೇಖರ್ ಅವರ ಆರೋಗ್ಯ ಸ್ಥಿರವಾಗಿದೆ. ನಾಳೆ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ..

ಬಿ.ಎಸ್.ಚಂದ್ರಶೇಖರ್
ಬಿ.ಎಸ್.ಚಂದ್ರಶೇಖರ್

ಬೆಂಗಳೂರು : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್ ಅನಾರೋಗ್ಯದ ಕಾರಣ ಜನವರಿ 17ರಂದು ಬೆಂಗಳೂರಿನ ಜೆ.ಪಿ ನಗರದ ಆಸ್ಟರ್ ಆರ್‌ವಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೆರಡು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದ ಅವರ ಅರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮನೆಯಲ್ಲಿ ಕ್ರಿಕೆಟ್ ನೋಡುತ್ತಿದ್ದ ಚಂದ್ರಶೇಖರ್ ಅವರು ಇದ್ದಕ್ಕಿದ್ದಂತೆ ಆಯಾಸವಾಗುತ್ತಿದೆ ಎಂದಿದ್ದರು. ಮಾತನಾಡುವ ವೇಳೆ ತೊದಲುತ್ತಿದ್ದರು. ಹಾಗಾಗಿ, ಕೂಡಲೇ ಅವರನ್ನು ಆತ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈಗ ಅವರು ಉತ್ತಮವಾಗಿದ್ದು, ನಾಳೆ ಜಯನಗರದ ತಮ್ಮ ಮನೆಗೆ ಮರಳಲಿದ್ದಾರೆ ಎಂದು ಚಂದ್ರಶೇಖರ್ ಪತ್ನಿ ಸಂಧ್ಯಾ ಚಂದ್ರಶೇಖರ್ ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

Former Indian cricketer BS Chandrasekhar discharged from hospital tomorrow
ಮಾಜಿ ಕ್ರಿಕೆಟರ್ ಬಿ.ಎಸ್.ಚಂದ್ರಶೇಖರ್

ಆಸ್ಪತ್ರೆ ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತಸ್ವಾಮಿ ಹೇಳಿಕೆ ನೀಡಿದ್ದು ಬಿ.ಎಸ್.ಚಂದ್ರಶೇಖರ್ ಅವರ ಆರೋಗ್ಯ ಸ್ಥಿರವಾಗಿದೆ. ನಾಳೆ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬಿ.ಎಸ್​ ಚಂದ್ರಶೇಖರ್, ಟೀಂ ಇಂಡಿಯಾ ಪರ 58 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ 242 ವಿಕೆಟ್ ಪಡೆದು ಮಿಂಚಿದ್ದಾರೆ. ಅವರು ಕೊನೆ ಟೆಸ್ಟ್ ಪಂದ್ಯವನ್ನು 1979ರಲ್ಲಿ ಆಡಿದ್ದರು. ಏಕೈಕ ಏಕದಿನ ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡಿ 3 ವಿಕೆಟ್ ಕಬಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.