ETV Bharat / city

ಮೋದಿಗೆ ತಾಕತ್ತಿದ್ದರೆ ಮರುಚುನಾವಣೆ ಘೋಷಿಸಲಿ: ಉಗ್ರಪ್ಪ ಬಹಿರಂಗ ಸವಾಲ್ - ರಾಜ್ಯಸಭೆಗೆ ಹೋಗುವ ಆಸೆಯೇನಾದ್ರೂ ಅವರಿಗೆ ಇರಬಹುದು

ಕಾಂಗ್ರೆಸ್ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಮರುಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

KN_BNG_03_V_S_UGRAPPA_PC_KPCC_SCRIPT_9020923
ಮೋದಿಗೆ ತಾಕತ್ತಿದ್ದರೆ ಮರುಚುನಾವಣೆಗೆ ಬರಲಿ: ಮಾಜಿ ಸಂಸದ ಉಗ್ರಪ್ಪ ಬಹಿರಂಗ ಸವಾಲ್
author img

By

Published : Jan 11, 2020, 3:26 PM IST

ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಮರುಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಪ್ರಧಾನಿ ಮೋದಿಗೆ ಉಗ್ರಪ್ಪ ಓಪನ್ ಚಾಲೆಂಜ್ ಮಾಡುತ್ತಿದ್ದೇನೆ, ಅಸೆಂಬ್ಲಿ, ಸಂಸತ್ ವಿಸರ್ಜಿಸಿ ಚುನಾವಣೆಗೆ ಬನ್ನಿ. ಬ್ಯಾಲೆಟ್ ಪೇಪರ್ ಮೇಲೆ ಚುನಾವಣೆ ಎದುರಿಸಿ, ಚುನಾವಣೆಯಲ್ಲಿ ನೀವು ಗೆದ್ದು ಬನ್ನಿ. ಆಗ ನಾನು ಇರುವವರೆಗೆ ನಿಮ್ಮ ಬಗ್ಗೆ ಒಂದೂ ಮಾತನಾಡಲ್ಲ ಎಂದರು. ಕನ್ನಡದ ಸಾಹಿತಿ ಡಾ. ಎಸ್.ಎಲ್.ಭೈರಪ್ಪನವರ ಬರವಣಿಗೆ ಅದ್ಬುತ. ಅವರ ವಿಚಾರಗಳು ಏನೇ ಇರಲಿ, ಆದರೆ ಅವರು ಯಾವಾಗ ಬಿಜೆಪಿ ಸೇರಿದ್ರು ಗೊತ್ತಿಲ್ಲ. ಬೈರಪ್ಪನವರು ಬಿಜೆಪಿಯ ವಿಚಾರಧಾರೆಯನ್ನ ಮಂಡಿಸುತ್ತಿದ್ದು, ರಾಜ್ಯಸಭೆಗೆ ಹೋಗುವ ಆಸೆಯೇನಾದ್ರೂ ಅವರಿಗೆ ಇರಬಹುದು. ಬಿಜೆಪಿ ನಾಯಕರು ಅವರಿಗೆ ಕೊಡೋಕೆ ಹೊರಟಿರಬಹುದು. ಭೈರಪ್ಪ ಅದಕ್ಕೇ ಬಿಜೆಪಿಯನ್ನ ಹೊಗಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಇದನ್ನ ನೀವು ಅರಿತುಕೊಂಡರೆ ಸಾಕು ಭೈರಪ್ಪನವರೇ, ಇಳಿವಯಸ್ಸಿನಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಯಾಕೆ ಮಸಿ ಬಳಿದುಕೊಳ್ತೀರಾ. ಲೇಖಕರು ಅಂತ ಯಾಕೆ ಹಣೆಪಟ್ಟಿ ಹಾಕಿಕೊಳ್ತೀರಾ ಎಂದು ಆಕ್ರೋಶ ಹೊರ ಹಾಕಿದರು.

ಮೋದಿಗೆ ತಾಕತ್ತಿದ್ದರೆ ಮರುಚುನಾವಣೆಗೆ ಬರಲಿ: ಮಾಜಿ ಸಂಸದ ಉಗ್ರಪ್ಪ ಬಹಿರಂಗ ಸವಾಲ್
ಚಿಕ್ಕಮಗಳೂರು ಜಿಲ್ಲೆ ಕನ್ನಡ ಸಾಹಿತ್ಯ ಸಮಾವೇಶವನ್ನ ವಿಠ್ಹಲ್​ ಹೆಗಡೆ ಭಾಗಿಯಾಗ್ತಾರೆ ಅಂತ ರದ್ದು ಮಾಡೋಕೆ ಹೊರಟರೆ ಹೇಗೆ? ಎರಡು ದಿನದ ಕಾರ್ಯಕ್ರಮ ಒಂದೇ ದಿನಕ್ಕೆ ಇಳಿಸಿದೆ. ರಾಜ್ಯ ಸರ್ಕಾರ ಇಷ್ಟು ಕೀಳುಮಟ್ಟಕ್ಕಿಳಿದಿದೆ. ಕನ್ನಡ, ಕನ್ನಡಿಗರಿಗೆ ಸರ್ಕಾರ ಮಾಡಿದ ದ್ರೋಹ. ಸಮ್ಮೇಳನಕ್ಕೆ ರಕ್ಷಣೆ ಕೊಡಲಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದರು. ಸೋಮಶೇಖರ ರೆಡ್ಡಿ ಸಮಾಜ ಒಡೆಯೋ ಹೇಳಿಕೆ ಕೊಡ್ತಾರೆ ಅವರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ಅಂತವರ ಜೊತೆ ನಿಂತು ಫೋಟೋಗೆ ಫೋಸ್ ಕೊಡ್ತೀರಿ. ಅವರ ಕೇಸ್ ವಾಪಸ್ ತೆಗೆದುಕೊಳ್ಳೋಕೆ ಹೇಳ್ತೀರ. ಇದು ನಿಮಗೆ ನಾಚಿಕೆಯಾಗಲ್ವಾ ಎನ್ನುವ ಮೂಲಕ ಸಿಎಂ ಯಡಿಯೂರಪ್ಪ ವಿರುದ್ದ ಹರಿಹಾಯ್ದರು.

Intro:newsBody:ತಾಕತ್ತಿದ್ದರೆ ಮರುಚುನಾವಣೆಗೆ ಬನ್ನಿ ಪ್ರಧಾನಿ ಮೋದಿಗೆ ಮಾಜಿ ಸಂಸದ ಉಗ್ರಪ್ಪ ಬಹಿರಂಗ ಸವಾಲ್

ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ವಿಎಸ್ ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಮರುಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಕೆಪಿಸಿಸಿ ಕಚೇರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಧಾನಿ ಮೋದಿಗೆ ಉಗ್ರಪ್ಪ ಓಪನ್ ಚಾಲೆಂಜ್ ಮಾಡುತ್ತಿದ್ದೇನೆ. ಅಸೆಂಬ್ಲಿ, ಸಂಸತ್ ವಿಸರ್ಜಿಸಿ ಚುನಾವಣೆಗೆ ಬನ್ನಿ. ಬ್ಯಾಲೆಟ್ ಪೇಪರ್ ಮೇಲೆ ಚುನಾವಣೆ ಎದುರಿಸಿ. ಚುನಾವಣೆಯಲ್ಲಿ ನೀವು ಗೆದ್ದು ಬನ್ನಿ. ಆಗ ನಾನು ಇರುವವರೆಗೆ ನಿಮ್ಮ ಬಗ್ಗೆ ಒಂದು ಮಾತನಾಡಲ್ಲ ಎಂದರು.
ಎಸ್ಎಲ್ ಬೈರಪ್ಪ ವಿರುದ್ಧ ಆಕ್ರೋಶ
ಕನ್ನಡದ ಸಾಹಿತಿ ಡಾ. ಎಸ್.ಎಲ್.ಭೈರಪ್ಪನವರ ಬರವಣಿಗೆ ಅದ್ಬುತ. ಅವರ ವಿಚಾರಗಳು ಏನೇ ಇರಲಿ,ಲೇಖನ ನಿಖರ. ಆದರೆ ಅವರು ಯಾವಾಗ ಬಿಜೆಪಿ ಸೇರಿದ್ರು ಗೊತ್ತಿಲ್ಲ. ಬೈರಪ್ಪನವರು ಬಿಜೆಪಿಯ ವಿಚಾರಧಾರೆಯನ್ನ ಮಂಡಿಸುತ್ತಿದ್ದಾರೆ. ರಾಜ್ಯಸಭೆಗೆ ಹೋಗುವ ಆಸೆಯೇನಾದ್ರೂ ಅವರಿಗೆ ಇರಬಹುದು. ಬಿಜೆಪಿ ನಾಯಕರು ಅವರಿಗೆ ಕೊಡೋಕೆ ಹೊರಟಿರಬಹುದು. ಭೈರಪ್ಪ ಅದಕ್ಕೇ ಬಿಜೆಪಿಯನ್ನ ಹೊಗಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ದೂಷಿಸುತ್ತಿದ್ದಾರೆ. ದೇಶಕ್ಕೆ ಸ್ವತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಇದನ್ನ ನೀವು ಅರಿತುಕೊಂಡರೆ ಸಾಕು ಭೈರಪ್ಪನವರೇ. ಇಳಿವಯಸ್ಸಿನಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಯಾಕೆ ಮಸಿ ಬಳಿದುಕೊಳ್ತೀರ. ಸಂಘ ಪರಿವಾರದವರು ಅಂತ ಡಿಕ್ಲೇರ್ ಮಾಡಿಕೊಳ್ಳಿ. ಲೇಖಕರು ಅಂತ ಯಾಕೆ ಹಣೆಪಟ್ಟಿ ಹಾಕಿಕೊಳ್ತೀರ ಎಂದು ಹೇಳಿದರು.
ವಿವೇಕಾನಂದ ಜಯಂತಿ
ನಾಳೆ ಸ್ವಾಮಿ ವಿವೇಕಾನಂದರ ಜಯಂತಿ ಇದೆ. ವಿಶ್ವಕಂಡ ಮಹಾನ್ ಚೇತನ ವಿವೇಕಾನಂದರು. ಭಾರತದ ಹೆಸರನ್ನ ವಿಶ್ವಮಟ್ಟದಲ್ಲಿ ಬೆಳಗಿಸಿದವರು. ಈ ಜಯಂತಿಯಿಂದಾದ ಧರ್ಮ ಸಹಿಷ್ಣುತೆ ಮೈಗೂಡಿಸಿಕೊಳ್ಳಲಿ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಮೈಗೂಡಿಸಿಕೊಳ್ಳಲಿ. ಆಗ ವಿವೇಕಾನಂದರ ಹೆಸರು ಹೇಳೋಕೆ ಅರ್ಹರಾಗ್ತಾರೆ. ಕಾಶ್ಮೀರಿಗಳ ಬದುಕನ್ನ ಕಿತ್ತುಕೊಳ್ಳಲಾಗಿದೆ. ಸುಪ್ರೀಂ ನ್ಯಾಯಮೂರ್ತಿಗಳೇ ಎಲ್ಲವೂ ಸರಿಯಿಲ್ಲ ಅಂದಿದ್ದಾರೆ. ದೇಶವಿರೋಧಿ ಧೋರಣೆ ಇದ್ದರೆ ಕ್ರಮ ತೆಗೆದುಕೊಳ್ಳಿ. ಫ್ರೀ ಕಾಶ್ಮೀರ ವಿಚಾರದಲ್ಲಿ ಕ್ರಮತೆಗೆದುಕೊಳ್ಳಿ. ಆದರೆ ಕಾಶ್ಮೀರಿಗರ ಬದುಕನ್ನ ಯಾಕೆ ಕಿತ್ತುಕೊಳ್ತೀರ ಎಂದು ಬಿಜೆಪಿ ನಾಯಕರ ವಿರುದ್ಧ ಉಗ್ರಪ್ಪ ಪ್ರಶ್ನೆ ಹಾಕಿದರು.
ಅಸಡ್ಡೆ ಸರಿಯೇ?
ಚಿಕ್ಕಮಗಳೂರು ಜಿಲ್ಲೆ ಕನ್ನಡ ಸಮಾವೇಶಕ್ಕೆ ವಿರೋಧ ವಿಚಾರ ಮಾತನಾಡಿ, ವಿಠಲ್ ಹೆಗಡೆ ಭಾಗಿಯಾಗ್ತಾರೆ ಅಂತ ರದ್ಧು ಮಾಡೋಕೆ ಹೊರಟರೆ ಹೇಗೆ? ಎರಡು ದಿನದ ಕಾರ್ಯಕ್ರಮ ಒಂದೇ ದಿನಕ್ಕೆ ಇಳಿಸಿದರೆ ಹೇಗೆ. ಕನ್ನಡ ಸಂಸ್ಕೃತಿ ಕಾರ್ಯಕ್ರಮಕ್ಕೆ ಅಸಡ್ಡೆ ಸರಿಯೇ? ರಾಜ್ಯ ಸರ್ಕಾರ ಇಷ್ಟು ಕೀಳುಮಟ್ಟಕ್ಕಿಳಿದರೆ ಹೇಗೆ? ಕನ್ನಡ, ಕನ್ನಡಿಗರಿಗೆ ಸರ್ಕಾರ ಮಾಡಿದ ದ್ರೋಹ. ಸಮ್ಮೇಳನಕ್ಕೆ ರಕ್ಷಣೆ ಕೊಡಲಿಲ್ಲ ಅಂದರೆ ಹೇಗೆ? ಸೋಮಶೇಖರ ರೆಡ್ಡಿ ಸಮಾಜಹೊಡೆಯೋ ಹೇಳಿಕೆ ಕೊಡ್ತಾರೆ. ಅವರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ಕೋರ್ಟೇ ಅವರ ಬೇಲ್ ನಿರಾಕರಿಸಿದೆ. ಅಂತವರ ಜೊತೆ ನಿಂತು ಫೋಟೋಗೆ ಫೋಸ್ ಕೊಡ್ತೀರ. ಅವರ ಕೇಸ್ ವಾಪಸ್ ತೆಗೆದುಕೊಳ್ಳೋಕೆ ಹೇಳ್ತೀರ. ಇದು ನಿಮಗೆ ನಾಚಿಕೆಯಾಗಲ್ವಾ ಸಿಎಂ ಆವ್ರೇ ಎಂದರು.
ತನಿಖೆ ನಡೆಸಿ
ಮಂಗಳೂರು ಘಟನೆ ಮುಚ್ಚುವ ಪ್ರಯತ್ನ ನಡೆದಿದೆ. ಕುಮಾರಸ್ವಾಮಿ ನಿನ್ನೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಬಗ್ಗೆಯಾದ್ರೂ ಸರಿಯಾದ ತನಿಖೆ ನಡೆಸಿ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ನಿಮಗೆ ಸತ್ಯಾಂಶ ಹೊರಬರುವುದು ಬೇಕಿಲ್ಲ. ತಮ್ಮ ಮೇಲಿನ ಆರೋಪ ಮುಚ್ಚುವ ಪ್ರಯತ್ನ ನಡೆಸಿದ್ದೀರ ಎಂದು ವಿವರಿಸಿದರು.

Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.