ETV Bharat / city

ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದು ಕುಮಾರಸ್ವಾಮಿ ಕೋರಿದ್ದೇನು? - Former CM HD Kumaraswamy wrote a letter to Home Minister Araga Jnanendra

ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಸಿವಿಲ್) ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳ ನಡುವೆ ಇರುವ ಅನುಪಾತ ಹಾಗೂ ಬಡ್ತಿ ಕುರಿತು ಕೆಲ ಮಾರ್ಪಾಡು ಮಾಡುವಂತೆ ತಿಳಿಸಿದ್ದಾರೆ.

ಹೆಚ್​.ಡಿ.ಕುಮಾರಸ್ವಾಮಿ
Former CM HD Kumaraswamy
author img

By

Published : Aug 22, 2021, 12:04 PM IST

ಬೆಂಗಳೂರು: ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಸಿವಿಲ್) ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳ ನಡುವೆ ಇರುವ ಅನುಪಾತ 70:30 ರ ಧೋರಣೆ ಪರಿಷ್ಕರಿಸಿ 50:50 ರ ಅನುಪಾತಕ್ಕೆ ಹೆಚ್ಚಿಸುವ ಬಗ್ಗೆ ಹಾಗೂ ಎಎಸ್ಐ ಸಿವಿಲ್ ಹುದ್ದೆಯಿಂದ ಪಿಎಸ್ಐ ಹುದ್ದೆಗೆ ಬಡ್ತಿ ನೀಡುವ ಸೇವಾ ಅವಧಿಯನ್ನು 3 ವರ್ಷಕ್ಕೆ ಇಳಿಸಬೇಕು ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Araga Jnanendra
ಹೆಚ್​.ಡಿ.ಕುಮಾರಸ್ವಾಮಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಬರೆದ ಪತ್ರ

ಪತ್ರದ ಸಾರಾಂಶ:

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳನ್ನು 2003 ರಿಂದ ನೇರ ನೇಮಕಾತಿ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮುಖಾಂತರ ಆಯ್ಕೆ ಮಾಡಲಾಗುತ್ತಿದ್ದು, ಬಹುತೇಕ ನೌಕರರು ಶೇ.75 ರಷ್ಟು ಪದವಿಧರರಾಗಿದ್ದಾರೆ. ಇಲಾಖೆಯಲ್ಲಿ ಸುಮಾರು 25 ವರ್ಷ ಸೇವೆ ಮಾಡಿದ್ದರೂ ಸಹ ಇನ್ನೂ ಒಂದೇ ಹುದ್ದೆಯಲ್ಲಿ ಇರುವುದರಿಂದ ಇಲಾಖೆಯ ಸೇವಾ ನಿರತ ಸಿಬ್ಬಂದಿಯಲ್ಲಿ ಆತ್ಮಸ್ಥೆರ್ಯ ಮತ್ತು ದಕ್ಷತೆ ಇಳಿಮುಖವಾಗುತ್ತಿದೆ. ಸೇವಾ ನಿರತ ಸಿಬ್ಬಂದಿ ಪಿ.ಎಸ್.ಐ ವೃಂದದ ನೇರ ನೇಮಕಾತಿ ಹುದ್ದೆಗೆ ಸ್ಪರ್ಧಿಸುತ್ತಿದ್ದರೂ ಸಹ ಅಖಿತ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಟ ಅಂಕಗಳನ್ನು ಪಡೆದುಕೊಂಡು ಆಯ್ಕೆಯಾಗುತ್ತಿದ್ದಾರೆ. ಆದರೆ ಸೇವಾನಿತರ ಅಭ್ಯರ್ಥಿಗಳ ನಡುವೆಯೇ ತೀವ್ರ ತರಹದ ಪೈಪೋಟಿಯಿದ್ದು, ಗರಿಷ್ಠ ಅಂಕಗಳನ್ನು ಪಡೆಯಬೇಕಾಗಿದೆ. ಅದರಲ್ಲೂ 90 ರಷ್ಟು ಸಿಬ್ಬಂದಿ ಸಮೀಪ ಸ್ಪರ್ಧಿಗಳಾಗಿದ್ದು, ಕೇವಲ ಅರ್ಧ ಅಂಕಗಳಲ್ಲಿ ಮಾತ್ರ ವ್ಯತ್ಯಾಸವಾಗಿ ಪಿ.ಎಸ್.ಐ ಹುದ್ದೆಗೆ ಅರ್ಹರಾಗುತ್ತಿರುವುದಿಲ್ಲ. ಕನಿಷ್ಠ 3 ಮುಂಬಡ್ತಿ ಹುದ್ದೆಗೇರಲು ಇಲಾಖೆಯ ನ್ಯೂನ್ಯತೆಗಳನ್ನು ಹಾಗೂ ಅನುಪಾತ ಹೆಚ್ಚಳದ ಧೋರಣೆಗಳನ್ನು ಸರಿಪಡಿಸಬೇಕು ಎಂದಿದ್ದಾರೆ.

ಪತ್ರದಲ್ಲಿ ಪ್ರಕಟಿಸಿದ ಪ್ರಮುಖ ಅಂಶಗಳು:

1. ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗೆ ಗರಿಷ್ಠ 3 ಮುಂಬಡ್ತಿಯನ್ನು ಪಡೆಯಬೇಕೆಂಬ ನಿಯಮವಿದೆ.

2. ಸಿಬ್ಬಂದಿ 3 ಮುಂಬಡ್ತಿ ದೊರೆಯದೆ ಎ.ಎಸ್.ಐ ಅಥವಾ ಹೆಚ್.ಸಿ ಹುದ್ದೆಗಳಲ್ಲಿ ನಿವೃತ್ತಿಯಾಗುತ್ತಿದ್ದಾರೆ.

3. 50:50 ರ ಅನುಪಾತ ಪರಿಷ್ಕರಣೆಯಿಂದ ಇಲಾಖೆಯ ಸಿಬ್ಬಂದಿಗೆ ಬೇಗನೆ ಮುಂಬಡ್ತಿ ದೊರೆಯುತ್ತದೆ.

4. ವಯೋ ನಿವೃತ್ತಿ ವೇಳೆಗೆ ಪಿ.ಸಿ ಹುದ್ದೆಯಿಂದ ಪಿ.ಎಸ್.ಐ ಹುದ್ದೆಗೆ ಮುಂಬಡ್ತಿ ದೊರೆಯುವುದರಿಂದ ಇಲಾಖೆಯಲ್ಲಿ ದಕ್ಷತೆ ಹಾಗೂ ಹೆಚ್ಚಿನ ಉತ್ತಮ ಕೆಲಸ ಮಾಡುವುದರಿಂದ ಇಲಾಖೆಯ ಗೌರವ ಹೆಚ್ಚಾಗುತ್ತದೆ.

5. ಎ.ಎಸ್.ಐ ಹುದ್ದೆಯಿಂದ ಪಿ.ಎಸ್.ಐ ಹುದ್ದೆ ಮುಂಬಡ್ತಿಗೆ ಪರಿಗಣಿಸಲು ಹಾಲಿ ಇರುವ ಕನಿಷ್ಠ 5 ವರ್ಷಗಳ ಸೇವಾವಧಿಯನ್ನು 3 ವರ್ಷಗಳಿಗೆ ಪರಿಗಣಿಸಹಬಹುದು ಅಥವಾ ಅರ್ಹತೆಯಿರುವ ಸಿಬ್ಬಂದಿಯನ್ನು ಕಾಲ ಕಾಲಕ್ಕೆ ಭರ್ತಿ ಮಾಡಬೇಕು.

ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಪೊಲೀಸ್ ಇಲಾಖೆಯ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಸಿವಿಲ್ ವೃಂದ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳ ನಡುವೆ ಇರುವ ಅನುಪಾತ 70:30ರ ಧೋರಣೆ ಪರಿಷ್ಕರಿಸಿ 50:50ರ ಅನುಪಾತಕ್ಕೆ ಹೆಚ್ಚಿಸುವಂತೆ ಹಾಗೂ ಪಿ.ಎಸ್.ಐ ಹುದ್ದೆಯಿಂದ ಪಿ.ಎಸ್.ಐ ಹುದ್ದೆಗೆ ಬಡ್ತಿ ನೀಡುವ ಸೇವಾ ಅವಧಿಯನ್ನು 3 ವರ್ಷಕ್ಕೆ ಇಳಿಸುವುದು ಅಥವಾ ಅರ್ಹತೆಗನುಗುಣವಾಗಿ ಭರ್ತಿ ಮಾಡಲು ನಿಯಮಾನುಸಾರ ಮಾರ್ಪಾಡು ಆದೇಶವನ್ನು ಹೊರಡಿಸಬೇಕೆಂದು ಪತ್ರದ ಮೂಲಕ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.