ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಸುಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ, ರಘು, ಲೊಕೇಶ್, ಬಸವರಾಜ ಹಾಗೂ ರಾಘವೇಂದ್ರ ಬಂಧಿತರು.

ಈ ಆರೋಪಿಗಳು ನಗರದ ರಸ್ತೆಗಳಲ್ಲಿ ಓಡಾಡಿಕೊಂಡು ಇರುತ್ತಿದ್ದ ಹಸುಗಳನ್ನೇ ಗುರಿಯಾಗಿಸಿಕೊಂಡು ಟೆಂಪೋಗೆ ಹಾಕಿಕೊಂಡು ಕೇರಳ ಮೂಲದವರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು ಎನ್ನಲಾಗಿದೆ.
ತಿಂಗಳ ಹಿಂದೆ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಚಂದ್ರು ಎಂಬುವರು ಐದು ಗೋವುಗಳನ್ನು ಕಳ್ಳತನ ಮಾಡಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಚಂದ್ರ ಪ್ರಕರಣ ದಾಖಲಿಸಿದ್ದರು. ಈ ದೂರಿನನ್ವಯ ಕುಣಿಗಲ್ ಬಳಿ ಈ ಹಸುಗಳನ್ನು ಮಾರುತ್ತಿದ್ದಾಗ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.