ETV Bharat / city

ಅಗತ್ಯವಿದ್ದರೆ ನಾನು ಮತ್ತು ಸಿಎಂ ಒಟ್ಟಿಗೆ ಪ್ರಚಾರ: ಬಿಎಸ್​ವೈ - ಹಾನಗಲ್ ಉಪಚುನಾವಣೆ

ಸಿಎಂ ಮತ್ತು ನಾನು ಪ್ರತ್ಯೇಕವಾಗಿ ಪ್ರಚಾರ ಮಾಡುವುದರಿಂದ ಲಾಭ ಆಗುತ್ತದೆ ಎಂದು ಮಾಜಿ ಸಿಎಂ ಬಿಎಸ್​ವೈ ಅಭಿಪ್ರಾಯಪಟ್ಟಿದ್ದಾರೆ.

former-cm-bsy-on-election-campaign
ಅಗತ್ಯವಿದ್ದರೆ ನಾನು ಮತ್ತು ಸಿಎಂ ಒಟ್ಟಿಗೆ ಪ್ರಚಾರ: ಬಿಎಸ್​ವೈ
author img

By

Published : Oct 19, 2021, 2:01 AM IST

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತವಾಗಿದ್ದು, ಎರಡೂ ಕ್ಷೇತ್ರಗಳಲ್ಲೂ ಎರಡೆರಡು ದಿನ ಪ್ರಚಾರ ನಡೆಸುತ್ತೇನೆ, ಪಕ್ಷ ಬಯಸಿದಲ್ಲಿ ಇನ್ನು ಹೆಚ್ಚು ದಿನ ಪ್ರಚಾರ ನಡೆಸಲು‌ ಸಿದ್ದನಿದ್ದೇನೆ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಕಾವೇರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರದಿಂದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ. ಎರಡೂ ಕಡೆ ಎರಡೆರಡು ದಿನ ಇರುತ್ತೇನೆ. ಅಗತ್ಯವಿದ್ದರೆ ಮತ್ತೆ ಒಂದೊಂದು ದಿನ ಹೋಗುತ್ತೇನೆ. ಒಟ್ಟಿನಲ್ಲಿ ಎರಡೂ ಕ್ಷೇತ್ರಗಳನ್ನು ನಾವು ಗೆಲ್ಲಬೇಕು. ನೂರಕ್ಕೆ ನೂರರಷ್ಟು ನಾವು ಎರಡೂ ಕ್ಷೇತ್ರ ಗೆಲ್ಲುತ್ತೇವೆ ಎಂದರು.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ

ಸಿಎಂ ಮತ್ತು ನಾನು ಪ್ರತ್ಯೇಕವಾಗಿ ಪ್ರಚಾರ ಮಾಡುವುದರಿಂದ ಲಾಭ ಆಗುತ್ತದೆ. ಅವರು ಹೆಚ್ಚು ಹಳ್ಳಿ ಕವರ್ ಮಾಡುತ್ತಾರೆ, ನಾನೂ ಹೆಚ್ಚು ಹಳ್ಳಿ ಕವರ್ ಮಾಡುತ್ತೇನೆ. ನಾವು ಒಟ್ಟಿಗೆ ಪ್ರಚಾರ ಮಾಡುವುದರಿಂದ ಹೆಚ್ಚು ಲಾಭ ಆಗುವುದಿಲ್ಲ. ಅಗತ್ಯ ಇದ್ದರೆ ಕೆಲವು ಕಡೆ ಒಟ್ಟಿಗೆ ಪ್ರಚಾರ ಮಾಡುತ್ತೇವೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಇದನ್ನೂ ಓದಿ: 20 ತಿಂಗಳ ಬಳಿಕ 1-5ನೇ ತರಗತಿಗೆ ಗ್ರೀನ್​ ಸಿಗ್ನಲ್​: ಅರ್ಧ ದಿನವಷ್ಟೇ ಶಾಲೆ, ಬಿಸಿಯೂಟ ಇಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.