ETV Bharat / city

ಲಾಕ್​ಡೌನ್ ನಡುವೆಯೂ ಬಿಲ್ ಪಾವತಿಸಿಲ್ಲವೆಂದ್ರೆ ವಿದ್ಯುತ್ ಸಂಪರ್ಕ ಕಟ್​: ಎಫ್​ಕೆಸಿಸಿಐ ಅಧ್ಯಕ್ಷರ ಆಕ್ಷೇಪ - ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ಧನ

ರಾಜ್ಯ ವಿದ್ಯುತ್ ಪ್ರಸರಣ ನಿಗಮವು ಈಗಾಗಲೇ ಕರೆಂಟ್​ ಬಿಲ್ ಪಾವತಿಸದವರ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆಯನ್ನು ನೀಡಿದೆ. ಈ ನಡೆಗೆ ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ಧನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಸಂಪರ್ಕ ಕಡಿತ ಕುರಿತು ಬೇಸರ ವ್ಯಕ್ತಪಡಿಸಿದ ಎಫ್​ಕೆಸಿಸಿಐ ಅಧ್ಯಕ್ಷ

author img

By

Published : Apr 17, 2020, 6:30 PM IST

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ವಿದ್ಯುತ್ ಬಿಲ್ ಪಾವತಿ ಮಾಡದವರಿಗೆ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆಯನ್ನು ರಾಜ್ಯ ವಿದ್ಯುತ್ ಪ್ರಸರಣ ನಿಗಮವು ನೀಡುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲವೆಂದು ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ಧನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಸಂಪರ್ಕ ಕಡಿತ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಎಫ್​ಕೆಸಿಸಿಐ ಅಧ್ಯಕ್ಷ

ಈಗಾಗಲೇ ಕೈಗಾರಿಕೆಗಳು ನಷ್ಟದಲ್ಲಿದ್ದು, ಕಾರ್ಮಿಕರ ಸಂಬಳ, ಸಾಲಕ್ಕೆ ಬಡ್ಡಿ, ಕಚೇರಿಗಳ ಬಾಡಿಗೆಯನ್ನು ನೀಡಬೇಕಿದೆ. ಇದರ ಮೇಲೆ ವಿದ್ಯುತ್ ಹಣ ಪಾವತಿ ಕಡ್ಡಾಯಗೊಳಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ದೇಶದ ಹಲವು ರಾಜ್ಯಗಳಲ್ಲಿ 3 ತಿಂಗಳ ನಂತರ ವಿದ್ಯುತ್ ದರ ಪಾವತಿಗೆ ರಿಯಾಯಿತಿ ನೀಡಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಸಹ ಈ ರೀತಿಯ ನಿಯಮ ಜಾರಿಯಾಗಬೇಕಿದೆ. ಈ ಸಂದರ್ಭದಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಕೈ ಹಿಡಿಯಬೇಕು ಎಂದು ಎಫ್​ಕೆಸಿಸಿಐ ಅಧ್ಯಕ್ಷರು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.