ಬೆಂಗಳೂರು : ಮದ್ಯದ ಅಮಲಿನಲ್ಲಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಪ್ರದೇಶಗಳಲ್ಲಿ ದಾಂಧಲೆ ನಡೆಸುತ್ತಿದ್ದ ವಿದೇಶಿ ಪ್ರಜೆಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಐವರಿಕೋಸ್ಟ್ ಪ್ರಜೆಯಾಗಿರುವ ಓಕಾವೋ ಲಿಯೋಸ್ ಎಂಬಾತ ಮದ್ಯ ಸೇವಿಸಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಹೆದರಿಸುತ್ತಿದ್ದ. ಠಾಣೆಯ ಮುಂಭಾಗದಲ್ಲೂ ತನ್ನ ಕರಾಮತ್ತು ತೋರಿಸಿದ್ದ. ವಶಕ್ಕೆ ಪಡೆಯಲು ಮುಂದಾದ ಪೊಲೀಸರಿಗೂ ಬೆದರಿಸಿದ್ದ.
ಇದನ್ನೂ ಓದಿ: 'ನಮ್ಮನ್ನು ರಕ್ಷಿಸಿ'....ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಅಳಲು!
ಈ ವೇಳೆ ಎಎಸ್ಐ ಮೇಲೆಯೂ ತನ್ನ ಕೈನಿಂದ ಹಲ್ಲೆ ಮಾಡಿದ್ದ. ಶರಣಾಗುವಂತೆ ಹೇಳಿದರೂ ಮಾರಕಾಸ್ತ್ರ ಬೀಸುತ್ತಾ ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾಗಿದ್ದ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತನ ಪುಂಡಾಟಿಕೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.