- ಮಂಗಳೂರು- ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ನಲ್ಲಿ ಸಂಚಾರ ನಿಷೇಧಿಸಲಾಗಿತ್ತು
- ಇದೀಗ ಭಾರಿ ಮಳೆಯಿಂದ ಮುಚ್ಚಲಾಗಿದ್ದ ಶಿರಾಡಿ ಘಾಟ್ ಸಂಚಾರ ಮುಕ್ತ
- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಟ್ವೀಟ್ ಮೂಲಕ ಪ್ರಕಟಣೆ
- ಮಂಗಳೂರು- ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ಇನ್ನೂ ಸಂಚಾರ ಮುಕ್ತವಾಗಿಲ್ಲ
- ಬದಲಿಗೆ ಸಂಪಾಜೆ ಘಾಟಿಯಲ್ಲಿ ಸಣ್ಣ ಪ್ರಮಾಣದ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ
ರಾಜ್ಯದಲ್ಲಿ ಪ್ರವಾಹದ ಅಬ್ಬರಕ್ಕೆ 48 ಬಲಿ, 12 ಮಂದಿ ನಾಪತ್ತೆ... - live news about karnakata floods
22:18 August 12
ಭಾರಿ ಮಳೆಯಿಂದ ಮುಚ್ಚಲಾಗಿದ್ದ ಶಿರಾಡಿ ಘಾಟ್ ಸಂಚಾರ ಮುಕ್ತ
22:10 August 12
ರಾಜ್ಯದಲ್ಲಿ ಪ್ರವಾಹದ ಅಬ್ಬರಕ್ಕೆ 48 ಬಲಿ, 12 ಮಂದಿ ನಾಪತ್ತೆ
- ರಾಜ್ಯದಲ್ಲಿ ಪ್ರವಾಹದ ಅಬ್ಬರ ತಗ್ಗಿದ್ದರೂ, ಅದರ ಪರಿಣಾಮ ಮಾತ್ರ ತಗ್ಗಿಲ್ಲ
- ಈ ವರೆಗೂ ಒಟ್ಟು 48 ಮಂದಿ ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ
- ಪುನರ್ ವಸತಿಗಾಗಿ ಅಂಗಲಾಚುತ್ತಿರುವ ನೆರೆ ಸಂತ್ರಸ್ತರು
- ರಾಜ್ಯದಲ್ಲಿ ಪ್ರವಾಹದಿಂದ ಅಂದಾಜು 4,21,514 ಹೆಕ್ಟೇರ್ ಪ್ರದೇಶ ಹಾನಿ
- ರಾಜ್ಯದ 86 ತಾಲೂಕಿನ 2694 ಹಳ್ಳಿಗಳು ಜಲಾವೃತ
- 5,81,892 ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ
- 1181 ಪರಿಹಾರ ಕೇಂದ್ರ ಆರಂಭ
- 3,32,629 ಜನರಿಗೆ ಆಶ್ರಯ
21:40 August 12
ಮಹಾಮಳೆಗೆ ನಲುಗಿದ ಕಾರವಾರ
- ಬೀದಿಗೆ ಬಿದ್ದ ಕಾರವಾರ ತಾಲುಕಿನ ಮಲ್ಲಾಪುರ ಪಂಚಾಯಿತಿ ವ್ಯಾಪ್ತಿಯ ಕೈಗಾ ಬಜಾರ್, ಕುರ್ನಿಪೇಟೆ, ಮಲ್ಲಾಪುರ ಜನರು
- ಆರೇಳು ದಿನಗಳ ಕಾಲ ನೀರಲ್ಲಿ ಮುಳುಗಿದ್ದ ಮನೆ-ಅಂಗಡಿಗಳು ನೆಲಸಮ
- ಕೆಸರು, ಕಸ-ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದ್ದು, ಮುಗುಬಿಟ್ಟು ತೆರಳಲಾಗದಷ್ಟು ಗಬ್ಬು ವಾಸನೆ
- ಮನೆ ನೋಡಿದ ಕುಟುಂಬಸ್ಥರಿಗೆ ಕಣ್ಣೀರು ಬಿಟ್ಟು ಬೇರೇನು ಉಳಿದಿಲ್ಲ
- ಕದ್ರಾ ಜಲಾಶಯದಿಂದ ಕಿ. ಮೀ ವ್ಯಾಪ್ತಿಯಲ್ಲಿರುವ ಎಲ್ಲ ಗ್ರಾಮಗಳಿಗೂ ಅತಿ ಹೆಚ್ಚು ಹಾನಿ
- ನಮ್ಮ ಬಳಿ ಉಟ್ಟ ಬಟ್ಟೆ ಬಿಟ್ಟು ಬೇರೇನೂ ಇಲ್ಲ
- ಸರ್ಕಾರವೇ ದಾರಿ ತೋರಬೇಕು ಎನ್ನುತ್ತಿರುವ ಸ್ಥಳೀಯರು
21:23 August 12
ಕೃಷ್ಣಾ ನದಿಯಲ್ಲಿ ಮುಂದುವರೆದ ಪ್ರವಾಹ: ಪ್ರವಾಹ ಬಾಧಿತ ಪ್ರದೇಶದ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ
- ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಏಳು ಗ್ರಾಮಗಳು ಪ್ರವಾಹಕ್ಕೆ ತತ್ತರ
- ಮುದ್ದೇಬಿಹಾಳ ತಾಲೂಕಿನ ಗಂಗೂರು, ಹಂಡರಗಲ್ಲ ನಾಗರಾಳ, ಮುದೂರ, ದೇವೂರು, ಕಮಲದಿನ್ನಿ, ಕುಂಚಗನೂರ ಗ್ರಾಮಗಳು ಬಾಧಿತ
- ನಿಡಗುಂದಿ ತಾಲೂಕಿನ ಹೊಳೆಯ ಮಸೂತಿ ಗ್ರಾಮ ಹಾಗೂ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದಲ್ಲಿ ಪ್ರವಾಹ
- ಮೂರು ತಾಲೂಕುಗಳ ಒಟ್ಟು 9 ಗ್ರಾಮಗಳಲ್ಲಿ ಸಂಕಷ್ಟಕ್ಕೆ ಈಡಾಗಿರುವ ಜನತೆ
- ಪ್ರವಾಹದ ಕಾರಣ 758 ಕುಟುಂಬಗಳ ಒಟ್ಟು 2,576 ಜನರು ಗಂಜಿ ಕೇಂದ್ರಗಳಿಗೆ ರವಾನೆ
- ಪ್ರವಾಹದಿಂದ ಅಪಾರ ಪ್ರಮಾಣದ ಜಮೀನಿಗೆ ಹಾನಿ
- ಮನೆಗಳ ಮತ್ತು ಜಮೀನುಗಳ ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿರುವ ಡಿಸಿ ವೈ ಎಸ್ ಪಾಟೀಲ್
ರಜೆ ಘೋಷಣೆ:
- ಪ್ರವಾಹ ಬಾಧಿತ ಪ್ರದೇಶದ ವ್ಯಾಪ್ತಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ
- ಕೆಲವು ಶಾಲೆಗಳು ಗಂಜಿ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಅಂಥ ಶಾಲೆಗಳಿಗೂ ರಜೆ ಘೋಷಣೆ
- ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ
21:16 August 12
ಪುತ್ತೂರಲ್ಲಿ ಗುಡ್ಡ ಬಿರುಕು ಬಿಟ್ಟ ಪ್ರದೇಶಕ್ಕೆ ಸಹಾಯಕ ಆಯುಕ್ತ ಭೇಟಿ: ಕುಟುಂಬಗಳ ತೆರವು
- ಮಂಗಳೂರಿನ ಪುತ್ತೂರು ತಾಲೂಕಿನ ತೆಂಕಿಲ ದರ್ಖಾಸು ಎಂಬಲ್ಲಿ ಗುಡ್ಡ ಬಿರುಕು ಬಿಟ್ಟಿತ್ತು
- ಭೇಟಿ ನೀಡಿ ಸಮೀಪದ 11 ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಿದ ಸಹಾಯಕ ಆಯುಕ್ತ
- ಓರ್ವ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ
- 11 ಕುಟುಂಬಗಳಲ್ಲಿ 5 ಕುಟುಂಬಗಳು ತಮ್ಮ ಸಂಬಂಧಿಕರ ಮನೆಗೆ ತೆರಳಿದರು
- ಉಳಿದ ಆರು ಕುಟುಂಬಗಳಿಗೆ ನಗರ ಸಹ ಸಮುದಾಯ ಭವನದಲ್ಲಿ ಆಶ್ರಯ
- ಗುಡ್ಡ ಬಿರುಕು ಬಿಟ್ಟ ಸ್ಥಳಕ್ಕೆ ಯಾರಿಗೂ ಅವಕಾಶ ನೀಡದಂತೆ ಅಲ್ಲಿ ಬ್ಯಾರಿಕೇಡ್ ಹಾಕಲು ವ್ಯವಸ್ಥೆ
20:34 August 12
ದಕ್ಷಿಣದ ಜೈನಕಾಶಿಯಿಂದ ಹರಿದು ಬಂತು ನೆರೆ ಸಂತ್ರಸ್ತರಿಗೆ ಪರಿಹಾರ: ಹಾಸನ ಡಿಸಿಗೆ ಹಸ್ತಾಂತರ
- ಶ್ರವಣಬೆಳಗೊಳದ ಜೈನ ಮಠದ ವತಿಯಿಂದ ಪರಿಹಾರ ಘಟಕ ಸ್ಥಾಪಿಸಿದ್ದ ಜಿಲ್ಲಾಧಿಕಾರಿ
- ದಿನಬಳಕೆ ವಸ್ತು, ಆಹಾರ ಪದಾರ್ಥಗಳನ್ನು ಹಾಸನ ಡಿಸಿಗೆ ಹಸ್ತಾಂತರ ಮಾಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
- ಮಠದ ವತಿಯಿಂದ ನೆರೆ ಪೀಡಿತರ ಆರೋಗ್ಯದ ದೃಷ್ಟಿಯಿಂದ 25 ಲಕ್ಷ ರೂ. ನೆರವು
- ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ.
- ನಾವು ಇಂತಹದ್ದೊಂದು ಪ್ರವಾಹ ಎದುರಾಗುತ್ತದೆ ಅಂತ ಊಹಿಸಿರಲಿಲ್ಲ
- ನೆರೆಯಿಂದ ಬೀದಿಗೆ ಬಂದಿರುವ ಜನರ ಬದುಕನ್ನು ಮತ್ತೆ ಸ್ಥಾಪಿಸಬೇಕಿದೆ
- ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುವುದಾಗಿ ತಿಳಿಸಿದ ಸ್ವಾಮೀಜಿ
20:06 August 12
ಪ್ರವಾಹ ಕಾರ್ಯದಲ್ಲಿ ಕರ್ತವ್ಯ ಲೋಪ: ಇಬ್ಬರು ಅಧಿಕಾರಿಗಳ ಅಮಾನತು
- ಪ್ರವಾಹ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ್ದಕ್ಕೆ ಇಬ್ಬರು ಅಧಿಕಾರಿಗಳ ಅಮಾನತು
- ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಮಣ್ಣೂರ ಗ್ರಾಮ ಪಂಚಾಯತಿ ಪಿಡಿಓ, ಕಾರ್ಯದರ್ಶಿ ಅಮಾನತು
- ಪಿಡಿಓ ಬಿ ಎಸ್ ತೊಟಗಂಟಿ, ಕಾರ್ಯದರ್ಶಿ ಎಂ ಆರ್ ತಿಮ್ಮಗೌಡರ ಸಸ್ಪೆಂಡ್
- ಅಮಾನತು ಮಾಡಿ ಜಿಲ್ಲಾ ಪಂಚಾಯತ ಸಿಇಒ ಮಂಜುನಾಥ್ ಆದೇಶ
20:03 August 12
8 ವರ್ಷಗಳ ಬಳಿಕ ತುಂಬಿದ ವಾಟೆಹೊಳೆ ಡ್ಯಾಂ
- ಕಳೆದ ಒಂದು ವಾರದಿಂದ ಸುರಿದ ಮಳೆಗೆ ಹಾಸನದ ಎಲ್ಲ ಜಲಾಶಯಗಳು ಭರ್ತಿ
- 8 ವರ್ಷಗಳ ಬಳಿಕ ತುಂಬಿದ ವಾಟೆಹೊಳೆ ಡ್ಯಾಂ
- ಜಲಾಶಯದಿಂದ 1500 ಕ್ಯೂಸೆಕ್ಸ್ ನೀರು ನದಿಗೆ
- ಕ್ರೆಸ್ಟ್ ಗೇಟ್ಗಳ ಮೂಲಕ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ
- ನಿನ್ನೆಯಿಂದ ಒಳಹರಿವಿನ ಪ್ರಮಾಣ ಇಳಿಮುಖವಾದ್ದರಿಂದ ಇಂದು ಹೇಮಾವತಿ ಜಲಾಶಯದ ಎಲ್ಲಾ ಕ್ರೆಸ್ಟ್ ಗೇಟ್ಗಳನ್ನು ಮುಚ್ಚಲಾಗಿದೆ
- ಬಕ್ರೀದ್ ಹಬ್ಬದ ಪ್ರಯುಕ್ತ ಹೇಮಾವತಿ ಜಲಾಶಯದ ನೀರು ನೋಡಲು ಬಂದ ಪ್ರವಾಸಿಗರು
- ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್ಗಳನ್ನು ಮುಚ್ಚಿದ್ದರಿಂದ ಬೇಸರದಿಂದ ವಾಪಸ್ಸಾದ ಪ್ರವಾಸಿಗರು
19:36 August 12
ಆಲಮಟ್ಟಿ ಜಲಾಶಯದ ನೀರಿನ ವಿವರ
- ಹೊರಹರಿವು- 5,70,000 ಕ್ಯೂಸೆಕ್
- ಒಳಹರಿವು- 6,11,759 ಕ್ಯೂಸೆಕ್
- ಪ್ರಸ್ತುತ ಸಂಗ್ರಹ ಮಟ್ಟ- 103.315 ಟಿಎಂಸಿ
- ಅಣೆಕಟ್ಟಿನ ಗರಿಷ್ಠ ಮಟ್ಟ- 123 ಟಿಎಂಸಿ
19:25 August 12
ಸಿದ್ದಾಪುರದಲ್ಲಿ ಬಾಯ್ತೆರೆದ 4 ರಿಂದ 5 ಎಕರೆ ಭೂಮಿ
- ಉತ್ತರ ಕನ್ನಡದಲ್ಲಿ ಮಳೆ ಸೃಷ್ಟಿಸಿದ ಅವಾಂತರ
- ಮಳೆಗೆ ಕುಸಿದು ನಿಂತ ಸುಮಾರು 4 ರಿಂದ 5 ಎಕರೆ ಭೂಮಿ
- ಸಿದ್ದಾಪುರದ ಭಾನ್ಕುಳಿ ಸಮೀಪ ಘಟನೆ
- ದೊಡ್ಡದಾಗಿ ಶಬ್ದ ಬಂದು ಭೂಮಿ ನಿಧಾನವಾಗಿ ಕೆಳಗಡೆ ಇಳಿದಿದೆ
- ಇದರಿಂದಾಗಿ ಒಂದು ಮನೆ ಕೂಡ ಅಪಾಯದ ಅಂಚಿನಲ್ಲಿದೆ
- 1982 ರಲ್ಲಿ ಒಂದು ಸಲ ಭೂಕಂಪವಾದಾಗ ಸ್ವಲ್ಪ ತೊಂದರೆಯಾಗಿತ್ತು
- ಆದರೆ ಇಲ್ಲಿವರೆಗೆ ಇಷ್ಟೊಂದು ಭೂಮಿ ಕುಸಿದಿರೋದನ್ನ ನಾವು ನೋಡಿಲ್ಲ ಎನ್ನುತ್ತಾರೆ ಸ್ಥಳೀಯರು
19:15 August 12
ಬೆಳಗಾವಿ: ನೆರೆ ಸಂತ್ರಸ್ತರಿಗೆ ದೇವಸ್ಥಾನಗಳಿಂದ 22 ಸಾವಿರ ಸೀರೆ ವಿತರಣೆ
- ಸವದತ್ತಿಯ ರೇಣುಕಾ ಎಲ್ಲಮ್ಮ ದೇವಸ್ಥಾನ ಸೇರಿದಂತೆ ರಾಜ್ಯದ ವಿವಿಧ ದೇವಸ್ಥಾನಗಳು ಜಿಲ್ಲೆಯ ಪ್ರವಾಹಬಾಧಿತ ಸಂತ್ರಸ್ತರಿಗೆ 22 ಸಾವಿರ ಸೀರೆಗಳನ್ನು ಕಳುಹಿಸಿವೆ
- ರೇಣುಕಾ ಎಲ್ಲಮ್ಮ ದೇವಸ್ಥಾನದಿಂದ 5 ಸಾವಿರ ಮತ್ತು ಗುಲ್ಬರ್ಗದ ಘತ್ತರಗಿ ಭಾಗ್ಯವಂತಿ ದೇವಸ್ಥಾನದಿಂದ ಒಂದು ಸಾವಿರ ಸೀರೆಗಳು
- ಸೀರೆಗಳನ್ನು ಸ್ವೀಕರಿಸಿದ ಬೆಳಗಾವಿ ಜಿಲ್ಲಾಡಳಿತ
- ಪರಿಹಾರ ಸಾಮಗ್ರಿಗಳ ಸಂಗ್ರಹಣಾ ಕೇಂದ್ರಕ್ಕೆ ಒಪ್ಪಿಸಿದ ಡಿಸಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಹಾಗೂ ಇತರರು
- ಬೆಂಗಳೂರು, ಮೈಸೂರು, ರಾಮನಗರ, ಹಾಸನ, ಚಿತ್ರದುರ್ಗ, ಕೋಲಾರ ಮತ್ತು ಮಂಡ್ಯ ಜಿಲ್ಲೆಯ ದೇವಸ್ಥಾನಗಳಿಂದ 8978 ಸೀರೆಗಳು
- ಉಡುಪಿ ಹಾಗೂ ಮಂಗಳೂರಿನಿಂದ 3500, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಿಂದ 3500 ಸೀರೆಗಳು
19:03 August 12
ಕೊಡಗು: ಪ್ರವಾಹ, ಭೂ ಕುಸಿತಕ್ಕೆ ಸಿಲುಕಿ ಸತ್ತವರ ಸಂಖ್ಯೆ 9ಕ್ಕೆ ಏರಿಕೆ
- ಕೊಡಗಿನ ಪ್ರವಾಹ ಭೂ ಕುಸಿತಕ್ಕೆ ಸಿಲುಕಿ ಸತ್ತವರ ಸಂಖ್ಯೆ 9ಕ್ಕೆ ಏರಿಕೆ
- ಮಡಿಕೇರಿ ತಾಲೂಕಿನ ಕಟ್ಟೆಮಾಡು ಪರಂಬು ಗ್ರಾಮದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
- ಕಟ್ಟೆಮಾಡು ಪರಂಬು ಗ್ರಾಮದ ಕುಂಞಣ್ಣ (68) ಮೃತ ದುರ್ದೈವಿ
- ಮುಳುಗಡೆಯಾಗಿದ್ದ ಮನೆಯೊಳಗೆ ಪತ್ತೆಯಾದ ಮೃತದೇಹ
- ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರ ಭೇಟಿ, ಪರಿಶೀಲನೆ
- ಕೊಡಗಿನ ಕೋರಂಗಾಲದಲ್ಲಿ 5 ಜನ, ತೋರದಲ್ಲಿ 3, ಕಟ್ಟೆಮಾಡು ಪರಂಬು ಒಂದು ಸಾವು
- ಕೋರಂಗಾಲದಲ್ಲಿ ಕಣ್ಮರೆಯಾದ 7 ಮಂದಿಗಾಗಿ ಮುಂದುವರಿದ ಹುಡುಕಾಟ
18:25 August 12
ಉತ್ತರ ಕನ್ನಡ: ಚಿಗಳ್ಳಿ ಚೆಕ್ ಡ್ಯಾಮ್ ಒಡೆದು ನೀರು ವ್ಯರ್ಥ, ಕೃಷಿ ಭೂಮಿ ಹಾಳು
- ಮುಂಡಗೋಡಿನ ಚಿಗಳ್ಳಿಯಲ್ಲಿರುವ ಚೆಕ್ ಡ್ಯಾಮ್ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥ, ಕೃಷಿ ಭೂಮಿ ಹಾಳು
- ಡ್ಯಾಮ್ ಒಡೆದು ನೀರು ನುಗ್ಗಿದ ಪರಿಣಾಮ 5 ಸಾವಿರ ಎಕರೆ ಕೃಷಿ ಭೂಮಿಗೆ ಹಾನಿಯಾಗುವ ಆತಂಕ
- ಈಗಾಗಲೇ ಅಡಿಕೆ ತೋಟ, ಮುಸುಕಿನ ಜೋಳ, ಶುಂಠಿ, ಭತ್ತ ಸೇರಿದಂತೆ ಅಪಾರ ಪ್ರಮಾಣದ ಬೆಳೆಗೆ ಹಾನಿ
- ಸ್ಥಳಕ್ಕೆ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಭೇಟಿ, ಪರಿಶೀಲನೆ
- ಹಾನಿಯ ಕುರಿತು ಸಮಗ್ರ ಮಾಹಿತಿ ಪಡೆದು ಪರಿಹಾರ ನೀಡುವುದಾಗಿ ಹೇಳಿಕೆ
- ಈಗ ಡ್ಯಾಂ ಒಡೆದು ನೀರು ನುಗ್ಗಿ ಬೆಳೆ ಹಾಳಾಗಿದ್ದಲ್ಲದೇ ಬೇಸಿಗೆಯಲ್ಲಿ ನೀರಿಲ್ಲದೇ ಪರದಾಡಬೇಕು ಎಂಬುದು ರೈತರ ಆತಂಕ
18:05 August 12
ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಕೆಶಿ ಭೇಟಿ
- ಪ್ರವಾಹಕ್ಕೆ ಕೊಚ್ಚಿ ಹೋದ ಬೆಳಗಾವಿ ಜಿಲ್ಲೆಯ ಹಲವು ಪ್ರದೇಶಗಳಿಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಭೇಟಿ
- ಬೈಲಹೊಂಗಲ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ
- ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ಪರಿಹಾರ ಕೇಂದ್ರಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿದ ಡಿಕೆಶಿ
- ಮೋದಗಾ ಮತ್ತು ಸಾಂಬ್ರಾಕ್ಕೆ ಹೋಗಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಣೆ
- ಡಿಕೆಶಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಾಥ್
17:55 August 12
ಹಾಸನ: ನೆರೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಹೇಮಾವತಿ ಹಿನ್ನೀರಿನಲ್ಲಿ ಪತ್ತೆ
- ಹಾಸನ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದರೆ, ಮತ್ತೋರ್ವ ವ್ಯಕ್ತಿ ಕಾಣೆಯಾಗಿರುವ ಪ್ರಕರಣ ದಾಖಲು
- ಸಕಲೇಶಪುರ ತಾಲೂಕಿನ ಹಾನುಬಾಳ್ ಹೋಬಳಿಯ ಕೊರಡಿ ಗ್ರಾಮದ ಪ್ರಕಾಶ್ ಮೃತ ದುರ್ದೈವಿ
- ಆ.8ರಂದು ಗದ್ದೆಯನ್ನು ನೋಡಲು ಹೋಗಿ ಸಮೀಪವಿದ್ದ ಚಿಕ್ಕಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿ
- ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು
- ತೆಪ್ಪದ ಮೂಲಕ ಹುಡುಕಾಟ ನಡೆಸಿದ ವಿಪತ್ತು ನಿರ್ವಹಣಾ ತಂಡ
- ರಕ್ಷಣಾ ಕಾರ್ಯಾಚರಣೆ ವೇಳೆ ಇಂದು ಬೆಳಗ್ಗೆ ಹೇಮಾವತಿ ಹಿನ್ನೀರಿನಲ್ಲಿ ಮೃತದೇಹ ಪತ್ತೆ
- ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನೆ
- ಇನ್ನು ಮರಗಡಿ ಗ್ರಾಮದ ರೈತ ರಮೇಶ್ ಕಾಣೆಯಾದ ವ್ಯಕ್ತಿ
- ಆ.8 ರಂದು ಹಾಲು ಕೊಟ್ಟು ಬರಲು ರೆಸಾರ್ಟ್‌ಗೆ ಹೋದವರು ಮರಳಿ ಬಂದಿಲ್ಲ
- ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ
- ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
17:19 August 12
ಚಿಕ್ಕಮಗಳೂರು: ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಮನೆಯ ಮೇಲ್ಛಾವಣಿ
- ಚಿಕ್ಕಮಗಳೂರಲ್ಲಿ ಮಳೆ ಕಡಿಮೆಯಾದರೂ ನಿಲ್ಲದ ಅನಾಹುತಗಳು
- ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಮನೆಯ ಮೇಲ್ಛಾವಣಿ
- ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಘಟನೆ
- ದೃಶ್ಯ ನೋಡಿ ಬೆಚ್ಚಿಬಿದ್ದ ಸ್ಥಳೀಯರು
- ಈಗಾಗಲೇ ಮಹಾಮಳೆಗೆ ಬಾಳೆಹೊನ್ನೂರಿನಲ್ಲಿ 112 ಮನೆಗಳು, ಮಾಗುಂಡಿ ಗ್ರಾಮದಲ್ಲಿ 53 ಮನೆಗಳು, ಕಳಸ ಹೋಬಳಿಯಲ್ಲಿ 123 ಮನೆಗಳು ಹಾಳು
17:10 August 12
ಪ್ರವಾಹ ಸಂತ್ರಸ್ತರಿಗೆ 15 ಸಾವಿರ ರೊಟ್ಟಿ, 3 ಸಾವಿರ ಚಪಾತಿ ನೀಡಲು ಹೊರಟ ಗ್ರಾಮಸ್ಥರು
- ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ 15 ಸಾವಿರ ರೊಟ್ಟಿ, 3 ಸಾವಿರ ಚಪಾತಿ ತಲುಪಿಸಲು ಹೊರಟ ಗ್ರಾಮಸ್ಥರು
- ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂದಗಲ್ಲು ಗ್ರಾಮಸ್ಥರು
- 3 ದಿನಗಳ ಕಾಲ ರೊಟ್ಟಿ- ಚಪಾತಿ ತಯಾರಿಕೆ
- ಜೊತೆಗೆ ಶೆಂಗಾ ಪುಡಿ, ಚಾಪೆ, ರಗ್ಗು, ಬೆಡ್ ಶಿಟ್ಗಳ ಸಂಗ್ರಹ
- ಬಸ್ ಮುಖಾಂತರ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿದ ಆನಂದಪ್ಪ ಎಂಬವರ ನೇತೃತ್ವ ತಂಡ
16:50 August 12
ಕೊಳ್ಳೇಗಾಲದಲ್ಲಿ ಪ್ರವಾಹ: ಕಳೆದ ನೆರೆ ಪರಿಹಾರವೂ ಸಿಕ್ಕಿಲ್ಲ, ಅಹವಾಲು ಕೇಳಲು ಸಂಸದರೂ ಬಂದಿಲ್ಲ
- ಮತ್ತೆ ಪ್ರವಾಹಕ್ಕೆ ಸಿಲುಕಿ ಒದ್ದಾಡುತ್ತಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗ್ರಾಮಗಳು
- ಕಳೆದ ಬಾರಿ ಪ್ರವಾಹದಲ್ಲಿ ತತ್ತರಿಸಿ ಪರಿಹಾರದ ಮುಖ ನೋಡುತ್ತಿದ್ದ ಗ್ರಾಮಗಳು
- ಈಗ ಪರಿಹಾರಕ್ಕೂ ಮೊದಲೇ ಮತ್ತೊಂದು ಪ್ರವಾಹ
- ಪರಿಹಾರ ಸಿಗುವ ಮೊದಲೇ ಈ ಬಾರಿಯ ಕಬ್ಬು, ಜೋಳ, ಭತ್ತ, ಈರುಳ್ಳಿ ಕಾವೇರಿ ನೀರು ಪಾಲು
- ಪ್ರವಾಹಕ್ಕೀಡಾಗಿ 4-5 ದಿನಗಳಾದರೂ ಜಿಲ್ಲೆಯತ್ತ ಎಂಪಿ ಸುಳಿಯದಿರುವುದಕ್ಕೆ ಆಕ್ರೋಶ
- ಕೊಳ್ಳೇಗಾಲದ ದಾಸನಪುರ, ಹಳೇ ಅಣಗಳ್ಳಿ, ಹರಳೆ ಗ್ರಾಮಗಳು ಸಂಪೂರ್ಣ ಜಲಾವೃತ
- ಹಂಪಾಪುರದಲ್ಲಿ 800 ಕ್ಕೂ ಹೆಚ್ಚು ಮಂದಿಯನ್ನು 4 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ
16:33 August 12
ಸಂತ್ರಸ್ತರಿಗೆ ಪರಿಹಾರ ನೀಡಲು ಕಾನೂನು ಅಡ್ಡಿ ಮಾಡಬೇಡಿ: ಅಧಿಕಾರಿಗಳಿಗೆ ಸಿಎಂ ಸೂಚನೆ
- ಭಾರಿ ಮಳೆ ಮತ್ತು ನೆರೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡಲು ಕಾನೂನು ತೊಡಕು ಮಾಡಬೇಡಿ, ರಜೆ ತೆಗೆದುಕೊಳ್ಳಬೇಡಿ
- ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಹಾನಿ ವೀಕ್ಷಣೆ ಬಳಿಕ ಸಿಎಂ ಹೇಳಿಕೆ
- ಧರ್ಮಸ್ಥಳದಲ್ಲಿ ಅಧಿಕಾರಿಗಳು, ಶಾಸಕರು ಮತ್ತು ಸಂಸದರೊಂದಿಗೆ ನಡೆದ ಸಭೆಯಲ್ಲಿ ಸೂಚನೆ
- ಮನೆ ಕಳೆದುಕೊಂಡವರಿಗೆ 5 ಲಕ್ಷ, ಭಾಗಶಃ ಮನೆ ಕಳೆದುಕೊಂಡವರಿಗೆ1 ಲಕ್ಷ,
- ಮನೆ ಕಟ್ಟುವ ವರೆಗೂ ಏಳೆಂಟು ತಿಂಗಳ ತನಕ ಪ್ರತಿ ತಿಂಗಳಿಗೆ 5 ಸಾವಿರ ಬಾಡಿಗೆ
- ತಕ್ಷಣದ 10 ಸಾವಿರ ರೂ. ಪರಿಹಾರ ಇವತ್ತೇ ನೀಡುವಂತೆ ಸಿಎಂ ಘೋಷಣೆ
- ನೆರೆ ಹಾನಿಯ ಸಮಸ್ಯೆ ಬಗೆಹರಿಯುವ ತನಕ ರಜೆ ತೆಗೆದುಕೊಳ್ಳಬೇಡಿ ಎಂದು ಅಧಿಕಾರಿಗಳಲ್ಲಿ ಸಿಎಂ ಮನವಿ
- ನೆರೆಯ ಬಳಿಕ ಬರುವ ಸಾಂಕ್ರಾಮಿಕ ರೋಗ ತಡೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ
16:16 August 12
ಜಾನುವಾರುಗಳಿಗೆ ಮೇವು ಕಳುಹಿಸಿದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್
- ಜಾನುವಾರುಗಳಿಗೆ ಇಂದು ಲಾರಿ ಮೂಲಕ ಮೇವು ತುಂಬಿಸಿ ಕಳಿಸಿದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್
- ಉತ್ತರ ಕರ್ನಾಟಕಕ್ಕೆ ಮೇವು ತುಂಬಿಸಿ ಕಳಿಸಿದ ತಾಯಿ-ಮಗ
- ಬೆಂಗಳೂರಿನ ಹೊರವೊಲಯದ ಸೂಲದೇವನ ಹಳ್ಳಿ ಬಳಿಯಿರುವ ಅವರ ಫಾರ್ಮ್ ಹೌಸ್ನಿಂದ ಹೋದ ಮೇವು ತುಂಬಿದ ವಾಹನ
- ಹಲವು ರೈತರು ತಮ್ಮ ಜಾನುವಾರುಗಳಿಗೆ ಮೇವು ನೀಡಿ ಎಂದು ಅಂಗಲಾಚಿದ್ದರು
- ರೈತರ ಮನವಿಗೆ ಸ್ಪಂದಿಸಿರುವ ಲೀಲಾವತಿ ಜಾನುವಾರುಗಳಿಗೆ ಒಂದು ಲೋಡ್ ಮೇವು ಕಳಿಸಿದ್ದಾರೆ
16:07 August 12
ಕೊಪ್ಪಳ: ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ಸಿಬ್ಬಂದಿಗಳು ಸೇಫ್
- ಪ್ರಾಣಾಪಾಯದಿಂದ ಪಾರಾದ ರಕ್ಷಣಾ ಸಿಬ್ಬಂದಿಗಳು
- ರಕ್ಷಣಾ ಕಾರ್ಯದ ವೇಳೆ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ಸಿಬ್ಬಂದಿಗಳು
- ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿ ಎದುರಿಸುತ್ತಿದ್ದ ನೂರಾರು ಜನರ ರಕ್ಷಣೆ ಸಂದರ್ಭದಲ್ಲಿ ನಡೆದಿದ್ದ ಘಟನೆ
- ಓರ್ವ ಎನ್‌ಡಿಆರ್‌ಎಫ್, ಓರ್ವ ಅಗ್ನಿಶಾಮಕ ಹಾಗೂ ಮೂರು ಜನ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರು
- ಡಿಸಿ ಪಿ. ಸುನೀಲ್ ಕುಮಾರ್ ಹಾಗೂ ಎಸ್ಪಿ ರೇಣುಕಾ ಸುಕುಮಾರ್ ಸ್ಪಷ್ಟನೆ
15:46 August 12
ಬೆಳಗಾವಿಯಲ್ಲಿ ರಕ್ಷಣಾ ಕಾರ್ಯ ಪೂರ್ಣ: ಮೇವು ಬ್ಯಾಂಕ್ ಸ್ಥಾಪನೆಗೆ ನಿರ್ದೇಶನ
- ಪ್ರವಾಹ ಬಾಧಿತ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ರಕ್ಷಣಾ ಕಾರ್ಯ ಪೂರ್ಣ- ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ
- ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿರುವ ಚಿಕ್ಕೋಡಿ ತಾಲೂಕಿನ ನಾಲ್ಕು ಗ್ರಾಮಗಳ ಜನರು
- ಅವರಿಗೆ ಆಹಾರ ಪದಾರ್ಥ, ನೀರು ಪೂರೈಸಲಾಗುತ್ತಿದೆ
- 300ಕ್ಕೂ ಅಧಿಕ ಗ್ರಾಮಗಳ ಸ್ಥಳಾಂತರ, 400 ಕ್ಕೂ ಅಧಿಕ ಪರಿಹಾರ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ
- ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ- ಡಿಸಿ ಹೇಳಿಕೆ
- ಮೃತರ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಲು ತಹಶೀಲ್ದಾರ್ಗೆ ಸೂಚನೆ
- ಮೃತರ ಮೂರು ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ಚೆಕ್ ನೀಡಲಾಗಿದೆ ಎಂದು ತಿಳಿಸಿದ ತಹಶೀಲ್ದಾರ್
- ಮೇವು ಬ್ಯಾಂಕ್ ಸ್ಥಾಪಿಸಲು ಸೂಚನೆ
- ಜಾನುವಾರುಗಳಿಗೆ ಅಗತ್ಯವಿರುವ ಮೇವು ಖರೀದಿಸಬೇಕು
- ಜಾನುವಾರುಗಳಿಗೆ ಉಚಿತ ಮೇವು ಒದಗಿಸಬೇಕು ಎಂದು ಸೂಚನೆ
15:16 August 12
- ಹಾಸನದಲ್ಲಿ ಪ್ರವಾಹ ತಗ್ಗಿದ್ದು, ವಸ್ತುಗಳನ್ನು ಕಳೆದುಕೊಂಡ ಜನರು ಕಂಗಾಲಾಗಿದ್ದಾರೆ.ತಮ್ಮ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡಿರುವ ನಿರಾಶ್ರಿತರು ಮುಂದಿನ ಜೀವನ ಹೇಗೆ ಎಂದು ಯೋಚನೆ ಮಾಡುತ್ತಿದ್ದಾರೆ.
- ಬೆಳಗಾವಿಯ ಗ್ರಾಮವೊಂದಕ್ಕೆ ಸಂಸದ ಅನಂತ್ಕುಮಾರ್ ಹೆಗಡೆ ಪರಿಶೀಲನೆ ನಡೆಸಲು ಹೋದಾಗ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.
13:23 August 12
- ಕೊಪ್ಪಳದಲ್ಲಿ ರಕ್ಷಣಾ ದೋಣಿ ಮಗುಚಿ ನೀರುಪಾಲಾಗಿದ್ದ ಐವರು ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ. ಕೊನೆಗೂ ಎಲ್ಲರ ಮನಸ್ಸಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ.
13:15 August 12
- ಕೊಪ್ಪಳದ ವಿರುಪಾಪುರ ಗಡ್ಡೆಯಲ್ಲಿ ನೀರುಪಾಲಾದ ಮೂವರನ್ನು ರಕ್ಷಣೆ ಮಾಡಲಾಗಿದ್ದು, ಇನ್ನಿಬ್ಬರು ಸಿಬ್ಬಂದಿಗಳ ಹುಟುಕಾಟ ಭರದಿಂದ ಸಾಗಿದೆ.
12:49 August 12
ಹೆಲಿಕಾಪ್ಟರ್ ಮುಖಾಂತರ ಸಿಬ್ಬಂದಿಗಳ ರಕ್ಷಣಾ ಕಾರ್ಯ: ಮೂವರ ರಕ್ಷಣೆ, ಇನ್ನಿಬ್ಬರಿಗೆ ಶೋಧ
- ಕೊಪ್ಪಳದಲ್ಲಿ ನೀರುಪಾಲಾದ ಐವರು ರಕ್ಷಣಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಲು ಘಟನಾ ಸ್ಥಳಕ್ಕೆ 2 ಹೆಲಿಕಾಪ್ಟರ್ ತರಲಾಗಿದೆ. ನೀರಿನ ಸೆಳೆತಕ್ಕೆ ಸಿಲುಕಿರುವ ಅವರನ್ನು ಶೀಘ್ರವೇ ರಕ್ಷಿಸಲು ಹೆಲಿಕಾಪ್ಟರ್ ಮುಖಾಂತರ ರಕ್ಷಣಾ ಕಾರ್ಯ ಮುಂದುವರಿದೆ.
12:25 August 12
- ರಾಯಚೂರಿನ ಬಸವಸಾಗರ ಜಲಾಶಯದಿಂದ 6 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ಡೊಂಗರಾಂಪುರ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕೊಚ್ಚಿಕೊಂಡು ಹೋಗಿದೆ.
12:20 August 12
- ಕಲಬುರಗಿ ಜಿಲ್ಲೆಯ ಭಿಮಾನದಿ ಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದ ಬಸಣ್ಣಾ ದೊಡ್ಡಮನಿ ಎಂಬುವರ ಮೃತ ದೇಹ ಪತ್ತೆಯಾಗಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
- ನಿನ್ನೆ ಆಕಳಿಗೆ ನೀರು ಕುಡಿಸಲು ಹೋಗಿ ಪ್ರವಾಹಕ್ಕೆ ಸಿಲುಕಿದ್ದರು.
12:14 August 12
- ಶಿವಮೊಗ್ಗಕ್ಕೆ ಕೆ ಎಸ್ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾನಿಗೊಳಗಾದ ಮನೆಗಳ ಬಳಿ ತೆರಳಿ ಜನರ ಅಹವಾಲು ಸ್ವೀಕರಿಸುತ್ತಿದ್ದಾರೆ.
- ಇಲ್ಲಿನ ಕೆಲ ಭಾಗದಲ್ಲಿ ಮಳೆಯ ಆರ್ಭಟ ತಗ್ಗಿದ್ದು, ನಿರಾಶ್ರಿತ ಕೇಂದ್ರದಲ್ಲಿದ್ದ ಜನರು ಮರಳಿ ತಮ್ಮ ಮನೆ ಸೇರುತ್ತಿದ್ದಾರೆ. ಮನೆಯಲ್ಲಿ ತುಂಬಿದ ನೀರಿನಿಂದ ಹಾನಿಗೊಳಗಾದ ವಸ್ತುಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದು ರಾಜಕಾರಣ ಮಾಡೋ ಟೈಮ್ ಅಲ್ಲ.. ಮಾಜಿ ಸಿಎಂಗಳಾದ ಸಿದ್ದು, ಹೆಚ್‌ಡಿಕೆ ವಿರುದ್ಧ ಈಶ್ವರಪ್ಪ ಕಿಡಿ..
12:04 August 12
- ಉತ್ತರ ಕನ್ನಡ ಜಿಲ್ಲೆಯ ಚಿಗಳ್ಳಿ ಜಲಾಶಯ ಹೊಡೆದಿದೆ. ಈ ಹಿನ್ನೆಲೆ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಇನ್ನು ಸಮೀಪದ ರಸ್ತೆಗಳು ಜಲಾವೃತಗೊಂಡಿವೆ.
-
ಹಾಸನ: ಕಳೆದ ಐದಾರು ವರ್ಷಗಳಲ್ಲಿ ಇದು ದೊಡ್ಡಮಟ್ಟದ ಅನಾಹುತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಕೊಡಗು ಮತ್ತು ಸಕಲೇಶಪುರ ಭಾಗದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಮಾಧ್ಯಮಗಳ ಜೊತೆ ಮಾತನಾಡಿ, ಬೆಳಗಾವಿ ಭಾಗದ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಆ ಭಾಗದಲ್ಲಿ ಸ್ವಲ್ಪ ಜಾಸ್ತಿ ಪ್ರವಾಹ ಬಂದಿದೆ. ಆದರೆ, ಅಲ್ಲಿಯ ಪರಿಸ್ಥಿತಿ ಹಾಸನದಲ್ಲಿ ಕೂಡ ನಿರ್ಮಾಣವಾಗಿದೆ ಎಂದರು.
-
ಬಳ್ಳಾರಿಯ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಬಿಟ್ಟ ಪರಿಣಾಮ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಯ ಸ್ಮಾರಕಗಳು ಜಲಾವೃತಗೊಂಡಿವೆ. ಹಂಪಿಯ ಎದುರು ಬಸವಣ್ಣ ಮಂಟಪದ ಬಳಿಯಿರುವ ಪೊಲೀಸ್ ಠಾಣೆಯೂ ಸೇರಿದಂತೆ ಸಾಲು ಮಂಟಪವೂ ಕೂಡ ಮುಳುಗಡೆ ಹಂತಕ್ಕೆ ತಲುಪಿದೆ.
11:44 August 12
- ಸಿಎಂ ಬಿಎಸ್ ಯಡಿಯೂರಪ್ಪ ಮಂಗಳೂರಿಗೆ ತಲುಪಿದ್ದಾರೆ. ಇನ್ನೇನು ಕೆಲವೇ ಕ್ಷಣದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.
11:42 August 12
ದೇವರ ನಾಡಿಗೆ ಈತನೇ ಪರಮಾತ್ಮ: ಮಾರಾಟಕ್ಕಿದ್ದ ಹೊಸ ಬಟ್ಟೆ ಪ್ರವಾಹ ಸಂತ್ರಸ್ತರಿಗೆ ದಾನ
- ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಹಲವಾರು ಮನೆಗಳು ಶಿಥಿಲಗೊಂಡು ನೆಲಕ್ಕುರುಳುತ್ತಿವೆ. ಚಿಕ್ಕಮಗಳೂರು ಭಾಗದಲ್ಲಿ 100 ಕ್ಕೂ ಹೆ್ಚ್ಚುಮನೆಗಳು ನೆಲಸಮವಾಗುತ್ತಿವೆ.
11:34 August 12
- ಪ್ರವಾಹ ಪೀಡಿತ ಜನರಿಗೆ ರಾಜ್ಯಾದ್ಯಂತ ಜನರು ಸ್ಪಂದನೆ ನೀಡುತ್ತಿದ್ದಾರೆ. ಇದಲ್ಲದೆ, ನಟರು, ರಾಜಕಾರಣಿಗಳು ವೈಯುಕ್ತಿಕವಾಗಿ ಸಹಾಯಹಸ್ತ ಚಾಚುತ್ತಿದ್ದಾರೆ. ನಿರಾಶ್ರಿತರಿಗೆ ಬೇಕಾಗಿರುವ ವಸ್ತುಗಳನ್ನು ನೀಡುವಲ್ಲಿ ಕರುನಾಡಿನ ಜನ ಮುಂದಾಗಿದ್ದಾರೆ.
-
ಕಲಬುರಗಿಯ ಭೀಮಾ ನದಿ ಪ್ರವಾಹದಲ್ಲಿ ರೈತ ಕೊಚ್ಚಿಕೊಂಡು ಹೋಗಿರುವ ಶಂಕೆ ಹಿನ್ನೆಲೆ ಇಂದು ಬೆಳಗ್ಗೆಯಿಂದ ಮತ್ತೆ ಹುಡುಕಾಟ ಆರಂಭವಾಗಿದೆ.
ಉತ್ತರಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ..
-
ಭಾನುವಾರ ಹಸುವಿನ ಮೈ ತೊಳೆಯಲು ಭೀಮಾ ನದಿ ತೀರಕ್ಕೆ ಬಂದಿದ್ದ ಬಸಣ್ಣ ದೊಡ್ಡಮನಿ ಎಂಬ ರೈತ, ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.
11:28 August 12
- ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಶಿಥಿಲಗೊಂಡ ಮನೆ ಕುಸಿದುಬಿದ್ದಿದೆ. ಮೂರುದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಜನರು ತತ್ತರಸಿಹೋಗಿದ್ದಾರೆ.
- ಹಾವೇರಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಕಡಿಮೆಯಾಗಿದೆ. ಜಿಲ್ಲೆಯ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳ ಹರಿವನಲ್ಲಿ ಸ್ವಲ್ಪ ಮಟ್ಟದ ಇಳಿಕೆ ಕಂಡಿದೆ. ಸತತ ಐದು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ.
- ಶಿರಸಿಯಲ್ಲಿ ಒಂದೆಡೆ ಮಳೆಯಾದರೆ, ಇನ್ನೊಂದೆಡೆ ಗುಡ್ಡ ಕುಸಿತದ ಭಯ ಉಂಟಾಗಿದೆ. ಈ ಹಿನ್ನೆಲೆ ರಸ್ತೆಗಳ ಮೇಲೆ ಗುಡ್ಡ ಕುಸಿಯುತ್ತಿದ್ದು, ಸಂಚಾರಕ್ಕೆ ಜನರು ಸಂಕಷ್ಟಪಡುತ್ತಿದ್ದಾರೆ.
-
ಆಗಸ್ಟ್ 16 ರಂದು ದೆಹಲಿಗೆ ತೆರಳುತ್ತಿದ್ದು, ರಾಜ್ಯದ ನೆರೆ ಹಾವಳಿ ಪರಿಹಾರ ಕಾರ್ಯಾಚರಣೆಗೆ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಗಳೂರಿಗೆ ತೆರಳಲು ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನೆರೆಪೀಡಿತ ಪ್ರದೇಶಗಳಾದ ಮಂಗಳೂರು, ಮೈಸೂರು, ನಂಜನಗೂಡಿನಲ್ಲಿ ಪ್ರವಾಸ ಮಾಡ್ತಿದ್ದೇನೆ ನಾಳೆ ಶಿವಮೊಗ್ಗ ಮತ್ತಿತರ ಕಡೆ ಪ್ರವಾಸ ಮಾಡುತ್ತೇನೆ ಎಂದರು.
11:21 August 12
- ಮಂಡ್ಯದ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ವರುಣ ತನ್ನ ಆರ್ಭಟ ಮುಂದುವರೆಸಿದ್ದಾನೆ. ಇಲ್ಲಿನ ದೇವಾಲಯಗಳು ನೀರಿನಲ್ಲಿ ಮುಳುಗಿವೆ. ಈ ಭಾಗದ ಜನರಿಗೆ ಇದು ಪ್ರಮುಖ ಧಾರ್ಮಿಕ ಸ್ಥಳವಾಗಿದ್ದು, ಪ್ರತಿದಿನ ಹಲವಾರು ಭಕ್ತರು ಬರುತ್ತಿದ್ದರು.
ಬೆಟ್ಟ ಕುಸಿದು ತಾಯಿ-ಮಗ ನಿಧನ... 3 ದಿನಗಳವಾದ್ರೂ ನಡೆಯದ ಅಂತ್ಯಕ್ರಿಯೆ!
10:59 August 12
-
ಕೊಡಗು ಜಿಲ್ಲೆಯಲ್ಲಿ ಒಂದು ದಿನ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಚುರುಕುಗೊಂಡಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಭಾನುವಾರ ಇಡೀ ದಿನ ಬಿಡುವು ಕೊಟ್ಟಿದ್ದ ವರುಣ ಇಂದು ಬೆಳಗ್ಗೆಯಿಂದಲೇ ಆರ್ಭಟಿಸುತ್ತಿದ್ದಾನೆ. ಒಂದು ದಿನ ಬಿಡುವು ಕೊಟ್ಟಿದ್ದರಿಂದ ಜಲಾವೃತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ವಾಹನಗಳ ಸಂಚಾರಕ್ಕೆ ರಸ್ತೆಗಳು ಮುಕ್ತವಾಗಿದ್ದವು. ಆದರೆ ಇಂದು ಮತ್ತೆ ಆರ್ಭಟ ಶುರುವಾಗಿದೆ. ಮತ್ತೊಂದೆಡೆ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಕಣ್ಮರೆ ಆಗಿದ್ದವರ ಹುಡುಕಾಟ ಭರದಿಂದ ಸಾಗಿದ್ದು, ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ.
10:55 August 12
-
ಶ್ರೀರಂಗಪಟ್ಟಣದಲ್ಲಿ ಪ್ರವಾಹದ ಮಧ್ಯೆ ಸಿಲುಕಿದ್ದ ಬಸ್ನಲ್ಲಿದ್ದ ಪ್ರಯಾಣಿಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
-
ಕಬಿನಿ, ಕೆಆರ್ಎಸ್ನಿಂದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನದಿ ಸಮೀಪದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಬೇರೆಡೆಗೆ ಕಳಿಸಲಾಗುತ್ತಿದೆ.
-
ಚಾಮರಾಜನಗರದ ಕೊಳ್ಳೇಗಾಲ ಭಾಗದಲ್ಲಿ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ತೆಪ್ಪಗಳ ಮೂಲಕ ಎನ್‌ಡಿಆರ್‌ಎಫ್ ತಂಡ ಜನರನ್ನು ರಕ್ಷಣೆ ಮಾಡುತ್ತಿದೆ.
-
ಕುಂದಾನಗರಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜಾನುವಾರುಗಳು ಕೊಚ್ಚಿ ಹೋಗಿದ್ದು, ಹಲವು ದೇವಸ್ಥಾನಗಳು ಜಲಾವೃತಗೊಂಡಿವೆ. ಘಟಪ್ರಭಾ ಜಲಾಶಯದಿಂದ ಬಿಡಲಾದ ನೀರಿನ ರಭಸಕ್ಕೆ ಗುಜನಾಳ ಗ್ರಾಮವೇ ಸಂಪೂರ್ಣ ಮುಳುಗಡೆ ಆಗಿದೆ. ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
10:49 August 12
- ಭಾರೀ ಮಳೆಗೆ ಜನರು ಮಾತ್ರವಲ್ಲ ಪ್ರಾಣಿ - ಪಕ್ಷಿಗಳು ನಲುಗಿಹೋಗಿವೆ. ಬೆಳಗಾವಿ ಜಿಲ್ಲೆಯ ಅಜಿತನಗರದಲ್ಲಿ ಮೊಸಳೆಯೊಂದು ಮನೆಯ ಛಾವಣಿ ಏರಿದೆ. ಭಾರೀ ಪ್ರವಾಹದ ಹಿನ್ನೆಲೆ ಮನೆ ಏರಿ ತನ್ನನ್ನು ತಾನು ರಕ್ಷಣೆ ಮಾಡಿಕೊಂಡಿದೆ. ಇದಿಷ್ಟೇ ಅಲ್ಲದೆ,ಈ ಭಾಗದಲ್ಲಿ ಹಾವು ಚೇಳು ಹಾಗೂ ವಿಷಜಂತುಗಳು ಮನೆಗಿಗೆ ನುಗ್ಗುತ್ತಿವೆ.
10:45 August 12
- ಮಂಡ್ಯದ ಕಾವೇರಿ ನದಿಗೆ ಅತೀ ಹೆಚ್ಚು ನೀರು ಬಿಟ್ಟ ಪರಿಣಾಮ ಕಾರಿನಲ್ಲಿ ಹೋಗುತ್ತಿದ್ದವರು ಪ್ರವಾಹಕ್ಕೆ ಸಲುಕಿದ್ದರು. ಈ ವೇಳೆ ಅಗ್ನಿಶಾಮಕ ದಳ ತಮ್ಮ ವಾಹನದ ಮುಖಾಂತರ ನೀರಿನಲ್ಲಿ ಸಿಲುಕಿಕೊಂಡಿದ್ದ ಕಾರ್ನ್ನು ಹೊರತಂದಿದ್ದಾರೆ.
- ಬಾಗಲಕೋಟೆಯಲ್ಲಿ ಕೃಷ್ಣ ನದಿ ಪ್ರವಾಹ ಇನ್ನೂ ಹೆ್ಚ್ಚಾಗಿದೆ. ಜನರು ತಮ್ಮ ರಕ್ಷಣೆಗಾಗಿ ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ.
-
ಬಳ್ಳಾರಿಯ ತುಂಗಾಭದ್ರಾ ಜಲಾಶಯದಿಂದ ಇಂದು ಸಂಜೆ ವೇಳೆಗೆ 3ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಇದರಿಂದ 10ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.
10:31 August 12
- ರಾಯಚೂರಿನ ಬಿಚ್ಚಾಲಿ ಗ್ರಾಮದ ಜಪದ ಕಟ್ಟೆ ಸಂಪೂರ್ಣ ಜಲಾವೃತವಾಗಿದೆ. ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಮಾಡಿದ ಹಿನ್ನೆಲೆ ನದಿ ತೀರದ ಪ್ರದೇಶಗಳೆಲ್ಲವೂ ಮುಳುಗಿಹೋಗುತ್ತಿವೆ.
10:24 August 12
-
ಯಾದಗಿರಿಯ ಕೃಷ್ಣ ನದಿಯ ಪ್ರವಾಹದಲ್ಲಿ ಕುದುರೆಯೊಂದು ಕೊಚ್ಚಿ ಹೋಗುತ್ತಿದ್ದ ದೃಶ್ಯ ಕಂಡ ಯುವಕರು ಸಮಯಪ್ರಜ್ಞೆಯಿಂದ ಸಾಹಸ ಮೆರೆದು, ಅದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
-
ಹಾಸನದಲ್ಲಿ ಕಳೆದ ಒಂದು ವಾರದಿಂದ ಸುರಿದ ಮಹಾಮಳೆಗೆ ತತ್ತರಿಸಿ ಹೋಗಿದ್ದ ಸಕಲೇಶಪುರ ಮತ್ತೆ ತನ್ನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೇಮಾವತಿ ಒಳಹರಿವು ಕೂಡಾ ಇಳಿಮುಖ ಕಂಡಿದ್ದು, ತಾಲ್ಲೂಕಿನ ಜನತೆಗೆ ಕೊಂಚ ನಿರಾಳತೆ ಮೂಡಿದೆ.
-
ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆ ಅಬ್ಬರ ಕಡಿಮೆಯಾಗಿದೆ. ನೇತ್ರಾವತಿ ನದಿಯ ನೀರಿನ ಮಟ್ಟ ಕಡಿಮೆಯಾಗಿದೆ. ಆದರೂ ಬೆಳ್ತಂಗಡಿಯ ಬಂಜಾರುಮಲೆ ಗ್ರಾಮದಲ್ಲಿ ಬೀಡು ಬಿಟ್ಟಿರುವ ಎನ್‌ಡಿಆರ್‌ಎಫ್ ತಂಡದ ಇನ್ಸ್‌ಪೆಕ್ಟರ್ ಸುಭಾಷ್ ಮಹಾಲಾ ತಮ್ಮ ತಂಡದೊಂದಿಗೆ ನೆರೆ ಸಂತ್ರಸ್ತರ ರಕ್ಷಣಾ ಕಾರ್ಯ ಹಾಗೂ ಅಗತ್ಯ ನೆರವು ನೀಡತೊಡಗಿದ್ದಾರೆ.
10:19 August 12
-
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ವ್ಯಕ್ತಿ ಮೃತಪಟ್ಟಿದ್ದಾರೆ.ತಿಪ್ಪಣ್ಣ ಉಮ್ಮಣ್ಣವರ (50) ಮೃತ ದುರ್ದೈವಿಯಾಗಿದ್ದು, ಹುಬ್ಬಳ್ಳಿಯ ಬೆಂಗೇರಿ ನಿವಾಸಿ ಎಂದು ತಿಳಿದು ಬಂದಿದೆ. ಕಪ್ಪತ್ತಗುಡ್ಡದ ಜಾತ್ರೆ ನಿಮಿತ್ತ ಡಂಬಳದಲ್ಲಿರುವ ಮಾವನ ಮನೆಗೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ.
-
ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ನೆರೆ ಪರಿಹಾರಕ್ಕಾಗಿ 2000 ಕೋಟಿ ರೂ.ಬೇಡಿಕೆಯನ್ನು ಇಡಲಾಗಿದೆ. ಅದಕ್ಕೆ ಅವರು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೇ, ಖುದ್ದಾಗಿ ಅಮಿತ್ ಶಾ ಅವರು ಬೆಳಗಾವಿ ಜಿಲ್ಲೆಯ ನೆರೆ ಹಾವಳಿಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ.
10:18 August 12
- ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚಿನ್ನಸೋಗೆ ಗ್ರಾಮದ ಮಹಿಳೆಯೋರ್ವರು ಭಾರೀ ಮಳೆಗೆ ಬಲಿಯಾಗಿದ್ದಾರೆ. ದಾರಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಜಾರಿ ಬಿದ್ದು ಪಕ್ಕದಲ್ಲೇ ಹರಿಯುತ್ತಿದ್ದ ಲಕ್ಷ್ಮಣ ತೀರ್ಥ ನದಿಗೆ ಬಿದ್ದಿದ್ದಾರೆ.
- ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ದಿನವಷ್ಟೇ ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದ ಕಪಿಲಾ ನದಿಗೆ ಈಜಲು ಹಾರಿ ವ್ಯಕ್ತಿ ಕಣ್ಮರೆ ಆಗಿದ್ದರು.
10:11 August 12
- ಶಿವಮೊಗ್ಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮನೆಗಳು ಕುಸಿಯುತ್ತಿವೆ. ಈ ಹಿನ್ನೆಲೆ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ದಿಕ್ಕು ತೋಚದಂತಾಗಿದ್ದಾರೆ.
10:07 August 12
- ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ಸಮೀಪದ ತುಂಬಸೋಗೆ ಸೇತುವೆಗೆ ಹಾನಿಯಾಗಿದೆ. ಸೇತುವೆ ಮೇಲಿನ ತಡೆಗೋಡೆ ಹಾನಿಯಾಗಿದೆ. ಸರಗೂರಿಗೆ ಹೋಗುವ ಪ್ರಮುಖ ಸೇತುವೆ ಇದಾಗಿದ್ದು, ಭಾರೀ ನೀರಿನ ಹರಿವಿಗೆ ಸೇತುವೆ ಹಾನಿಗೊಳಗಾಗಿದೆ.
- ಕಬಿನಿ ಜಲಾಶಯದಿಂದ ನೀರನ್ನು ಬಿಟ್ಟ ಹಿನ್ನೆಲೆ ಹಲವಾರು ಸೇತುವೆಗಳು ಈ ಭಾಗದಲ್ಲಿ ಮುಳುಗಡೆಯಾಗಿವೆ.
10:02 August 12
- ಸಿಎಂ ಬಿಎಸ್ ಯಡಿಯೂರಪ್ಪ ಇಂದು ಮಂಗಳೂರಿಗೆ ತೆರಳಿ ಪ್ರವಾಹಕ್ಕೆ ಒಳಗಾದ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
- ಇಂದು 11 ಗಂಟೆಗೆ ಮಂಗಳೂರಿಗೆ ತೆರಳಿ ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಪ್ರವಾಹದ ಬಗ್ಗೆ ಮಾಹಿತಿ ಪಡೆಲಿದ್ದಾರೆ.
09:58 August 12
-
Karnataka floods: Since 1st August 2019, 40 people have lost their lives, 14 missing, 5,81,702 people evacuated, 1168 no. of relief camps operational and 17 districts and 2028 villages affected. pic.twitter.com/3ti7kaDjsG
— ANI (@ANI) August 12, 2019 " class="align-text-top noRightClick twitterSection" data="
">Karnataka floods: Since 1st August 2019, 40 people have lost their lives, 14 missing, 5,81,702 people evacuated, 1168 no. of relief camps operational and 17 districts and 2028 villages affected. pic.twitter.com/3ti7kaDjsG
— ANI (@ANI) August 12, 2019Karnataka floods: Since 1st August 2019, 40 people have lost their lives, 14 missing, 5,81,702 people evacuated, 1168 no. of relief camps operational and 17 districts and 2028 villages affected. pic.twitter.com/3ti7kaDjsG
— ANI (@ANI) August 12, 2019
-
ರಾಯಚೂರಿನಲ್ಲಿ ಕೃಷ್ಣೆ ಪ್ರವಾಹ ಒಂದೆಡೆಯಾದ್ರೆ ಇದೀಗ ತುಂಗಭದ್ರೆಯ ಸರದಿ. ಮಲೆನಾಡ ಮಳೆಗೆ ತುಂಗಭದ್ರ ಡ್ಯಾಂ ಭರ್ತಿಯಾದ ಹಿನ್ನಲೆ 3 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲೂಕಿನಲ್ಲಿ ಪ್ರವಾಹ ಬೀತಿ ಎದುರಾಗಿದೆ.
09:40 August 12
-
Karnataka floods: Since 1st August 2019, 40 people have lost their lives and 14 people are missing, due to floods in the state. (file pic). pic.twitter.com/DSshGZenYS

">Karnataka floods: Since 1st August 2019, 40 people have lost their lives and 14 people are missing, due to floods in the state. (file pic). pic.twitter.com/DSshGZenYS
— ANI (@ANI) August 12, 2019Karnataka floods: Since 1st August 2019, 40 people have lost their lives and 14 people are missing, due to floods in the state. (file pic). pic.twitter.com/DSshGZenYS
— ANI (@ANI) August 12, 2019
ರಾಜ್ಯದಲ್ಲಿ ವರುಣ ಭಾರೀ ಅವಾಂತರ ಸೃಷ್ಟಿ ಮಾಡಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಒಂದೆಡೆ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಗಳ ಮೃತದೇಹ ಕಂಡು ಬರುತ್ತಿದ್ದರೆ. ಶಿಥಿಲಗೊಂಡ ಮನೆಗಳು ಇದ್ದಕ್ಕಿಂದಂತೆ ಕುಸಿಯುತ್ತಿವೆ.
09:13 August 12
ಹೆಲಿಕಾಪ್ಟರ್ ಮುಖಾಂತರ ರಕ್ಷಣಾ ಕಾರ್ಯ

rain live 4
Conclusion: