ETV Bharat / city

ಸರಕಾರವನ್ನು ನಾಲಾಯಕ್‌ ಎಂದ ಎಂಇಎಸ್‌ ಪುಂಡರಿಗೆ ತಕ್ಕ ಶಾಸ್ತಿ ಮಾಡಿ: ಹೆಚ್​ಡಿಕೆ - HD kumaraswamy on Belagavi

ರಾಜಕೀಯವಾಗಿ ಮೂಲೆಗುಂಪಾಗಿರುವ ಎಂಇಎಸ್, ಅಸ್ತಿತ್ವಕ್ಕಾಗಿ ಬೆಳಗಾವಿಯಲ್ಲಿ ಗೊಂದಲ, ಗದ್ದಲ ಉಂಟು ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್​ಡಿಕೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

former-chief-minister-hdkumaraswamy-tweet-on-mes
ಸರಕಾರವನ್ನು ನಾಲಾಯಕ್‌ ಎಂದ ಎಂಇಎಸ್‌ ಪುಂಡರಿಗೆ ತಕ್ಕ ಶಾಸ್ತಿ ಮಾಡಿ: ಹೆಚ್​ಡಿಕೆ ಟ್ವೀಟ್​
author img

By

Published : Oct 27, 2021, 8:47 AM IST

ಬೆಂಗಳೂರು: ವಿನಾಕಾರಣ ಬೆಳಗಾವಿಯಲ್ಲಿ ಕನ್ನಡಿಗರನ್ನು ಕೆಣಕುತ್ತಾ ಕನ್ನಡಕ್ಕೆ ಅಪಮಾನ ಮಾಡುತ್ತಿರುವ ಎಂಇಎಸ್​ಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಕುಂದಾನಗರಿಯ ಪ್ರತಿಷ್ಠೆಗೆ ಧಕ್ಕೆ ತಂದು ಅಲ್ಲಿನ ಸೌಹಾರ್ದ ವಾತಾವರಣವನ್ನು ಹಾಳು ಮಾಡುತ್ತಿರುವ ಎಂಇಎಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನಾಡು ನುಡಿಯ ವಿಷಯದಲ್ಲಿ ರಾಜ್ಯ ಸರಕಾರ ಅಲಕ್ಷ್ಯ ಮಾಡಲೇಬಾರದು. ಕನ್ನಡವನ್ನು ಅಪಮಾನಿಸುವ ಈ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ನಾನು ಸರಕಾರವನ್ನು ಒತ್ತಾಯ ಮಾಡುತ್ತೇನೆ. 5/5#ಕನ್ನಡ

    — H D Kumaraswamy (@hd_kumaraswamy) October 27, 2021 " class="align-text-top noRightClick twitterSection" data=" ">

ಹೆಚ್​ಡಿಕೆ ಟ್ವೀಟ್​ನ ಪೂರ್ಣ ವಿವರ:

  • ರಾಜಕೀಯವಾಗಿ ಮುಖಭಂಗ ಅನುಭವಿಸಿರುವ ಎಂಇಎಸ್, ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಪುಂಡಾಟ ಆರಂಭಿಸಿದೆ.
  • ಕನ್ನಡಿಗರ ಅಸ್ಮಿತೆಯನ್ನು ಕೆಣಕಿ, ಕನ್ನಡಿಗರನ್ನು ಅಪಮಾನಿಸುವ ಕೆಲಸಕ್ಕೆ ಎಂಇಎಸ್ ಮುಂದಾಗಿದೆ.
  • ಬೆಳಗಾವಿಯಲ್ಲಿ ಕನ್ನಡಿಗರನ್ನು ಎಂಇಎಸ್ ವಿನಾಕಾರಣ ಕೆಣಕುತ್ತಿದೆ.
  • ಪ್ರತಿಭಟನೆಗಳ ವೇಳೆ ಕರ್ನಾಟಕ ಸರ್ಕಾರವನ್ನು ಎಂಇಎಸ್ ಪುಂಡರು ಗೇಲಿ ಮಾಡಿದ್ದಾರೆ.
  • ಅಲ್ಲಿನ ಸರ್ಕಾರಿ ಕಚೇರಿಗಳಲ್ಲಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲೇ ಕೊಡಬೇಕು ಎಂದು ಒತ್ತಾಯಿಸುವ ಭರದಲ್ಲಿ ಸರ್ಕಾರವನ್ನು ನಾಲಾಯಕ್ ಸರ್ಕಾರ ಎಂದು ಜರಿಯಲಾಗಿದೆ.
  • 'ಜೈ ಮಹಾರಾಷ್ಟ್ರ' ಎಂದು ಘೋಷಣೆ ಕೂಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಖಂಡನೀಯ.
  • ರಾಜಕೀಯವಾಗಿ ಮೂಲೆಗುಂಪಾಗಿರುವ ಎಂಇಎಸ್, ಅಸ್ತಿತ್ವಕ್ಕಾಗಿ ಬೆಳಗಾವಿಯಲ್ಲಿ ಗೊಂದಲ, ಗದ್ದಲ ಉಂಟು ಮಾಡುತ್ತಿದೆ.
  • ಭಾಷಾ ಭ್ರಾತೃತ್ವ, ಸ್ನೇಹಶೀಲತೆ ಹಾಗೂ ಶಾಂತಿ ಸಹನೆಗೆ ಹೆಸರಾಗಿರುವ ಕುಂದಾನಗರಿಯ ಪ್ರತಿಷ್ಠೆಯನ್ನು ಹಾಳು ಮಾಡುವ ದುರುದ್ದೇಶ ಎಂಇಎಸ್​ಗಿದೆ.
  • ನಾಡು ನುಡಿಯ ವಿಷಯದಲ್ಲಿ ರಾಜ್ಯ ಸರ್ಕಾರ ಅಲಕ್ಷ್ಯ ಮಾಡಲೇಬಾರದು.
  • ಕನ್ನಡವನ್ನು ಅಪಮಾನಿಸುವ ಎಂಇಎಸ್​​ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಇದನ್ನೂ ಓದಿ: ಹಬ್ಬಗಳ ವೇಳೆ ಸುಗಮ ಸಂಚಾರಕ್ಕೆ ಭಾರತೀಯ ರೈಲ್ವೆಯಿಂದ 110 ವಿಶೇಷ ರೈಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.